ಹನುಮ ಎಂದರೆ ನಿಜವಾದ ಶಕ್ತಿ, ಭಕ್ತಿ : ಅನಂತರಾಮ್‌ ಗೌತಮ್

KannadaprabhaNewsNetwork | Published : Dec 14, 2024 12:45 AM

ಸಾರಾಂಶ

ಚಳ್ಳಕೆರೆ: ನಗರದ ನಾಯಕನಹಟ್ಟಿ ರಸ್ತೆಯ ಶ್ರೀಕರೇಕಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಹನುಮ ಜಯಂತಿಯನ್ನು ಭಕ್ತಿ, ಶ್ರದ್ಧೆಯಿಂದ ಆಚರಿಸಲಾಯಿತು.

ಚಳ್ಳಕೆರೆ: ನಗರದ ನಾಯಕನಹಟ್ಟಿ ರಸ್ತೆಯ ಶ್ರೀಕರೇಕಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಹನುಮ ಜಯಂತಿಯನ್ನು ಭಕ್ತಿ, ಶ್ರದ್ಧೆಯಿಂದ ಆಚರಿಸಲಾಯಿತು.

ಬೆಳಗಿನಿಂದಲೇ ಶ್ರೀಸ್ವಾಮಿಗೆ ಅಭಿಷೇಕ, ಪೂಜಾ ಕಾರ್ಯಕ್ರಮ ನಡೆದವು. ಈ ಬಾರಿಯ ವಿಶೇಷವೆಂದರೆ ತಿರುಪತಿಯ ಶ್ರೀನಿವಾಸದ ಆಕೃತಿಯಲ್ಲಿ ಶ್ರೀ ಹನುಮ ಮೂರ್ತಿಯನ್ನು ಹೂಗಳಿಂದ ಅಲಂಕರಿಸಲಾಗಿತ್ತು.

ಪೂಜಾ ಕಾರ್ಯಕ್ರಮದ ಬಳಿಕ ಹನುಮಜಯಂತಿ ಬಗ್ಗೆ ಮಾತನಾಡಿದ ಡಾ.ಅನಂತರಾಮ್‌ ಗೌತಮ್, ಶ್ರೀರಾಮನ ಬಂಟ ಹನುಮಂತ ಎಲ್ಲರಿಗೂ ಇಷ್ಟ, ಎಲ್ಲರೂ ಭಕ್ತಿಯಿಂದ ಪೂಜಿಸುತ್ತಾರೆ. ಗಣೇಶನಂತೆ ಹನುಮನು ಸಹ ಎಲ್ಲರ ಮನದಲ್ಲಿ ತುಂಬಿದ್ದಾನೆ. ಹನುಮಜಯಂತಿ ಆಚರಣೆಯಿಂದ ಎಲ್ಲರಲ್ಲೂ ಹೊಸ ಉತ್ಸಾಹ ಉಂಟಾಗುತ್ತದೆ. ಹನುಮ ಭಕ್ತಿ, ಶ್ರದ್ಧೆಯ ಪ್ರತೀಕ ಎಂದು ತಿಳಿಸಿದರು.

ಅರ್ಚಕ, ವೇದಬ್ರಹ್ಮ ಸಿ.ಎನ್.ನಾಗಶಯನ್‌ಗೌತಮ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಭಕ್ತರ ಸಹಕಾರದಿಂದ ಹನುಮ ಜಯಂತಿಯನ್ನು ವೈಭವಯುತವಾಗಿ ಆಚರಿಸಲಾಗುತ್ತಿದೆ. ಈ ಬಾರಿ ವಿಶೇಷವಾಗಿ ಭಗವಂತನ ದಯೆಯಿಂದ ಉತ್ತಮ ಮಳೆಯಾಗಿದೆ. ನಂಬಿದ ಭಕ್ತರನ್ನು ಎಂದೂ ಹನುಮ ಕೈಬಿಡುವುದಿಲ್ಲವೆಂಬ ನಂಬಿಕೆ ಎಲ್ಲರಲ್ಲೂ ಅಚಲವಾಗಿದೆ ಎಂದರು.

ನಗರದ ಹಳೇಟೌನ್‌ ನ ರಾಮಮಂದಿರದ ಶ್ರೀಪೇಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲೂ ಭಕ್ತಿಯಿಂದ ಹನುಮ ಜಯಂತಿ ಆಚರಿಸಲಾಯಿತು. ಆಗಮಿಸಿದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಆರ್ಚಕರಾದ ಶಿವಕುಮಾರ್, ರಾಘವೇಂದ್ರ ಮುಂತಾದವರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ನಗರದ ಅಜ್ಜಯ್ಯನಗುಡಿ ರಸ್ತೆಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಆರ್ಚಕ ನಾಗೇಶ್‌ ಭಾರದ್ವಾಜ್ ಪೂಜಾ ಕಾರ್ಯ ನೆರವೇರಿಸಿದರು. ಎಂ.ಆರ್.ಮಿಲ್‌ನ ಮಧು, ಹೊಸಮನೆ ತಿಪ್ಪೇಸ್ವಾಮಿ, ರವಿಕುಮಾರ್, ಆಶಾಮಧು ಮುಂತಾದವರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು.

ಬಿಎಂ.ಸರ್ಕಾರಿ ಪ್ರೌಢಶಾಲಾ ಮೈದಾನ ಆಂಜನೇಯಸ್ವಾಮಿ ದೇವಸ್ಥಾನದಲ್ಲೂ ವಿಶೇಷ ಪೂಜಾ ಕಾರ್ಯಕ್ರಮ ನಡೆದವು. ಆರ್ಚಕರಾದ ಬಾಲೇನಹಳ್ಳಿವೆಂಕಣ್ಣ, ಸುಬ್ರಮಣ್ಯ ಪೂಜಾ ಕಾರ್ಯ ನೆರವೇರಿಸಿದರು.

ಪ್ರದೀಪ್‌ಶರ್ಮ, ಪ್ರವೀಣ್‌ಶರ್ಮ, ಭೀಮರಾಜ್, ಸಿ.ಎಸ್.ಗೋಪಿನಾಥ, ಜೆ.ಎಸ್.ಶ್ರೀನಾಥಶರ್ಮ, ಎನ್.ಗೋಪಿನಾಥ, ಹೇಮಂತಗೌತಮ್, ಪ್ರಕಾಶ್, ಪಿ.ಆರ್.ನರಸಿಂಹಮೂರ್ತಿ ಮುಂತಾದವರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಪರಿಮಳ ಏಜೆನ್ಸಿ ವತಿಯಿಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

Share this article