ಅಸಹಾಯಕ ಮಹಿಳೆಗೆ ವಾತ್ಸಲ್ಯ ಮನೆ ಹಸ್ತಾಂತರ

KannadaprabhaNewsNetwork |  
Published : Feb 27, 2026, 01:30 AM IST
ಫೆÇೀಟೋ 9 : ಸೋಂಪುರ ಹೋಬಳಿಯ ಅಗಳಕುಪ್ಪೆ ಗ್ರಾ.ಪಂ.ವ್ಯಾಪ್ತಿಯ ಕಸಬಾ ನಿಜಗಲ್ ಗ್ರಾಮದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ, 724 ನೇ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಸಿಇಓ ಶ್ರದ್ದಾ ಅಮಿತ್, ಫಲಾನುಭವಿ ಶಾಂತಮ್ಮ ಸೇರಿ ಉದ್ಘಾಟಿಸಿದರು. | Kannada Prabha

ಸಾರಾಂಶ

ದಾಬಸ್‍ಪೇಟೆ: ವಯೋವೃದ್ದ ಒಂಟಿ ಮಹಿಳೆಯರಿಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ವಾತ್ಸಲ್ಯ ಯೋಜನೆ ಬಹಳಷ್ಟು ಸಹಕಾರಿಯಾಗಿದೆ, ಅಸಹಾಯಕರಿಗೆ ನಮ್ಮ ಸಂಸ್ಥೆ ಸದಾಕಾಲ ನೆರವಾಗಲಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು

ದಾಬಸ್‍ಪೇಟೆ: ವಯೋವೃದ್ದ ಒಂಟಿ ಮಹಿಳೆಯರಿಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ವಾತ್ಸಲ್ಯ ಯೋಜನೆ ಬಹಳಷ್ಟು ಸಹಕಾರಿಯಾಗಿದೆ, ಅಸಹಾಯಕರಿಗೆ ನಮ್ಮ ಸಂಸ್ಥೆ ಸದಾಕಾಲ ನೆರವಾಗಲಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಸೋಂಪುರ ಹೋಬಳಿಯ ಅಗಳಕುಪ್ಪೆ ಗ್ರಾಪಂ ವ್ಯಾಪ್ತಿಯ ಕಸಬಾ ನಿಜಗಲ್ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 724ನೇ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,

ವಾತ್ಸಲ್ಯ ಮನೆ ಫಲಾನುಭವಿ ಜಯಮ್ಮ ಅವರನ್ನು ನಮ್ಮ ಸಂಸ್ಥೆ ಗುರುತಿಸಿದೆ. ಈ ಹಿನ್ನೆಲೆಯಲ್ಲಿ ಗ್ರಾಮಾಭಿವೃದ್ದಿ ಸಂಘದ ಸಿಇಒ ಶ್ರದ್ಧಾ ಅಮಿತ್ ಹಾಗೂ ಸಂಸ್ಥೆ ಸೇರಿ ಅವರಿಗೆ ಮನೆ ನಿರ್ಮಿಸಿಕೊಟ್ಟು ಹಸ್ತಾಂತರಿಸಿದ್ದೇವೆ. ಯೋಜನೆಯಲ್ಲಿ ಕುಟುಂಬದಿಂದ ದೂರವಾದ ಒಂಟಿ ಮಹಿಳೆಯರಿಗೆ ಇಡೀ ಕುಟುಂಬ ಮತ್ತು ಮಕ್ಕಳು ದೂರ ಮಾಡಿರುತ್ತಾರೋ ಅವರನ್ನು ಗುರುತಿಸಿ ವಾತ್ಸಲ್ಯ ಮನೆ, ಪ್ರತಿ ತಿಂಗಳು ಆಹಾರ ಧಾನ್ಯದ ಕಿಟ್, ಪ್ರತಿ ತಿಂಗಳು ಪಿಂಚಣಿ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ನಿರ್ಗತಿಕ ಮಹಿಳೆಯರಿಗೆ ನೆರವಾಗುವುದು ನನ್ನ ಪತ್ನಿ ಮತ್ತು ಪುತ್ರಿಯ ಕನಸಾಗಿತ್ತು. ಈಗಾಗಲೇ ರಾಜ್ಯಾದ್ಯಂತ 670 ಮನೆಗಳನ್ನು ನಿರ್ಮಾಣ ಮಾಡಿ ಹಸ್ತಾಂತರ ಮಾಡಲಾಗಿದೆ ಎಂದು ಹೇಳಿದರು.

ಶುಭ ಕಾರ್ಯದಲ್ಲಿ ಕೆಲ ತಿಂಗಳ ಹಿಂದೆ ನಡೆದ ಧರ್ಮಸ್ಥಳದ ಘಟನೆಯನ್ನು ಮತ್ತೊಮ್ಮೆ ನೆನೆಯುವುದು ಬೇಡ, ಸತ್ಯಕ್ಕೆ ಯಾವತ್ತೂ ಜಯವಾಗಲಿದೆ. ನಾಡಿನ ಜನತೆ ಧರ್ಮಸ್ಥಳದ ಪರ ನಿಂತು ಧರ್ಮಸ್ಥಳ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿದ ನೆಲಮಂಗಲ ತಾಲೂಕಿನ ಎಲ್ಲಾ ಜನತೆಗೂ ಅಭಿನಂದನೆಗಳು ಎಂದು ಧರ್ಮಾಧಿಕಾರಿಗಳು ತಿಳಿಸಿದರು.

