ಹರಪನಹಳ್ಳಿ: ಹರಿಹರದ ವೀರಶೈವ ಲಿಂಗಾಯುತ ಪಂಚಮಸಾಲಿ ಗುರುಪೀಠದಲ್ಲಿ ಜ.15ರಂದು 8ನೇ ಹರ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ತಿಳಿಸಿದ್ದಾರೆ.ತಾಲೂಕಿನ ಅರಸೀಕೆರೆ ಗ್ರಾಮದ ಕೋಲಶಾಂತೇಶ್ವರ ಮಠದದಲ್ಲಿ ಹರ ಜಾತ್ರೆ ಸಂಬಂಧ ನಡೆದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದ ಅವರು ವಚನಾನಂದ ಶ್ರೀಗಳ ನೇತೃತ್ವದಲ್ಲಿ ಕಳೆದ 15 ದಿನಗಳಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ ಸಮಾಜದ ಬಾಂಧವರನ್ನು ಜಾತ್ರೆಗೆ ಆಹ್ವಾನ ಮಾಡಿದ್ದೇವೆ ಎಂದರು.
ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಪಾಟೀಲ್ ಬೆಟ್ಟನಗೌಡ ಮಾತನಾಡಿ, ಹರಿಹರದಲ್ಲಿ ನಡೆಯುವ ಹರಜಾತ್ರೆಗೆ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಾತ್ರೆಯನ್ನು ಯಶಸ್ವಿಗೊಳಿಸೋಣ ಎಂದು ಕರೆ ನೀಡಿದರು.
ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ರಾಜ್ಯ ಯುವ ಘಟಕದ ಅಧ್ಯಕ್ಷ ಕಿಚಡಿ ಕೊಟ್ರೇಶ್ ಮಾತನಾಡಿ, ಪ್ರತಿ ವರ್ಷ ಹರಜಾತ್ರೆ ದೊಡ್ಡದಾಗಿ ಬೆಳೆಯುತ್ತಾ ಹೋಗಬೇಕು. ಹರಜಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದ ನಮ್ಮ ಸಮಾಜದ ಬಂಧುಗಳು ಆಗಮಿಸಬೇಕು ಎಂದರು.ಸಮಾಜದ ಮುಖಂಡ ಪ್ರಶಾಂತ್ ಪಾಟೀಲ್ ಮಾತನಾಡಿ, ಹರಜಾತ್ರೆಗೆ ಹೋಗಲು ಅರಸೀಕೆರೆಯಿಂದ ಸಾರಿಗೆ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಎ.ಎಚ್. ಪಂಪಣ್ಣ, ಎ.ಜಿ. ಮಂಜುನಾಥ್, ತೌಡೂರು ಚನ್ನಬಸವನಗೌಡ, ವಿರೂಪಾಕ್ಷಪ್ಪ, ಮಹೇಶ್ ಪೂಜಾರಿ, ಸುರೇಶ್, ಚನ್ನನಗೌಡ, ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ, ಇಟ್ಟಿಗಿಹಳ್ಳಿ ಬಸವರಾಜ್, ಅಡ್ಡಿ ಚನ್ನವೀರಪ್ಪ, ಅಜಯ್ ಕುಮಾರ್, ಪುಣಭಘಟ್ಟ ಚನ್ನಬಸಪ್ಪ, ಯರಬಳ್ಳಿ ಜಾತಪ್ಪ, ದೀಪಾ, ಕೊಟ್ರಮ್ಮ, ಸೇರಿದಂತೆ ಮತ್ತಿತರರು ಇದ್ದರು.