ಕೊಪ್ಪಳ: ಕಲಿಕೆಯ ಪ್ರಕ್ರಿಯೆಯಲ್ಲಿ ಸಂತಸದಾಯಕವಾಗಿ ಕಲಿಸುವ ವಿಧಾನ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸವನಗೌಡ ಪಾಟೀಲ ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷ ಬೀರಪ್ಪ ಅಂಡಗಿ ಮಾತನಾಡಿ, ಕೊರೋನಾ ಎಂಬ ಮಹಾಮಾರಿಯ ಹಿನ್ನೆಲೆಯಲ್ಲಿ ಕಲಿಕೆಯಲ್ಲಿ ಉಂಟಾಗಿದ್ದ ಅಂತರ ಸರಿಪಡಿಸುವ ನಿಟ್ಟಿನಲ್ಲಿ ಕಲಿಕಾ ಹಬ್ಬ ಜಾರಿಗೆ ತರಲಾಯಿತು. ಈ ಕಲಿಕಾ ಹಬ್ಬದ ಮೂಲಕ ಮಕ್ಕಳು ತಮ್ಮಲ್ಲಿರುವ ಪ್ರತಿಭೆ, ಆತ್ಮವಿಶ್ವಾಸವನ್ನು ಪ್ರದರ್ಶಿಸುವ ಅವಕಾಶ ಪಡೆಯುತ್ತಾರೆ. ಚಿತ್ರಕಲೆ, ಹಾಡು, ನಾಟಕ, ವಿಜ್ಞಾನ ಮಾದರಿ, ಕಥೆ ಹೇಳಿಕೆ ಇವೆಲ್ಲವೂ ಮಕ್ಕಳಲ್ಲಿ ಅಡಗಿರುವ ಕಲಿಕಾ ಶಕ್ತಿಯನ್ನು ಹೊರತರುತ್ತವೆ. ಇದು ಶಿಕ್ಷಕರಿಗೆ ಮಕ್ಕಳ ಕಲಿಕಾ ಮಟ್ಟವನ್ನು ಅರಿಯಲು ಹಾಗೂ ಪಾಲಕರು ತಮ್ಮ ಮಕ್ಕಳ ಸಾಮರ್ಥ್ಯವನ್ನು ನೋಡುವ ಅವಕಾಶ ನೀಡುತ್ತದೆ ಎಂದು ಹೇಳಿದರು.
ಅಳವಂಡಿ ವಲಯ ಶಿಕ್ಷಣ ಸಂಯೋಜಕ ಮಹಾದೇವಪ್ಪ ಗೂಳೇದ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಹನುಮಂತಪ್ಪ ಕುದರಿ ಅಧ್ಯಕ್ಷತೆ ವಹಿಸಿದ್ದರು.ಕ್ಷೇತ್ರ ಸಮನ್ವಯಾಧಿಕಾರಿ ಮೈಬೂಬ ಹುಸೇನ, ಶಿಕ್ಷಣ ಸಂಯೋಜಕ ವೀರೇಶ ಅರಳಿಕಟ್ಟಿ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಶಿವಪ್ಪ, ಪದವೀಧರ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಾರುತಿ ಮ್ಯಾಗಳಮನಿ, ತಾಲೂಕು ಅಧ್ಯಕ್ಷ ಮಂಜುನಾಥ ಕೆಸಲಾಪುರ, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರಾದ ಸುಭಾಸರಡ್ಡಿ ಮೈನಳ್ಳಿ, ಮರಳಸಿದ್ದಪ್ಪ ಹಣವಾಳ, ಮಂಜಮ್ಮ ಕುರದಗಡ್ಡಿ, ಮರಳಸಿದ್ದಯ್ಯ ಮಠದ, ಶರಣಮ್ಮ ಹೂಗಾರ, ನಿವೇದಿತಾ ಹಿರೇಮಠ, ಈರಮ್ಮ ತೋಟದ, ದೇವೇಂದ್ರಪ್ಪ ಕುರಡಗಿ, ಶರಣಪ್ಪ ರಡ್ಡೇರ, ಹನುಮಂತಪ್ಪ ಕುರಿ ಉಪಸ್ಥಿತರಿದ್ದರು. ಶಿಕ್ಷಕ ಬೀರಪ್ಪ ಗುರಿಕಾರ ಕಾರ್ಯಕ್ರಮ ನಿರೂಪಿಸಿದರು. ಕೆ.ಪಿ.ಎಸ್. ಶಾಲೆಯ ಮುಖ್ಯೋಪಾಧ್ಯಾಯ ಮಲ್ಲಪ್ಪ ಗುಡ್ಡದನ್ನವರ ಸ್ವಾಗತಿಸಿದರು ಹಾಗೂ ಹಿರೇಸಿಂದೋಗಿ ಕ್ಲಸ್ಟರ್ ಸಿಆರ್‌ಪಿ ನಾಗರಾಜ ಸಾಲಮನಿ ವಂದಿಸಿದರು.