ಹನುಮಾಮಾಲಾ ಪಾದುಕೆ ಪಲ್ಲಕ್ಕಿ ಉತ್ಸವದ ಶೋಭಾಯಾತ್ರೆ

KannadaprabhaNewsNetwork | Published : Dec 23, 2023 1:47 AM

ಸಾರಾಂಶ

ಬ.ಬಾಗೇವಾಡಿಯ ಹನುಮಾನ ದೇವಸ್ಥಾನದಿಂದ ಆರಂಭಗೊಂಡ ಶೋಭಾ ಯಾತ್ರೆ ಅಗಸಿ, ಮಹಾರಾಜರ ಮಠ, ಬಸವಜನ್ಮ ಸ್ಮಾರಕ, ಪತ್ತಾರ ಗಲ್ಲಿ ಮಾರ್ಗವಾಗಿ ಬಸವೇಶ್ವರ ವೃತ್ತಕ್ಕೆ ಆಗಮಿಸಿತು. ಯಾತ್ರೆಯಲ್ಲಿ ಹನುಮಾನ, ರಾಮನ ಮೂರ್ತಿಗಳು, ಪೂಜ್ಯ ಸಿದ್ದೇಶ್ವರರ, ಭಾರತ ಮಾತೆಯ ಭಾವಚಿತ್ರ ಗಮನ ಸೆಳೆದವು. ಯಾತ್ರೆ ಉದ್ದಕ್ಕೂ ಡಿಜೆ ಸೌಂಡ್ ಗೆ ಹನುಮ ಮಾಲಾಧಾರಿಗಳು ಕುಣಿದು ಕುಪ್ಪಳಿಸಿದರು.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ

ಪಟ್ಟಣದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳ ಸಹಯೋಗದಲ್ಲಿ ಶುಕ್ರವಾರ ಹನುಮಮಾಲಾ ಪಾದುಕೆ ಪಲ್ಲಕ್ಕಿ ಉತ್ಸವ ಹಾಗೂ ಮಾತೃಶಕ್ತಿ ದುರ್ಗಾವಾಹಿನಿಯ ವಾರ್ಷಿಕೋತ್ಸವ ಅಂಗವಾಗಿ ಶುಕ್ರವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶೋಭಾ ಯಾತ್ರೆ ನಡೆಯಿತು. ಯಾತ್ರೆ ಆರಂಭಕ್ಕೂ ಮುನ್ನ ಬೆಳಗ್ಗೆ ಹನುಮಾನ ದೇವಸ್ಥಾನದಲ್ಲಿ ಹನುಮಮಾಲಾಧಾರಿಗಳಿಂದ ಪವಮಾನ ಹೋಮ ನೆರವೇರಿತು.

ಪಟ್ಟಣದ ಹನುಮಾನ ದೇವಸ್ಥಾನದಿಂದ ಆರಂಭಗೊಂಡ ಶೋಭಾ ಯಾತ್ರೆ ಅಗಸಿ, ಮಹಾರಾಜರ ಮಠ, ಬಸವಜನ್ಮ ಸ್ಮಾರಕ, ಪತ್ತಾರ ಗಲ್ಲಿ ಮಾರ್ಗವಾಗಿ ಬಸವೇಶ್ವರ ವೃತ್ತಕ್ಕೆ ಆಗಮಿಸಿತು. ಯಾತ್ರೆಯಲ್ಲಿ ಹನುಮಾನ, ರಾಮನ ಮೂರ್ತಿಗಳು, ಪೂಜ್ಯ ಸಿದ್ದೇಶ್ವರರ, ಭಾರತ ಮಾತೆಯ ಭಾವಚಿತ್ರ ಗಮನ ಸೆಳೆದವು. ಯಾತ್ರೆ ಉದ್ದಕ್ಕೂ ಡಿಜೆ ಸೌಂಡ್ ಗೆ ಹನುಮ ಮಾಲಾಧಾರಿಗಳು ಕುಣಿದು ಕುಪ್ಪಳಿಸಿದರು.

ಶೋಭಾಯಾತ್ರೆಯಲ್ಲಿ ತಮ್ಮಣ್ಣ ಬಡಿಗೇರ, ನಿಂಗಪ್ಪ ಬಡಿಗೇರ, ಸಂತೋಷ ಹಿರೇಕುರಬರ, ಮಡ್ಡು ಈರಕಾರ, ಚನ್ನಬಸು ಮುರಾಳ, ರಾಹುಲ್‌ ಜಗತಾಪ, ಬಸವರಾಜ ಅಳ್ಳಗಿ, ಮಂಜು ಮುದೂರ, ಅಪ್ಪು ಚವ್ಹಾಣ, ಅಭಿಷೇಕ ಹೂಗಾರ, ಷಣ್ಮುಖ ಹಿರೇಮಠ, ಭಾಗ್ಯವಂತ ಇಂಗಳೇಶ್ವರ, ವಿಜಯ ಗೊಳಸಂಗಿ, ಸದಾನಂದ ಗೊಳಸಂಗಿ, ಬಸವರಾಜ ಗೊಳಸಂಗಿ, ಶಶಿಕುಮಾರ ನಾಯ್ಕೋಡಿ, ವಿರೇಶ ಹಿರೇಮಠ, ವಿದ್ಯಾಶ್ರೀ ಬಡಿಗೇರ, ಲಕ್ಷ್ಮೀ ವಸ್ತ್ರದ, ರೂಪಾ ಜಾಧವ, ರೂಪಾ ಒಡೆಯರ ಇತರರು ಭಾಗವಹಿಸಿದ್ದರು.

ಬ.ಬಾಗೇವಾಡಿಯ ಹನುಮಾನ ದೇವಸ್ಥಾನದಿಂದ ಆರಂಭಗೊಂಡ ಶೋಭಾ ಯಾತ್ರೆ ಅಗಸಿ, ಮಹಾರಾಜರ ಮಠ, ಬಸವಜನ್ಮ ಸ್ಮಾರಕ, ಪತ್ತಾರ ಗಲ್ಲಿ ಮಾರ್ಗವಾಗಿ ಬಸವೇಶ್ವರ ವೃತ್ತಕ್ಕೆ ಆಗಮಿಸಿತು. ಯಾತ್ರೆಯಲ್ಲಿ ಹನುಮಾನ, ರಾಮನ ಮೂರ್ತಿಗಳು, ಪೂಜ್ಯ ಸಿದ್ದೇಶ್ವರರ, ಭಾರತ ಮಾತೆಯ ಭಾವಚಿತ್ರ ಗಮನ ಸೆಳೆದವು. ಯಾತ್ರೆ ಉದ್ದಕ್ಕೂ ಡಿಜೆ ಸೌಂಡ್ ಗೆ ಹನುಮ ಮಾಲಾಧಾರಿಗಳು ಕುಣಿದು ಕುಪ್ಪಳಿಸಿದರು.

Share this article