ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಪಟ್ಟಣದ ಶಾಂತಿನಗರದ ಸುಮುಖ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಬಿ.ಕಣಬೂರು ಹಾಗೂ ಬನ್ನೂರು ಗ್ರಾಪಂ ವ್ಯಾಪ್ತಿಗೊಳಪಟ್ಟ ಹಿಂದೂ ಬಾಂಧವರ ಹಿಂದೂ ಸಮಾಜೋತ್ಸವ ಅತ್ಯಂತ ವೈಭವಯುತವಾಗಿ ನಡೆಸಲು ಈಗಾಗಲೇ ಸಮಿತಿಯಿಂದ ಯೋಜಿಸಿದ್ದು, ಇದಕ್ಕಾಗಿ ಹಲವಾರು ರೂಪುರೇಷೆ ಸಿದ್ಧಗೊಳಿಸಲಾಗಿದೆ.
ಜ.೩೦ರಂದು ಸಂಜೆ 5 ಗಂಟೆಗೆ ಹಿಂದೂ ಸಮಾಜೋತ್ಸವ ಅಂಗವಾಗಿ ಪಟ್ಟಣದ ಮಾರ್ಕಾಂಡೇಶ್ವರ ದೇವಸ್ಥಾನದ ಮುಂಭಾಗದಿಂದ ಮುಖ್ಯರಸ್ತೆಯಲ್ಲಿ ಬೃಹತ್ ಶೋಭಾಯಾತ್ರೆ ಜೇಸಿ ವೃತ್ತ, ರೋಟರಿ ವೃತ್ತದ ಮೂಲಕ ಸಾಗಿ ಕಲಾರಂಗ ಕ್ರೀಡಾಂಗಣದಲ್ಲಿ ಸಮಾಪ್ತಿಗೊಳ್ಳಲಿದೆ ಎಂದರು.ನಂತರ ಸಾರ್ವಜನಿಕ ಸಮಾರಂಭ ನಡೆಯಲಿದ್ದು, ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಕಾಫಿ ಬೆಳೆಗಾರ ಕೆ.ಎನ್.ರುದ್ರಪ್ಪಗೌಡ ಅಧ್ಯಕ್ಷತೆ ವಹಿಸಲಿದ್ದು, ಸಂಘದ ಹಿರಿಯ ಪ್ರಚಾರಕ ಸೀತಾರಾಮ ಕೆದಿಲಾಯ ಮುಖ್ಯಭಾಷಣ ಮಾಡಲಿದ್ದಾರೆ.
ಶೋಭಾಯಾತ್ರೆಯಲ್ಲಿ ವಿವಿಧ ಸ್ಥಳೀಯ ಕಲಾತಂಡಗಳು ಪಾಲ್ಗೊಳ್ಳಲಿದ್ದು, ಮಕ್ಕಳು ಹಾಗೂ ಹಿರಿಯರು ಹಿಂದೂ ದೇವರ ಹಾಗೂ ಮಹಾನ್ ಪುರುಷರ ವೇಷಭೂಷಣ ಹಾಕಿಕೊಂಡು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಬಹುದು. ಶೋಭಾಯಾತ್ರೆ ಸಾಗುವ ದಾರಿಯಲ್ಲಿ ತಳಿರು ತೋರಣ, ರಂಗೋಲಿಗಳನ್ನು ಹಾಕಿ ಸ್ವಾಗತಿಸಲು ಅವಕಾಶ ನೀಡಲಾಗಿದೆ.ಸಮಾಜೋತ್ಸವದ ಅಂಗವಾಗಿ ಅಖಂಡ ಭಾರತದ ನಕ್ಷೆಗೆ ಪ್ರತಿಯೊಬ್ಬ ಹಿಂದೂಗಳ ಮನೆಯಿಂದ ಒಂದೊಂದು ಹಣತೆ ತಂದು ಹಚ್ಚಲು ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಯಕ್ರಮದ ಪೂರ್ವಭಾವಿಯಾಗಿ ಪ್ರತಿ ಹಿಂದೂ ಬಾಂಧವರು ತಮ್ಮ ಮನೆಗಳ ಮುಂಭಾಗದಲ್ಲಿ ಭಗವಾಧ್ವಜ ಹಾರಿಸಿ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಲು ಕೋರಲಾಗಿದೆ. ಕಾರ್ಯಕ್ರಮದ ಸ್ಥಳದಲ್ಲಿ ಗೋ ಉತ್ಪನ್ನ ಹಾಗೂ ರಾಷ್ಟ್ರೀಯ ಸಾಹಿತ್ಯದ ಮಾರಾಟದ ವ್ಯವಸ್ಥೆ ಸಹ ಮಾಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ಉಪಾಧ್ಯಕ್ಷ ಆರ್.ಡಿ.ಮಹೇಂದ್ರ, ಪ್ರಮುಖರಾದ ಬಿ.ವೆಂಕಟೇಶ್, ಪ್ರಶಾಂತ್, ಸಿ.ಎಸ್.ಮಹೇಶ್ಚಂದ್ರ, ಉಮೇಶ್, ಮಾಲಾ ಸಹದೇವ್, ಶಕುಂತಳಾ ಪ್ರಭಾಕರ್, ಸ್ಮಿತಾ ಮಹೇಶ್ಚಂದ್ರ, ಕೆ.ಪ್ರಶಾಂತ್‌ಕುಮಾರ್, ಭಾಸ್ಕರ್, ಪ್ರಭಾಕರ್, ಸತೀಶ್ ಅರಳೀಕೊಪ್ಪ, ಮಂಜು ಹೊಳೆಬಾಗಿಲು, ರವಿಚಂದ್ರ, ಸುರೇಶ್, ಸುಮೇಶ್, ಮಂಜು ಹಲಸೂರು ಮತ್ತಿತರರು ಹಾಜರಿದ್ದರು. ೨೭ಬಿಹೆಚ್‌ಆರ್ ೩:ಬಾಳೆಹೊನ್ನೂರಿನ ಕಲಾರಂಗ ಕ್ರೀಡಾಂಗಣದಲ್ಲಿ ಜ.30ರಂದು ನಡೆಯಲಿರುವ ಹಿಂದೂ ಸಮಾಜೋತ್ಸವದ ಆಹ್ವಾನ ಪತ್ರಿಕೆಯನ್ನು ಆಯೋಜನಾ ಸಮಿತಿಯ ಉಪಾಧ್ಯಕ್ಷ ಆರ್.ಡಿ.ಮಹೇಂದ್ರ ಬಿಡುಗಡೆಗೊಳಿಸಿದರು. ಬಿ.ವೆಂಕಟೇಶ್, ಪ್ರಶಾಂತ್, ಮಾಲಾ, ಶಕುಂತಳಾ, ಸ್ಮಿತಾ ಮತ್ತಿತರರು ಹಾಜರಿದ್ದರು.