ಕುಕನೂರು: ಪಟ್ಟಣದ ಜೆಸ್ಕಾಂ ಕಾರ್ಯಾಲಯದಲ್ಲಿನ ಎಇಇ ನಾಗರಾಜ ಗುತ್ತಿಗೆದಾರರಿಗೆ ಲಂಚ ಕೊಡದಿದ್ದರೆ ಫೈಲ್ ಅಪ್ರೋಲ್ ಮಾಡದೇ ವಿನಾ ಕಾರಣ ಹೇಳಿ ಮುಂದೆ ದೂಡುತ್ತಾರೆ, ಇವರಿಂದ ಕೆಲಸಕ್ಕೆ ತೊಂದರೆಯಾಗಿದೆ. ಕೂಡಲೆ ಅವರನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಕುಕನೂರು ತಾಲೂಕು ಸಂಘದಿಂದ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿ ಜೆಸ್ಕಾಂ ಕಚೇರಿಗೆ ಮನವಿ ಸಲ್ಲಿಸಿದರು.
ಇದಲ್ಲದೆ ಮೊನ್ನೆ ನಡೆದ ಗುದ್ನೇಶ್ವರ ಜಾತ್ರೆಯಲ್ಲಿ ಪ್ರತಿ ವರ್ಷದಂತೆ ನಾವು ಮೀಟರ್ ಅಳವಡಿಸಿ ವಿದ್ಯುತ್ ಸರಬರಾಜು ಮಾಡುತ್ತಿದ್ದೇವು, ಆದರೆ ಈ ವರ್ಷ ತಾವೇ ಒಂದು ಬಲ್ಬಿಗೆ ಇಂತಿಷ್ಟು ಎಂದು ನಿಗದಿ ಪಡಿಸಿ ನಮಗೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು. ಜಾತ್ರೆಯಲ್ಲಿ ಸುಮಾರು ೧೫೦ ಅಂಗಡಿಗಳಿಂದ ಬರುವ ಸರ್ಕಾರದ ಹಣ ಕೊಳ್ಳೆ ಹೊಡೆದಿದ್ದಾರೆಂದು ಆರೋಪಿಸಿದ್ದಾರೆ. ಕೂಡಲೆ ಇವರನ್ನು ವರ್ಗಾಯಿಸಬೇಕು ಎಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷ ವಿಜಯಕುಮಾರ ಮಾರಾಠೆ, ಉಪಾಧ್ಯಕ್ಷ ಸಂಗಯ್ಯ ಸಾವಳಗಿಮಠ, ಕಾರ್ಯದರ್ಶಿ ವಿಜಯಕುಮಾರ ಅಂಗಡಿ, ಸ.ಕಾ ಮಹೇಶ ವಕ್ಕಳದ, ನೀಲಪ್ಪ ಕುರಿ, ದೇವಪ್ಪ ಶಿಳ್ಳಿನ, ಧರ್ಮಣ್ಣ ಜೈನ್, ಮಾಜೀದ್ ಮುಲ್ಲಾ, ಮೈನುದ್ದೀನ್ ಮಕಾಂದಾರ್, ರಿಜ್ವಾನ್ ನದಾಫ್, ಖಾದೀರಸಾಬ ನದಾಫ್, ತಿಮ್ಮಣ್ಣ ಸೋಮಸಾಗರ್ ಇನ್ನಿತರರಿದ್ದರು.