ಕನ್ನಡಪ್ರಭ ವಾರ್ತೆ ಬನ್ನೂರುಶ್ರೀ ರಾಮನ ದೇವಾಲಯ ಎಲ್ಲಿರುತ್ತದೋ ಅಲ್ಲಿ ಹನುಮನ ದೇವಾಲಯ ಇದ್ದೇ ಇರುತ್ತದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತಿಳಿಸಿದರು.ಪಟ್ಟಣದ ಬಸ್ ನಿಲ್ದಾಣದ ಅಂಜನೇಯನ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಹನುಮ ಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸನ್ಮಾನ ಸ್ವೀಕರಿಸಿ, ಹನುಮ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಅವರು ಮಾತನಾಡಿದರು.ಹನುಮ ಜಯಂತಿ ನಮ್ಮೇಲ್ಲರ ಭಾವನೆ ಮತ್ತು ಶಕ್ತಿಯ ಪ್ರತೀಕವಾಗಿದ್ದು, ನಾವೆಲ್ಲರು ಒಗ್ಗಟ್ಟಿನಿಂದ ಕೂಡಿ ಮಾಡುವಂತ ಹಬ್ಬ ಇದಾಗಿದೆ ಎಂದು ಹೇಳಿದರು. ಹನುಮ ಎಂದಾಗ ನಮ್ಮಲ್ಲಿ ಮೂಡುವುದು ಸತ್ಯ, ನಿಷ್ಟೆ, ಶಕ್ತಿಯ ಪ್ರತೀಕ ಎನ್ನುವಂತ ಮನೋಭಾವ ಎಂದು ತಿಳಿಸಿದರು.ಶ್ರೀ ರಾಮನ ಪರಮ ಭಕ್ತನಾಗಿ, ನಾಡಿನ ಶಕ್ತಿಯಾಗಿ, ನಮ್ಮೇಲ್ಲರ ಆರಾಧ್ಯ ದೈವವಾಗಿ, ಇಂದಿಗೂ ಅಜರಾಮರರಾಗಿದ್ದಾರೆ. ಹಬ್ಬವನ್ನು ನಾವೆಲ್ಲರೂ ವಿಜೃಂಭಣೆಯಿಂದ ಆಚರಣೆ ಮಾಡಿ, ಸಾಮರಸ್ಯದ ಜೀವನ ನಡೆಸೋಣ ಎಂದು ಹೇಳಿದರು.ಮೈಸೂರು ಗ್ರಾಮಾಂತರ ಜಿಲ್ಲೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ಎಂ. ರಾಮಚಂದ್ರ ಮಾತನಾಡಿ, ಇಂದು ನಡೆಯುವಂತ ಮೆರವಣಿಗೆ ಕಾರ್ಯಕ್ರಮಕ್ಕೆ 15 ವಿವಿಧ ದೇವರ ಪ್ರತಿರೂಪದ ಚಿತ್ರಣ ಹೊತ್ತಿರುವಂತ ಟ್ರ್ಯಾಕ್ಟರ್ ಸಮೇತ ಮೆರವಣಿಗೆ ಹನುಮ ಹಬ್ಬಕ್ಕೆ ಕಳೆ ತಂದಿದೆ ಎಂದರು.ಟಜಾಥದ ಜೊತೆಗೆ ನಮ್ಮ ಸಂಸ್ಕೃತಿಯ ಪ್ರತೀಕ ಸಾರುವಂತ ಡೊಳ್ಳು ಕುಣಿತ, ಕಂಸಾಳೆ, ಕಳಸ, ಬಸವನ ಮೆರವಣಿಗೆ, ಪೂಜಾ ಕುಣಿತದಂತ ಸಂಪ್ರದಾಯ ಚಟುವಟಿಕೆ ಬನ್ನೂರಿಗೆ ಜಾತ್ರೆ ಕಳೆಯನ್ನು ತಂದುಕೊಟ್ಟಿದೆ ಎಂದು ತಿಳಿಸಿದರು. ಚಾಮುಂಡೇಶ್ವರಿ ಯುವಕರ ಬಳಗದ ಅಧ್ಯಕ್ಷ ಗುರುನಾಯಕ್, ಪುರಸಭಾ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಪುರಸಭಾ ಸದಸ್ಯ ಮೂರ್ತಿ, ಬಿಜೆಪಿ ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ, ಅಪರಚಿತರಾಜ್ ಅರಸ್, ಜಿಲ್ಲಾ ಕಾರ್ಯದರ್ಶಿ ಸಾಮ್ರಾಟ್ ಸುಂದರೇಶನ್, ದಯಾನಂದ್ ಪಟೇಲ್, ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ವೈ.ಎಸ್. ರಾಮಸ್ವಾಮಿ, ಸಮಾಜ ಸೇವಕ ಮಹೇಂದ್ರಸಿಂಗ್ ಕಾಳಪ್ಪ, ತಾಲೂಕು ಅಧ್ಯಕ್ಷ ಶಿವಕುಮಾರ್, ಪೈ.ವೆಂಕಟೇಶ್, ರಾಜೇಗೌಡ, ಶಾಂತರಾಜು, ವೀರಶೈವ ಮುಖಂಡ ಎಸ್.ಎಂ ಪ್ರಕಾಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ, ಚಂದ್ರಶೇಖರ್, ರಾಜಶೇಖರ್, ಗೋಪಿನಾಥ್, ಬನ್ನೂರು ಟೌನ್ ಅಧ್ಯಕ್ಷ ಕಾಳೇಗೌಡ, ಗಣೇಶ್, ಭವ್ಯ, ದಾಸಯ್ಯ ಇದ್ದರು.