ಯೋಜನೆಯ ಜಿಲ್ಲಾ ನಿರ್ದೇಶಕ ಉಮರಬ್ಬ ಮಾತನಾಡಿ, ರಾಜ್ಯಾದ್ಯಂತ 20 ಸಾವಿರ ನಿರ್ಗತಿಕ ಮಹಿಳೆಯರಿಗೆ ಈ ವಾತ್ಸಲ್ಯ ಯೋಜನೆಯಿಂದ ಮಾಸಾಶನ ನೀಡುತ್ತಿದ್ದೇವೆ. ಮಾಸಾಶನ ಪಡೆಯುತ್ತಿರುವ ಮಹಿಳೆಯರು, ತೀರ ನಿರ್ಗತಿಕರಿಗೆ ಮನೆ ವಿತರಿಸುತ್ತಿದ್ದು, ಬೆಂ.ಗ್ರಾ. ಜಿಲ್ಲೆಯಲ್ಲಿ 33 ಮನೆ ನೀಡಲಾಗಿದೆ. ನೆಲಮಂಗಲದಲ್ಲಿ 3 ಮನೆಗಳನ್ನು ನೀಡಿದ್ದೇವೆ, ಜೆಲ್ಲಾ ವಾತ್ಸಲ್ಯ ಯೋಜನೆಗೆ ಒಂದು ಕೋಟಿ ಅನುದಾನ ನೀಡಿದ್ದಾರೆ. ಇನ್ನಷ್ಟೂ ಈ ಯೋಜನೆಯಿಂದ ಮನೆ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಧರ್ಮಸ್ಥಳ ಸಂಘದ ಪ್ರಾದೇಶಿಕ ನಿರ್ದೇಶಕ ಶ್ರೀನಪ್ಪ, ತಾಲೂಕು ಯೋಜನಾಧಿಕಾರಿ ಸುಜಾತ ಶೆಟ್ಟಿ, ಜ್ಞಾನ ವಿಕಾಸ ಸಮಿತಿ ಯೋಜನಾಧಿಕಾರಿ ಸಂಗೀತಾ, ಸಮನ್ವಯಾಧಿಕಾರಿ ಜ್ಯೋತಿಶೆಟ್ಟಿ, ಅಗಳಕುಪ್ಪೆ ಗ್ರಾಪಂ ಮಾಜಿ ಅಧ್ಯಕ್ಷರಾದ ಸಿದ್ದರಾಜು, ಹೊನ್ನೇನಹಳ್ಳಿ, ಸುರೇಶ್, ಎನ್‌ಪಿಎ ನಿರ್ದೇಶಕ ಅಂಚೆಮನೆ ಪ್ರಕಾಶ್, ಸೋಂಪುರ ಹೋಬಳಿ ವಲಯ ಸಮನ್ವಯಾಧಿಕಾರಿ ಹರೀಶ್, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ವೇದಾವತಿ, ವಲಯ ಘಟಕದ ಅಧ್ಯಕ್ಷೆ ಧನಲಕ್ಷ್ಮೀ, ವಲಯ ಪ್ರತಿನಿಧಿಗಳು, ಶೌರ್ಯ ವಿಪತ್ತು ಪಡೆಯ ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು, ಮುಖಂಡರಾದ ಪದ್ಮನಾಭ್, ಪಾರ್ಥಣ್ಣ, ಚಿಕ್ಕಣ್ಣ ಇತರರಿದ್ದರು.

ಕೋಟ್:

ನಾನು ನೆಲೆಸಿದ್ದ ಮನೆ ತುಂಬಾ ಹಳೆಯದಾಗಿತ್ತು, ನಾನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಲ್ಲಿದ್ದೇನೆ. ನನ್ನ ಕುಟುಂಬದವರು ನನಗೆ ಯಾರು ಸಹಾಯ ಮಾಡಲಿಲ್ಲ. ಧರ್ಮಸ್ಥಳ ಸಂಸ್ಥೆಯವರು ನನ್ನ ಅಸಹಾಯಕತೆಯನ್ನು ಗುರುತಿಸಿ ವಾತ್ಸಲ್ಯ ಮನೆ ನೀಡಿರುವುದು ಅತೀವ ಸಂತಸವಾಗಿದೆ.

-ಶಾಂತಮ್ಮ, ವಾತ್ಸಲ್ಯ ಫಲಾನುಭವಿ

ಫೆÇೀಟೋ 9 : ಸೋಂಪುರ ಹೋಬಳಿಯ ಅಗಳಕುಪ್ಪೆ ಗ್ರಾಪಂ ವ್ಯಾಪ್ತಿಯ ಕಸಬಾ ನಿಜಗಲ್ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 724ನೇ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಿದರು. ಸಿಇಒ ಶ್ರದ್ದಾ ಅಮಿತ್, ಫಲಾನುಭವಿ ಶಾಂತಮ್ಮಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡ ಕಾಮಗಾರಿಗೆ ಭೂಮಿಪೂಜೆ
ಜಿಲ್ಲೆಯ ರೈಲ್ವೆ, ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ವಿ,ಸೋಮಣ್ಣ