ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಐತಿಹಾಸಿಕ ಹೊಸಹೊಳಲು ಗ್ರಾಮದಲ್ಲಿ ಹನುಮಂತೋತ್ಸವವು ಸಡಗರ-ಸಂಭ್ರಮದಿಂದ ಜರುಗಿತು.ಗ್ರಾಮದ ಕುರುಹಿನಶೆಟ್ಟಿ ನೇಕಾರ ಸಮಾಜದಿಂದ ರಾತ್ರಿ 7 ಗಂಟೆಗೆ ಆರಂಭಗೊಂಡ ಉತ್ಸವ ಮಧ್ಯರಾತ್ರಿವರೆಗೆ ವಿಜೃಂಭಣೆಯಿಂದ ಜರುಗಿತು. ಕುರುಹಿನಶೆಟ್ಟಿ ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಅಲಂಕೃತ ಬೆಳ್ಳಿ ರಥದಲ್ಲಿ ಶ್ರೀಆಂಜನೇಯಸ್ವಾಮಿ ಭಾವಚಿತ್ರದೊಂದಿಗೆ ಮೆರವಣಿಗೆ ಮಾಡಲಾಯಿತು.
ಮೆರವಣಿಗೆಯಲ್ಲಿ ಕೇರಳದ ಚಂಡೆ ವಾದನ, ಮ್ಯೂಸಿಕ್ ಟ್ಯಾಬ್ಲೋನ ಹಾಡಿಗೆ ಯುವಕರು, ಯುವತಿಯರು ಹಾಗೂ ಮಕ್ಕಳು ಕುಣಿದು ಕುಪ್ಪಳಿಸಿದರು. ಲಕ್ಷ್ಮಿಸಾಗರದ ಕೆಂಪೇಗೌಡ ಮತ್ತು ತಂಡದ ವತಿಯಿಂದ ನಾಸಿಕ್ ಬ್ಯಾಂಡ್, ಮಂಡ್ಯದ ಕನ್ಯಾಕುಮಾರ್ ಅವರಿಂದ ಪೂಜಾಕುಣಿತ, ವೀರಗಾಸೆ, ಹುಲಿವೇಶ, ಪಾಲೇ ಗಿರಿವೇಶದಂತಹ ಪ್ರದರ್ಶನಗಳನ್ನು ಕಲಾವಿದರು ಪ್ರದರ್ಶಿಸಿ ಸಾರ್ವಜನಿಕರನ್ನು ರಂಜಿಸಿದರು.ಹೊಸಹೊಳಲು ಗ್ರಾಮದ ಪ್ರಮುಖ ರಸ್ತೆಗಳ್ಳಲ್ಲಿ ಮೆರವಣಿಗೆ ನಡೆಸಿದರು. ರಂಗು ರಂಗಿನ ಪಟಾಕಿಗಳನ್ನು ಬಾಣಂಗಳದಲ್ಲಿ ಸಿಡಿಸಿ ಚಿತ್ತಾರ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖಂಡರಾದ ಎಚ್.ಜಿ.ರಾಮಚಂದ್ರು, ಎಚ್.ಆರ್.ಮಂಜುನಾಥ್, ಸೋಮಶೇಖರ್, ಪುರಸಭೆ ಸದಸ್ಯರಾದ ಶುಭಗಿರೀಶ್, ಎಚ್.ಆರ್.ಲೋಕೇಶ್. ಎಚ್.ಎನ್.ಪ್ರವೀಣ್, ಆರ್.ಸೋಮಶೇಖರ್, ಮನು, ಚರಣ್, ಜೀವನ್, ವೆಂಕಟೇಶ್, ಗೋಪಾಲ್ ಮಾಸ್ಟ್ರು, ಗುತ್ತಿಗೆದಾರ ಎಚ್.ಸಿ.ನಾಗೇಶ್, ಹನುಮಂತು, ಪುಟ್ಟರಾಜು, ವಿವಿಧ ಸಮಾಜದ ಮುಖಂಡರಾದ ನಾಗೇಗೌಡ, ಚಿಕ್ಕೇಗೌಡ, ಸಾಮಿಲ್ ರಘು, ರಾಮೇಗೌಡ, ಜಗದೀಶ್, ವೆಂಕಟಾಚಲ, ಪುನೀತ್, ಎಚ್. ಪುಟ್ಟರಾಜು ಗಣ್ಯರು ಇದ್ದರು.ಇಂದಿನಿಂದ 28 ರವರೆಗೆ ಉದರ ದರ್ಶಕ ಶಸ್ತ್ರ ಚಿಕಿತ್ಸಾ ಶಿಬಿರ
ಮಂಡ್ಯ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಪಂನಿಂದ ಜಿಲ್ಲಾದ್ಯಂತ ಮೇ 8 ರಿಂದ 28 ರವರೆಗೆ ಉದರ ದರ್ಶಕ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ. ಮೇ 8 ರಂದು ನಾಗಮಂಗಲ ಸರ್ಕಾರಿ ಆಸ್ಪತ್ರೆ, ಮೇ 13 ರಂದು ಮದ್ದೂರು ತಾಲೂಕು ಆಸ್ಪತ್ರೆ, ಮೇ 14ರಂದು ಕೆ.ಆರ್.ಪೇಟೆ ತಾಲೂಕು ಆಸ್ಪತ್ರೆ, ಮೇ 16 ರಂದು ಪಾಂಡವಪುರ ಉಪ ವಿಭಾಗ ಆಸ್ಪತ್ರೆ, ಮೇ 17ರಂದು ಮಂಡ್ಯ ಮಿಮ್ಸ್, ಮೇ 20ರಂದು ಮದ್ದೂರು ತಾಲೂಕು ಆಸ್ಪತ್ರೆ, ಮೇ 21 ರಂದು ಕೆ.ಆರ್.ಪೇಟೆ ತಾಲೂಕು ಆಸ್ಪತ್ರೆ, ಮೇ 23ರಂದು ಪಾಂಡವಪುರ ಉಪ ವಿಭಾಗ ಆಸ್ಪತ್ರೆ, ಮೇ 28 ರಂದು ನಾಗಮಂಗಲ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಳಿಗ್ಗೆ 10 ಗಂಟೆಗೆ ಉದರ ದರ್ಶಕ ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.