ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
200ನೇ ವಿಜಯೋತ್ಸವ ನಿಮಿತ್ತ ಕಿತ್ತೂರು ಪೊಲೀಸ್ ವೃತ್ತ ನಿರೀಕ್ಷಕರಿಗೆ ವಾಹನ ಹಸ್ತಾಂತರ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದ ಅವರು, ಇಂದಿನ ಕಾಲದಲ್ಲಿ ದುಷ್ಕರ್ಮಿಗಳು ಜನರಿಗೆ ಮೋಸ ಮಾಡಲು ಹಾಗೂ ಜನರ ಮೇಲೆ ದೌರ್ಜನ್ಯವೆಸಗಲು ಎಲ್ಲ ವಾಮಮಾರ್ಗ ಅನುಸರಿಸುತ್ತಿದ್ದಾರೆ, ಅಲ್ಲದೆ ನೂತನ ವಾಹನ ಬಳಸಿ ಇಲ್ಲವೆ ಯೋಜನೆ ರೂಪಿಸಿ ಸಾರ್ವಜನಿಕರನ್ನು ಬಲಿಪಶು ಮಾಡಲು ಎಲ್ಲ ವ್ಯವಸ್ಥೆಯಲ್ಲಿ ಇರುತ್ತಾರೆ. ಇಂತಹ ದುಷ್ಟ ಶಕ್ತಿಗಳನ್ನು ಮಟ್ಟಹಾಕಲು ಪೊಲೀಸ್ ಇಲಾಖೆ ಸಿದ್ಧವಿದೆ. ಅವರಿಗೆ ಇನ್ನೂ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹೊಸ ವಾಹನ ಸೇರಿದಂತೆ ನೂತನವಾಗಿರುವ ಎಲ್ಲ ಸೌಕರ್ಯ ಒದಗಿಸಿದಲ್ಲಿ ಚಾಪೆ ಕೆಳಗಡೆ ತೂರುವ ಕಳ್ಳರನ್ನು, ರಂಗೊಲಿ ಕೆಳಗೆ ತೂರಿ ಅವರ ಹೆಡೆಮುರಿ ಕಟ್ಟುವ ಕಾರ್ಯ ಪೊಲೀಸ್ ಇಲಾಖೆ ಮಾಡುತ್ತದೆ ಎಂದು ಹೇಳಿದರು.
ಹೆಚ್ಚುವರಿ ಎಸ್ಪಿ ಆರ್.ಬಿ. ಬಸರಗಿ, ಕಿತ್ತೂರು ಸಿಪಿಐ ಶಿವಾನಂದ ಗುಡುಗನಟ್ಟಿ, ಪಿಎಸೈ ಪ್ರವೀಣ ಗಂಗೋಳ, ಪ್ರವೀಣ ಕೋಟಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು, ಡಿವೈಎಸ್ಪಿ ರವಿ ನಾಯ್ಕ ಸ್ವಾಗತಿಸಿ ವಂದಿಸಿದರು.