ಕನ್ನಡಪ್ರಭ ವಾರ್ತೆ ರಾಮನಗರ
ಕೆಂಗಲ್ ಆಂಜನೇಯಸ್ವಾಮಿ, ವ್ಯಾಸರಾಯರು ಸ್ಥಾಪಿಸಿದರು ಎನ್ನಲಾದ ನಗರದ ಪ್ರಸಿದ್ದ ಅಗ್ರಹಾರದ ಶ್ರೀ ಅಭಯ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ಎಲ್ಲ ಹನುಮ ದೇವಾಲಯಗಳಲ್ಲಿ ಬೆಳಿಗ್ಗೆ ಫಲ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಗಂಟೆಗೆ ಹೋಮ, ಪೂರ್ಣಾಹುತಿ ನಡೆದವು. ಎಲ್ಲೆಡೆ ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ಅನ್ನದಾನ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿದವು.
ಶ್ರೀ ಕೆಂಗಲ್ ಆಂಜನೇಯಸ್ವಾಮಿ, ಶ್ರೀ ರಾಮದೇವರ ಬೆಟ್ಟದ ಆರ್ಚ್ ಬಳಿಯಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯ, ಕೆಂಪೇಗೌಡ ವೃತ್ತದ ಪಂಚಮುಖಿ ಆಂಜನೇಯ, ಹೊಸಳ್ಳಿ ಬಯಲು, ಜಿಲ್ಲಾಧಿಕಾರಿ ಕಚೇರಿ ಮುಂಭಾಗ, ಗಾಂಧಿನಗರ, ವಾಟರ್ ಟ್ಯಾಂಕ್ ವೃತ್ತದ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಅದ್ಧೂರಿಯಾಗಿ ಹನುಮ ಜಯಂತಿಯನ್ನು ಆಚರಣೆ ಮಾಡಲಾಯಿತು.ಕಸಬಾ ಹೋಬಳಿ ಸೋಮಸಂದ್ರದ ಶ್ರೀ ಆಂಜನೇಯ ಸ್ವಾಮಿ, ಜಲಸಿದ್ದೇಶ್ವರ ಬೆಟ್ಟದ ತಪ್ಪಲಿನ ವೀರಾಂಜನೇಯಸ್ವಾಮಿ, ಬಿಡದಿ ಹೋಬಳಿಯ ಹನುಮಂತನಗರದ ಇತಿಹಾಸ ಪ್ರಸಿದ್ಧ ಶ್ರೀ ಕೋತಿ ಆಂಜನೇಯಸ್ವಾಮಿ, ಮಂಚನಾಯ್ಕನಹಳ್ಳಿಯ ಶ್ರೀ ಬ್ಯಾಟರಾಯಸ್ವಾಮಿ, ಬಿಡದಿ ಮುಖ್ಯರಸ್ತೆ, ಬೈರಮಂಗಲ ವೃತ್ತ, ಛತ್ರ ವಾರ್ಡಿನ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಭಕ್ತರು ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಜೈ ಹನುಮಾನ್ ಮಂತ್ರ ಪಠಣ ಮಾಡಿದರು.
ಹನುಮ ಜಯಂತಿ ಅಂಗವಾಗಿ ಬೆಳಿಗ್ಗೆಯಿಂದಲೇ ದೇವಾಲಯಗಳ ಮುಂದೆ ಅಪಾರ ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಎಲ್ಲ ದೇವಾಲಯಗಳಲ್ಲಿನ ಉತ್ಸವ ಮೂರ್ತಿಗಳನ್ನು ಬೆಣ್ಣೆ, ಗಂಧ, ಅರಿಶಿನ ಸೇರಿದಂತೆ ವಿವಿಧ ಬಗೆಯ ಫಲ, ಪುಷ್ಪಗಳಿಂದ ಸಿಂಗರಿಸಿ, ವಿಶೇಷ ಪೂಜಾ ಕಾರ್ಯ ಗಳನ್ನು ನೆರವೇರಿಸಿದರು. ಎಲ್ಲ ದೇವಾಲಯಗಳ ಬಳಿ ಅನ್ನದಾನ, ಪ್ರಸಾದ ವಿನಿಯೋಗ ಸೇವೆಗಳು ನೆರವೇರಿದವು.ಈ ವೇಳೆ ಮಾಜಿ ಶಾಸಕ ಕೆ.ರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಗುರುಪ್ರಸಾದ್, ಮುಖಂಡರಾದ ರವಿ, ನರಸಿಂಹಯ್ಯ, ಡಿ.ಕೆ.ಶಿವಕುಮಾರ್ , ತಿಲಕ್ ರಾಜು ಮತ್ತಿತರರು ಹಾಜರಿದ್ದರು.
-------ಹನುಮ ಜಯಂತಿ ಸೌಹಾರ್ದ ಸಂಕೇತದ ಪ್ರತೀಕ
ರಾಮನಗರ:ನಗರದ ಹಲವೆಡೆ ನಡೆದ ಹನುಮ ಜಯಂತಿ ಸಮಾರಂಭದಲ್ಲಿ ಪಾಲ್ಗೊಂಡು ನಗರಸಭೆ ಅಧ್ಯಕ್ಷರಾದ ಕೆ.ಶೇಷಾದ್ರಿ (ಶಶಿ) ಮತ್ತು ಉಪಾಧ್ಯಕ್ಷೆ ಆಯಿಷಾ ಬಾನುರವರು ವಿಶೇಷ ಪೂಜೆ ಸಲ್ಲಿಸಿದರು.
