ವಿಶೇಷ ವರದಿ
ಕಲಬುರಗಿಯಲ್ಲಿ ನೀರಿಲ್ಲ, ಮರಗಳಿಲ್ಲ ಅನ್ನೋ ಮಾತಿಗೆ ಅಪವಾದ ಎಂಬಂತೆ ಜಿಲ್ಲೆಯ ಆಳಂದ ಪಟ್ಟಣದಿಂದ 8 ಕಿ.ಮೀ ದೂರದ ಕೋರಳ್ಳಿ ಮಾರ್ಗದಲ್ಲಿ ಪಾತರಗಿತ್ತಿ (ಚಿಟ್ಟೆ) ಉದ್ಯಾವನ ತಲೆ ಎತ್ತಿದೆ.
ವಲಯ ಪ್ರಾದೇಶಿಕ ಅರಣ್ಯ ಇಲಾಖೆಯ ಸಾಲುಮರದ ತಿಮ್ಮಕ್ಕನ ವೃಕ್ಷೋದ್ಯಾನದಲ್ಲಿ ಅಪರೂಪದ ಚೆಟ್ಟೆಪಾರ್ಕ್ (ಪಾತರಗಿತ್ತಿ) ಸಿದ್ಧಗೊಂಡಿದ್ದು ಕಲ್ಯಾಣ ಕರ್ನಾಟಕದಲ್ಲೇ ಮೊದಸ ಪಾರ್ಕ್ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.ಚಿಟ್ಟೆಗಳನ್ನು ಆಕರ್ಷಿಸೋದರ ಜೊತೆಗೇ ಇಲ್ಲಿ ಔಷಧಿಯ ಸಸ್ಯ ಉದ್ಯಾನವನವೂ ಸಿದ್ದವಾಗಿದ್ದು ಇದರಿದಂ ಬರುವ ದಿನಗಳಲ್ಲಿ ಜನಮನಲ್ಲಿ ಔಷಧಿ ಸಸ್ಯಗಳ ಬಗ್ಗೆಯೂ ಪ್ರೀತಿ, ಕಾಳಜಿ ಮೂಡಿಸುವ ಯತ್ನ ಸಾಗಲಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲೇ ವಿಶೇಷ ಎನ್ನುವಂತೆ ತಾಲೂಕಿನ ಈ ಚಿಟ್ಟೆ ಪಾರ್ಕ್ ಪ್ರಮುಖ ಆಕರ್ಷಣೆಯಾಗಲಿದೆ.. ಇಲ್ಲಿ ಚಿಟ್ಟೆಗಳ ವಿವಿಧ ಬಗೆಯುಗಳನ್ನು ಕಾಣಬಹುದು. ಚಿಟ್ಟೆಗಳ ಪ್ರಪಂಚದೊಳಕ್ಕೆ ಪ್ರವಾಸಿಗರನ್ನು ತಂದು, ಅದವರ ಜೀವನಚಕ್ರ, ಆಹಾರಪದಾರ್ಥಗಳು ಮತ್ತು ಪರಿಸರದಲ್ಲಿ ಚಿಟ್ಟೆಗಳ ಪಾತ್ರದ ಕುರಿತು ಮಾಹಿತಿ ಇಲ್ಲಿ ಲಭ್ಯವಾಗಲಿದೆ.
ಔಷಧೀಯ ಸಸ್ಯಗಳ ಉದ್ಯಾನವನ: 1 ಹೆಕ್ಟೇರ್ ಮೀಸಲು ಕ್ಷೇತ್ರದಲ್ಲಿ ರಾಷ್ಟ್ರೀಯ ಔಷಧಿಯ ಸಸ್ಯಗಳ ಮಂಡಳಿ (ಎನ್.ಎಂ.ಪಿ.ಬಿ), ಅನುದಾನದಲ್ಲಿ ಸಾರ್ವಜನಿಕ ಔಷಧಿಯ ಸಸ್ಯಗಳ ಉದ್ಯಾನವ ಕೈಗೊಳ್ಳಲಾಗಿದೆ. ಹಲವಾರು ಔಷಧೀಯ ಗಿಡಗಳನ್ನು ಬೆಳೆಸಲಾಗಿದೆ, ಉದಾಹರಣೆಗೆ ತುಳಸಿ, ನೀಲಿ ನಿಂಬೆ, ಅಶ್ವಗಂಧಾ, ಮತ್ತು ಮರಿಗೊಯ ಸೇರಿ ಹಲವು ರೀತಿಯ ಈ ಗಿಡಗಳು ತಮ್ಮ ಔಷಧೀಯ ಗುಣಗಳಿಂದ ಪ್ರಸಿದ್ಧವಾಗಿದ್ದು, ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತವೆ. ಉದ್ಯಾನವನದಲ್ಲಿ ಪ್ರತಿ ಗಿಡದ ಪಕ್ಕದಲ್ಲಿ ಅದರ ವಿಜ್ಞಾನನಾಮ, ಉಪಯೋಗಗಳು ಮತ್ತು ಅದರ ಅರೋಗ್ಯಕ್ಕೆ ನೀಡುವ ಲಾಭದ ಕುರಿತು ಮಾಹಿತಿ ಫಲಕಗಳನ್ನು ಅಳವಡಿಸಲಾಗಿದೆ.
ವೃಕ್ಷೋದ್ಯಾನಕ್ಕೆ ಸೌಲಭ್ಯ:
------
- ಈರಣ್ಣಾ ಧಂಗಾಪೂರ, ಕರವೇ ತಾಲೂಕು ಅಧ್ಯಕ್ಷ ಆಳಂದ.
ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಭಾಗದಲ್ಲೇ ವಿಶೇಷ ಎನ್ನುವಂತೆ ಚಿಟ್ಟೆಪಾರ್ಕ್ ನಿರ್ಮಿಸಲಾಗಿದೆ. ಇಲ್ಲಿ ಬಣ್ಣ ಬಣ್ಣದ ಚಿಟ್ಟೆಗಳ ಲೋಕ ಸೃಷ್ಟಿಯಾಗಿದೆ. ಜೊತೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ನೂರಾರು ಜಾತಿಯ ಔಷಧಿಯ ಸಸ್ಯ ಒಳಗೊಂಡ ಉದ್ಯಾನವನ್ನ ಕೈಗೊಂಡಿದ್ದು ಇದರಿಂದ ಉದ್ಯಾನವನದ ಗರಿಹೆಚ್ಚಾಗಿ ಪ್ರವಾಸಿಗರನ್ನು ಆಕರ್ಶಿತವನ್ನಾಗಿ ಮತ್ತು ಅವರಿಗೆ ಅನುಕೂಲ ಕಲ್ಪಿಸುವ ಉದ್ದೇಶ ಇದಾಗಿದೆ.
- ಜಗನಾಥ ಕೊರಳ್ಳಿ, ಆರ್‌ಎಫ್‍ಒ ಆಳಂದ.