ಧಾರವಾಡ:
ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಗೌರಮ್ಮ ಬಲೋಗಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾರತೀಯ ವಸ್ತುಗಳಿಗೆ ಕಡಿಮೆ ಸುಂಕ ಮತ್ತು ಅಮೆರಿಕ ವಸ್ತುಗಳಿಗೆ ಶೇ.18 ಸುಂಕ ವಿಧಿಸುವ ಅಸಮತೋಲನ ಷರತ್ತುಗಳ ಬಗ್ಗೆ ಈ ಒಪ್ಪಂದದಲ್ಲಾಗಿದೆ ಎನ್ನಲಾಗುತ್ತಿದೆ. ಇಂತಹ ತೆರಿಗೆ ವಿನ್ಯಾಸವು ದೇಸಿಯ ಉತ್ಪಾದಕರು, ರೈತರು, ಸಣ್ಣ ಕೈಗಾರಿಕೆಗಳ ಸ್ಪರ್ಧಾತ್ಮಕ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ವಿದೇಶಿ ಉತ್ಪನ್ನಗಳ ಹೆಚ್ಚಿದ ಪ್ರವೇಶದಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ಮತ್ತು ಉದ್ಯೋಗಾವಕಾಶಗಳ ಮೇಲೆ ಪರಿಣಾಮ ಉಂಟಾಗುವ ಆತಂಕವೂ ಇದೆ. ಆದ್ದರಿಂದ ಸಾರ್ವಜನಿಕ ಹಿತಾಸಕ್ತಿ ಪರಿಗಣಿಸಿ ಈ ಒಪ್ಪಂದದ ಎಲ್ಲ ಅಂಶಗಳನ್ನು ಮರುಪರಿಶೀಲಿಸಿ ದೇಶದ ಜನರ ಹಿತ ಕಾಪಾಡಬೇಕೆಂದು ಆಗ್ರಹಿಸಲಾಯಿತು.
ಮುಖಂಡರಾದ ಈಶ್ವರ ಶಿವಳ್ಳಿ, ಆನಂದ ಸಿಂಗನಾಥ, ಬಸವರಾಜ ಜಾಧವ, ಅಕ್ಕಮ್ಮ ಕಂಬಳಿ, ಶಾರದಾ ನಿಗದಿ, ಸ್ನೇಹಾ ಜಾಧವ, ರೇಷ್ಮಾ, ದೇವಿಕಾ ಬಸವರಾಜ, ಕಾರ್ತಿಕ ನಾಯಕ, ಬಸವರಾಜ ಅಮ್ಮಿನಬಾವಿ, ಮಂಜುನಾಥ ಉಡಿಕೇರಿ ಮತ್ತಿತರರು ಇದ್ದರು