ನಗರದ ವಿನಾಯಕ ನಗರ ಬಡಾವಣೆಯಲ್ಲಿರುವ ಅಭಯ ಆಂಜನೇಯ, ವಾಟರ್ ಟ್ಯಾಂಕ್, ಅಗ್ರಹಾರದಲ್ಲಿರುವ ಅಭಯ ಆಂಜನೇಯ, ಜಾಲಮಂಗಲ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯ ಹಾಗೂ ಹೊಸಳ್ಳಿ ಬಯಲಿನಲ್ಲಿರುವ ಆಂಜನೇಯ ದೇವಾಲಯಗಳಿಗೆ ಭೇಟಿ ನೀಡಿದ ಶೇಷಾದ್ರಿ ಮತ್ತು ಆಯಿಷಾ ಬಾನುರವರು ಪೂಜೆ ನೆರವೇರಿಸಿದರು.ಈ ವೇಳೆ ಮಾತನಾಡಿದ ಕೆ.ಶೇಷಾದ್ರಿ, ಹನುಮ ಶ್ರೀರಾಮನ ಪರಮ ಭಕ್ತ. ಆತ ಸೇವೆ ಮತ್ತು ನಿಷ್ಠೆಗೆ ಹೆಸರಾಗಿದವನು. ಎಲ್ಲೆಡೆ ಹಿಂದೂ ಮತ್ತು ಮುಸ್ಲಿಂ ಬಾಂಧವರು ಒಟ್ಟಾಗಿ ಹನುಮ ಜಯಂತಿ ಆಚರಣೆ ಮಾಡುತ್ತಿರುವುದು ಸೌಹಾರ್ದ ಸಂಕೇತದ ಪ್ರತೀಕವಾಗಿದೆ ಎಂದು ಹೇಳಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಸದಸ್ಯರಾದ ಆರೀಫ್ , ನಿಜಾಮುದ್ದೀನ್ ಷರೀಫ್ , ಮಂಜುನಾಥ್ , ಗೋವಿಂದರಾಜು, ಪೌರಕಾರ್ಮಿಕರಾದ ವೆಂಕಟೇಶ್ , ದೇವೇಂದ್ರ , ಕೊಲ್ಲಾಪುರಿ, ಮುಖಂಡ ರೇಲ್ವೆ ಗೋಪಾಲ್ ಮತ್ತಿತರರು ಹಾಜರಿದ್ದರುಕೋಟ್....ಶ್ರೀ ಹನುಮ ಜಯಂತಿ ಅಂಗವಾಗಿ ನಗರದ ಹೊಸಳ್ಳಿಬಯಲು, ಅಗ್ರಹಾರ, ವಿಜಯನಗರದ ಶ್ರೀ ಆಂಜನೇಯಸ್ವಾಮಿ ಸೇರಿದಂತೆ ವಿವಿಧ ದೇವಾಲಯ ಗಳಿಗೆ ತೆರಳಿ ಪೂಜೆ ನೆರವೇರಿಸಿದ್ದು, ಶ್ರೀ ಆಂಜನೇಯ ನಲ್ಲಿರುವ ಶಕ್ತಿ, ಜ್ಞಾನ, ಬುದ್ಧಿ, ಆರ್ಶೀವಾದ ನಮ್ಮೆಲ್ಲರ ಮೇಲೆ ಸದಾ ಇರಲಿ ಎಂದು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದ್ದೇನೆ.
- ಎಚ್.ಎ.ಇಕ್ಬಾಲ್‌ಹುಸೇನ್, ಶಾಸಕ.-----
2ಕೆಆರ್ ಎಂಎನ್ 1,2,3.ಜೆಪಿಜಿ1.ರಾಮನಗರದ ಅಗ್ರಹಾರದ ಶ್ರೀ ಅಭಯ ಆಂಜನೇಯಸ್ವಾಮಿ ಮೂರ್ತಿಗೆ ವಿಶೇಷ ಅಲಂಕಾರ ಮಾಡಿರುವುದು.
2.ರಾಮನಗರದ ಅಗ್ರಹಾರದ ಶ್ರೀ ಅಭಯ ಆಂಜನೇಯಸ್ವಾಮಿ ದೇವಾಲಯದಲ್ಲಿ ಶಾಸಕ ಇಕ್ಬಾಲ್ ಹುಸೇನ್ ರವರು ವಿಶೇಷ ಪೂಜೆ ಸಲ್ಲಿಸಿದರು.3.ರಾಮನಗರದ ವಾಟರ್ ಟ್ಯಾಂಕ್ ವೃತ್ತದಲ್ಲಿ ನಡೆದ ಹನುಮ ಜಯಂತಿ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಮತ್ತು ಉಪಾಧ್ಯಕ್ಷೆ ಆಯಿಷಾ ಬಾನು ಮತ್ತಿತರರು ಪಾಲ್ಗೊಂಡಿದ್ದರು.
--------------------------------