ಚನ್ನರಾಯಪಟ್ಟಣದ ಮಂಚೇನಹಳ್ಳಿ ಗ್ರಾಮದ ಬಾಲಕಿ । ತಾಯಿ ನಂದಿನಿ ಹರ್ಷ
ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಮಂಚೇನಹಳ್ಳಿಯ ಎರಡುವರೆ ವರ್ಷದ ಹಂಸಿನಿಗೌಡ ಚಿಕ್ಕವಯಸ್ಸಿನಲ್ಲಿಯೇ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಪಡೆದಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ತಾಯಿ ನಂದಿನಿ ಮೋಹನ್, ‘ನಮ್ಮ ಮಗಳು ಮುಂದೆ ವಿಶ್ವ ದಾಖಲೆಯತ್ತ ಹೆಜ್ಜೆ ಇಡುತ್ತಾಳೆ’ ಎಂದು ಹರ್ಷ ವ್ಯಕ್ತಪಡಿಸಿದರು. ‘2021ರ ಅಕ್ಟೋಬರ್ 27 ರಂದು ಜನಿಸಿರುವ ನನ್ನ ಮಗಳು ಹಂಸಿನಿಗೌಡ ಎರಡುವರೆ ವರ್ಷಕ್ಕೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಪಡೆದಿದ್ದು, ಕನ್ನಡ ವರ್ಣಾಮಾಲೆಯಲ್ಲಿ 49 ಅಕ್ಷರವನ್ನು ಹೇಳಲಿದ್ದು, ಇಂಗ್ಲೀಷ್ ವರ್ಣ ಮಾಲೆಯಲ್ಲಿ 26 ಅಕ್ಷರವನ್ನು ಉದಾಹರಣೆ ಸಹಿತವಾಗಿ ಹೇಳುತ್ತಾಳೆ. 1 ರಿಂದ 20 ಅಂಕಿಯನ್ನು ಮೂರು ಭಾಷೆಯಲ್ಲಿ ಹೇಳಲಿದ್ದು, 20 ವಾಹನ, 269 ಚಿತ್ರಗಳನ್ನು ಗುರುತು ಮಾಡಲಿದ್ದು, 10 ನ್ಯಾಷನಲ್ ಸಿಂಬಲ್ಸ್, ಕರ್ನಾಟಕದ 8 ಕವಿಗಳು, 12 ಭಾರತೀಯ ಐತಿಹಾಸಿಕ ಸ್ಥಳಗಳು, ದೇಹದ 25 ಭಾಗಗಳು, 12 ರಾಷ್ಟ್ರೀಯ ಚಿಹ್ನೆಗಳು, ವಾರಗಳು, ತಿಂಗಳುಗಳನ್ನು ಹೇಳುತ್ತಾಳೆ’ ಎಂದು ಹೇಳಿದರು.
ಹಂಸಿನಿಗೌಡ, ಬಾಲಕಿಯ ತಂದೆ ಮೋಹನ್, ಕುಟುಂಬ ಸದಸ್ಯರಾದ ಮೋಹನ್ ತಂದೆ ದೇವಸ್ವಾಮಿ, ಮಂಜುಳ, ಸೌಮ್ಯ ಇತರರು ಹಾಜರಿದ್ದರು.