ಕನ್ನಡಪ್ರಭ ವಾರ್ತೆ ಮಡಿಕೇರಿ
ಯೋಜನೆಗೆ ವಿರೋಧ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ‘ಕನ್ನಡಪ್ರಭ’ ಜೊತೆ ಮಾತನಾಡಿ, ನಾವು ಹಾರಂಗಿ ನೀರನ್ನು ಕುಡಿಯುತ್ತಿದ್ದೇವೆ. ಈಗಾಗಲೇ ನೀರು ಕಲುಷಿತಗೊಂಡಿದೆ. ಆದರೆ ಇದೀಗ ಬೋಟ್ ಚಾಲನೆ ಮಾಡಿ ನೀರು ಮತ್ತಷ್ಟು ಕಲುಷಿತಗೊಳ್ಳುತ್ತದೆ. ಇದರಿಂದ ಈ ನೀರು ಕುಡಿದು ಕಾಯಿಲೆ ಬರುತ್ತದೆ. ಆದ್ದರಿಂದ ಜಿಲ್ಲಾಧಿಕಾರಿ ಹಾಗೂ ಶಾಸಕರಿಗೆ ನಾವು ಮನವಿ ಮಾಡಿದ್ದೇವೆ. ಆದ್ದರಿಂದ ಜಲ ಸಾಹಸ ಕ್ರೀಡೆ ಉದ್ಘಾಟನೆ ಕಾರ್ಯಕ್ರಮ ಮುಂದೂಡಿದ್ದಾಗಿ ಹೇಳಿದ್ದಾರೆ.
ಈ ಬಗ್ಗೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ಜಲ ಸಾಹಸ ಕ್ರೀಡೆ ಕಾನೂನು ಪ್ರಕಾರ ಹಾಗೂ ಪರಿಸರಕ್ಕೆ ಪೂರಕವಾಗಿದ್ದರೆ ಅದಕ್ಕೆ ಅವಕಾಶ ನೀಡಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿ ಮೂಲಕ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ. ----------------ಹಾರಂಗಿ ಹಿನ್ನೀರಿನಲ್ಲಿ ಜಲ ಕ್ರೀಡೆ ನಡೆಸುವುದರಿಂದ ನೀರು ಕಲುಷಿತಗೊಳ್ಳುತ್ತದೆ. ಆದ್ದರಿಂದ ಈ ಜಲ ಕ್ರೀಡೆ ತಡೆ ಹಿಡಿಯಬೇಕು. ಜಲ ಕ್ರೀಡೆಯಿಂದ ಪ್ರವಾಸಿಗರಿಗೆ ಆಪತ್ತು ಎದುರಾಗಿದೆ. ಕಾಡಾನೆಗಳು ಕೂಡ ದಾಟುವ ಜಾಗ ಇದಾಗಿದ್ದು, ಇದರಿಂದ ಪ್ರವಾಸಿಗರ ಜೀವಕ್ಕೆ ಅಪಾಯ ಇದೆ. ಆದ್ದರಿಂದ ಈ ಜಲ ಕ್ರೀಡೆಯನ್ನು ಸ್ಥಗಿತಗೊಳಿಸಬೇಕು.-ಭಾಸ್ಕರ್ ನಾಯಕ್, ಅಧ್ಯಕ್ಷ ಕೂಡುಮಂಗಳೂರು ಗ್ರಾ.ಪಂ.
ನಾವು ಸರ್ಕಾರದ ನಿಯಮದಂತೆ ಹಾರಂಗಿ ಹಿನ್ನೀರಿನಲ್ಲಿ ಜಲ ಕ್ರೀಡೆಗೆ ಅನುಮತಿ ಪಡೆದುಕೊಂಡು ಇದನ್ನು ನಡೆಸುತ್ತಿದ್ದೇವೆ. ಜಲ ಕ್ರೀಡೆ ಮಾಡುವುದರಿಂದ ನೀರು ಕಲುಷಿತ ಆಗುವುದಿಲ್ಲ. ಅತಿಥಿಗಳಿಗೆ ಒತ್ತಡ ಇದ್ದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಿದ್ದೇವೆ. ಆದಷ್ಟು ಬೇಗ ಜಲ ಕ್ರೀಡೆಗೆ ಚಾಲನೆ ನೀಡುತ್ತೇವೆ. -ಮಂಜುನಾಥ್, ಸಿಇಒ, ಏಸ್ ಪ್ಯಾಡ್ಲರ್ಸ್ ಸಂಸ್ಥೆ.
------------ಸಾಹಸ ಜಲ ಕ್ರೀಡೆಯಲ್ಲಿ ಪರಿಸರಕ್ಕೆ ಪೂರಕವಾದ ನಿಯಮಗಳನ್ನು ಪಾಲಿಸಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಮೂಲಕ ಪರಿಶೀಲನೆ ನೀಡಿ ಅವಕಾಶ ಮಾಡಲಾಗುವುದು. ಹಾರಂಗಿ ವಿಶಾಲವಾದ ಜಾಗ, ಮಹಶೀರ್ ಮೀನಿನ ತಾಣವಾಗಿದೆ. ನಿಯಮ ಪ್ರಕಾರ ಅನುಮತಿ ಪಡೆದುಕೊಂಡಿದ್ದರೆ ಪರಿಶೀಲನೆ ಮಾಡಿ ಅವಕಾಶ ಮಾಡಲಾಗುವುದು. -ಡಾ. ಮಂತರ್ ಗೌಡ, ಮಡಿಕೇರಿ ಶಾಸಕ.