2025-26ರ ಆಯವ್ಯಯ ಮಂಡಿಸಿದ ಪುರಸಭಾ ಅಧ್ಯಕ್ಷೆ ಎಂ. ಪಾತೀಮಾಭಿಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಪುರಸಭಾ ಅಧ್ಯಕ್ಷೆ ಎಂ. ಪಾತೀಮಾಭಿ ಬಜೆಟ್‌ನ್ನು ಮಂಡಿಸಿದಾಗ ಸದಸ್ಯರು ಒಪ್ಪಿಗೆ ಸೂಚಿಸಿದರು.
ಆರಂಭಿಕ ನಗದು ಮತ್ತು ಬ್ಯಾಂಕ್ ಶಿಲ್ಕು ₹98,69,608, ನಿರೀಕ್ಷಿತ ಆದಾಯ ₹66,38,08,715 ಇದ್ದು ಒಟ್ಟು ಜಮಾ ₹67,36,78,323 ವಾಗುವ ನಿರೀಕ್ಷೆ ಇದೆ. ಅದರಲ್ಲಿ ₹66,31,09,672 ಒಟ್ಟು ನಿರೀಕ್ಷಿತ ಖರ್ಚು ಮಾಡಲಾಗಿದ್ದು, ₹ 1,05,68,651 ಉಳಿತಾಯ ಬಜೆಟ್ ನ್ನು ಮಂಡಿಸಲಾಯಿತು.ನಿರೀಕ್ಷಿತ ಆಧಾಯದ ವಿವರ:
ಮನೆ ಕಂದಾಯ ತೆರಿಗೆ ಶುಲ್ಕ- ₹1.54 ಕೋಟಿ, ವಾಣಿಜ್ಯ ಮಳಿಗೆಗಳ ಬಾಡಿಗೆ ಶುಲ್ಕ -₹70,83 ಲಕ್ಷ, ಹೊಸ ನಳ ಸಂಪರ್ಕ ಶುಲ್ಕ -₹5 ಲಕ್ಷ, ಅನಧಿಕೃತ ನಳಗಳನ್ನು ಅಧಿಕೃತ ಗೊಳಿಸುವ ಶುಲ್ಕ -₹7 ಲಕ್ಷ, ಖಾತೆ ಬದಲಾವಣೆ ಶುಲ್ಕ ₹3 ಲಕ್ಷ, ಕಟ್ಟಡ ಪರವಾನಿಗೆ ಶುಲ್ಕ -₹25 ಲಕ್ಷ, ಕೆರೆ ಅಭಿವೃದ್ದಿ ಶುಲ್ಕ -₹15 ಲಕ್ಷ, ವಿವಿಧ ಮಾರುಕಟ್ಟೆಗಳ ಹರಾಜು ಶುಲ್ಕ -₹13.50 ಲಕ್ಷ, ಅಕ್ರಮ ಸಕ್ರಮ ಯೋಜನೆಯಡಿ ಅಭಿವೃದ್ದಿ ಶುಲ್ಕದಿಂದ ಬರುವ ಆದಾಯ -₹5 ಲಕ್ಷ, ಮಳಿಗೆಗಳಿಂದ ಠೇವಣಿ ಮೊತ್ತ -₹30 ಲಕ್ಷ, ಹೀಗೆ ₹66,38,08,715 ಆದಾಯ ನಿರೀಕ್ಷಿಸಲಾಗಿದೆ.
ವೇತನ ಅನುದಾನ -₹7.30 ಕೋಟಿ, ಎಸ್‌ಎಫ್‌ಸಿ ಮುಕ್ತ ನಿಧಿ ಅನುದಾನ -₹41 ಲಕ್ಷ, ಬೀದಿ ದೀಪ ನಿರ್ವಹಣೆ -₹1.05 ಕೋಟಿ, ನೀರು ಸರಬರಾಜು ನಿರ್ವಹಣೆ -₹2.66 ಕೋಟಿ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ -₹10 ಲಕ್ಷ, ಬರಪರಿಹಾರ ಹಾಗೂ ಪ್ರಕೃತಿ ವಿಕೋಪಕ್ಕಾಗಿ ನಿರೀಕ್ಷಿಸಬಹುದಾದ ಅನುದಾನ -₹25 ಲಕ್ಷ, ಸ್ವಚ್ಛ ಭಾರತ ಅಭಿಯಾನಕ್ಕೆ -₹2.54 ಕೋಟಿ, ರಾಷ್ಟ್ರೀಯ ಹಬ್ಬಗಳ ಕಾರ್ಯಕ್ರಮ ವೆಚ್ಚ -₹4.50 ಲಕ್ಷ, ಪ್ರಕೃತಿ ವಿಕೋಪದಿಂದ ಹಾನಿಗೊಳಗಾದವರಿಗೆ ಪುರಸಭೆಯಿಂದ ಸಹಾಯ ಧನ ಪಾವತಿಗಾಗಿ -₹3.50 ಲಕ್ಷ, ರಸ್ತೆ ಬದಿಯ ಚರಂಡಿಗಳ ದುರಸ್ತಿ ಮತ್ತು ನಿರ್ವಹಣೆಗಾಗಿ ₹5 ಲಕ್ಷ, ಹೈಟೆಕ್ ಶೌಚಾಲಯ ನಿರ್ಮಾಣಕ್ಕಾಗಿ ₹35 ಲಕ್ಷ, ಪಟ್ಟಣ ವಾರ್ಡಗಳ ಪೈಕಿ ಈಗಾಗಲೇ ನಾಮಫಲಕ ಅಳವಡಿಸಿದ ವಾರ್ಡಗಳನ್ನು ಹೊರತು ಪಡಿಸಿ ಉಳಿದ ವಾರ್ಡಗಳಲ್ಲಿ ನಾಮಫಲಕ ಅಳವಡಿಸಲು ₹25 ಲಕ್ಷ, ಪಟ್ಟಣದ 27 ವಾರ್ಡಗಳಲ್ಲಿ ಅವಶ್ಯಕತೆ ಇರುವ ಕಡೆ ಎಲ್ ಇ ಡಿ ಲೈಟ್ ಅಳವಡಿಸುವುದಕ್ಕಾಗಿ ₹1.50 ಕೋಟಿ, ಪಾರ್ಕ್ ಅಭಿವೃದ್ಧಿಗಾಗಿ ₹ 15 ಲಕ್ಷ, ಪುರಸಭಾ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗಾಗಿ ₹ 1.50 ಕೋಟಿ ಹೀಗೆ ಒಟ್ಟು 66,31,09,672 ಖರ್ಚನ್ನು ನಿರೀಕ್ಷಿಸಲಾಗಿದೆ.
ಹಿರಿಯ ಸದಸ್ಯ ಎಂ.ವಿ. ಅಂಜಿನಪ್ಪ ಉತ್ತಮ ಬಜೆಟ್ ಮಂಡಿಸಿದ್ದಕ್ಕಾಗಿ ಅಧ್ಯಕ್ಷರಿಗೆ ಮುಖ್ಯಾಧಿಕಾರಿಗಳಿಗೆ, ಶಾಸಕರಿಗೆ ಅಭಿನಂದಿಸಿದರು.