ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕರು, ಸಾಮಾಜಿಕ ಜಾಲತಾಣದಲ್ಲಿ ಹಳೆ ವೀಡಿಯೋ ಫಾರ್ವರ್ಡ್ ಆಗಿದ್ದು, ರಾಜ್ಯ ರೈತ ಮೋರ್ಚಾದ ಕಾರ್ಯಕಾರಿಣಿ ಯಮುನಾ ಚೆಂಗಪ್ಪ, ಕಾಂಗ್ರೆಸ್‌ಗೆ ಪಾಕಿಸ್ತಾನದಿಂದ ಹಣ ಬರುತ್ತಿದೆ ಎಂದು ಫಾರ್ವಡ್ ಮಾಡಿದ್ದಕ್ಕೆ ಅವರ ಮೇಲೆ 107 ದೂರು ದಾಖಲಿಸಲಾಗುತ್ತದೆ. ಅಲ್ಲದೆ ರಾತ್ರೋ ರಾತ್ರಿ ಪಕ್ಷದ ಕಾರ್ಯಕರ್ತರನ್ನು ಬಂಧಿಸಲಾಗುತ್ತಿದೆ. ವೈಯಕ್ತಿಕ ಹತಾಶೆ ಮನೋಭಾವನೆಯಿಂದ ಬಿಜೆಪಿಯ ಕಾರ್ಯಕರ್ತರ ಮೇಲೆ ದೂರು ದಾಖಲಿಸಲಾಗುತ್ತಿದೆ ಎಂದರು.ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ಕುಶಾಲನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಬ್ಲಾಕ್ ಮಾಡಿ ನಮಾಜ್ ಮಾಡಲಾಗಿದೆ. ಇದನ್ನು ಕೇಳುವವರಿಲ್ಲ. ಈ ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಅನುಮತಿ ಪಡೆದುಕೊಂಡಿದ್ದಾರೆಯೇ? ಅವರ ಮೇಲೆ ಯಾಕೆ ಪ್ರಕರಣ ದಾಖಲಿಸಿಲ್ಲ ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರು ಅನುದಾನ ಇಲ್ಲದೆ ಕೊರಗುವಂತಾಗಿದೆ. ