ಹರ ಜಾತ್ರೆಯು ಪಂಚಮಸಾಲಿ ಶಕ್ತಿ, ಸಂಘಟನೆಗೆ ಸಾಕ್ಷಿ

KannadaprabhaNewsNetwork |  
Published : Jan 14, 2026, 02:30 AM IST
ಹೊನ್ನಾಳಿ ಫೋಟೋ 13ಎಚ್.ಎಲ್.ಐ1  ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ  ಹಮ್ಮಿಕೊಂಡಿದ್ದ ಹರ ಜಾತ್ರೆಯ  ಪೂರ್ವಭಾವಿ ಸಭೆಯನ್ನುದ್ದೇಶಿಸಿ ರಾಜ್ಯ ವೀರಶೈವ ಪಂಚಮಸಾಲಿ ಸಮಾಜದ ಅಧ್ಯಕ್ಷ ಸೋಮನಗೌಡ ಪಾಟೀಲ್ ಮಾತನಾಡಿದರು | Kannada Prabha

ಸಾರಾಂಶ

ಪಂಚಮಸಾಲಿ ಸಮಾಜ ವತಿಯಿಂದ ಹರಿಹರ ನಗರ ಸಮೀಪದ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಜ.15ರ ಗುರುವಾರ ಹರ ಜಾತ್ರೆ ನಡೆಯಲಿದೆ. ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಕಿತ್ತೂರು ರಾಣಿ ಚೆನ್ನಮ್ಮಳ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ರಾಜ್ಯ ವೀರಶೈವ ಪಂಚಮಸಾಲಿ ಸಮಾಜದ ಅಧ್ಯಕ್ಷ ಸೋಮನಗೌಡ ಪಾಟೀಲ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪಂಚಮಸಾಲಿ ಸಮಾಜ ವತಿಯಿಂದ ಹರಿಹರ ನಗರ ಸಮೀಪದ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಜ.15ರ ಗುರುವಾರ ಹರ ಜಾತ್ರೆ ನಡೆಯಲಿದೆ. ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಕಿತ್ತೂರು ರಾಣಿ ಚೆನ್ನಮ್ಮಳ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ರಾಜ್ಯ ವೀರಶೈವ ಪಂಚಮಸಾಲಿ ಸಮಾಜದ ಅಧ್ಯಕ್ಷ ಸೋಮನಗೌಡ ಪಾಟೀಲ್ ಹೇಳಿದರು.

ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಹರ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. 15 ದಿನಗಳಿಂದ ಹರ ಜಾತ್ರೆ ಯಶಸ್ವಿಗೊಳಿಸುವ ಸಲುವಾಗಿ ಪೂರ್ವಸಿದ್ಧತಾ ಸಭೆಗಳನ್ನು ನಡೆಸಲಾಗುತ್ತಿದೆ. ಹರಪೀಠ ಹಾಗೂ ರಾಜ್ಯ ಸಮಿತಿಯು 18 ಜಿಲ್ಲೆಗಳಲ್ಲಿ ಸಭೆ ನಡೆಸಿ ಹರ ಜಾತ್ರೆಗೆ ಆಗಮಿಸುವಂತೆ ಸಮಾಜ ಬಾಂಧವರಲ್ಲಿ ಮನವಿ ಮಾಡಲಾಗಿದೆ. 25 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. ಹತ್ತಿರದ ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಹರ ಜಾತ್ರೆಗೆ ಭಕ್ತರು ಬರಬೇಕು ಎಂದು ಮನವಿ ಮಾಡಿದರು.

ಹರಪೀಠದ ಆಡಳಿತಾಧಿಕಾರಿ ಡಾ. ರಾಜಕುಮಾರ್ ಮಾತನಾಡಿ, 200 ರು.ಗಳ ನಾಣ್ಯವನ್ನು ಸಭೆಯಲ್ಲಿ ಬಿಡುಗಡೆಗೊಳಿಸುವ ಮೂಲಕ ಈ ಬಾರಿಯ ಹರ ಜಾತ್ರೆಯಲ್ಲಿ ಪಂಚಮಸಾಲಿ ಸಮಾಜದ ಶಕ್ತಿ, ಸಂಘಟನೆ ಪ್ರದರ್ಶನವಾಗಲಿದೆ ಎಂದರು.

ದಾಸೋಹ ಸಮಿತಿ ಅಧ್ಯಕ್ಷ ಪ್ರಕಾಶ್ ಪಾಟೀಲ್ ಮಾತನಾಡಿ, ಹರ ಜಾತ್ರೆಗೆ ಸಮಾಜದ ಬಂಧುಗಳು ದವಸ ಧಾನ್ಯ ರೊಟ್ಟಿ ಬುತ್ತಿಯನ್ನು ತಂದು ಸಭೆಯಲ್ಲಿ ಪಾಲ್ಗೊಳ್ಳುವ ಉತ್ಸಾಹದಲ್ಲಿದ್ದಾರೆ ಎಂದರು.

ಮಹಿಳಾ ರಾಜ್ಯ ಪ್ರಧಾನ ಕಾರ್ಯದರ್ಶಿ ರಶ್ಮಿ ನಾಗರಾಜ್ ಮಾತನಾಡಿ, ಸಭೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮಕ್ಕೆ ಮೆರುಗು ತರಬೇಕಿದೆ ಎಂದರು.

ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಬೆನಕನಹಳ್ಳಿ ವೀರಣ್ಣ ಮಾತನಾಡಿ, ಅವಳಿ ತಾಲೂಕುಗಳ ಗ್ರಾಮಗಳಿಗೆ ತೆರಳಿ ಸಮಾಜ ಬಾಂಧವರಲ್ಲಿ ಮನವಿ ಮಾಡಲಾಗಿದೆ. ಸಮಾಜದ 2 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿ ಸೇವೆಯಲ್ಲಿ ತೊಡಗುವರು. ಹರ ಜಾತ್ರೆಗೆ ಪಂಚಮಸಾಲಿ ಸಮಾಜದವರು ಸೇರಿದಂತೆ ಸಹೋದರ ಸಮಾಜದ ಎಲ್ಲ ಜನರು ಜಾತ್ರೆಯಲ್ಲಿ ಭಾಗವಹಿಸಲು ಮನವಿ ಮಾಡಿದರು.

ಸಮಾಜದ ಮುಖಂಡರಾದ ಪರಮೇಶ್ ಪಟ್ಟಣಶೆಟ್ಟಿ, ನ್ಯಾಮತಿ ಪಂಚಣ್ಣ ,ಚಂದ್ರಶೇಖರ್ ಪೂಜಾರ, ಬಸವರಾಜ್ ವೀರಾಪುರ, ಸಂತೋಷ್ ಹಾವೇರಿ, ಕುಂಕುದ ಹಾಲೇಶ್, ಅಶೋಕ್, ಸಾಯಿ ಹಾಲೇಶ್, ಕಾರಿಗನೂರು ಮಂಜಣ್ಣ, ಗಂಗಾಧರ್ ಹಾಗೂ ಹೊನ್ನಾಳಿ, ನ್ಯಾಮತಿ, ಅವಳಿ ತಾಲೂಕಿನ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಪೂರ್ವಭಾವಿ ಸಭೆಯಲ್ಲಿ ಮೃತ್ಯುಂಜಯ ಪಾಟೀಲ್ ಪ್ರಾರ್ಥನೆ ಮಾಡಿದರು. ಗಿರೀಶ್ ನಾಡಿಗ್ ನಿರೂಪಿಸಿದರು.

- - -

-13ಎಚ್.ಎಲ್.ಐ1.ಜೆಪಿಜಿ:

ಹೊನ್ನಾಳಿ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಹರ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ರಾಜ್ಯ ವೀರಶೈವ ಪಂಚಮಸಾಲಿ ಸಮಾಜ ಅಧ್ಯಕ್ಷ ಸೋಮನಗೌಡ ಪಾಟೀಲ್ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವೇ ಸುಗ್ಗಿ ಸಂಕ್ರಾಂತಿ
ಕೆರೂರು ಗ್ರಾಮಸ್ಥರಿಂದ ರಸ್ತೆ ಅತಿಕ್ರಮಣ ತೆರವಿಗೆ ಗಡುವ ನಿಗದಿ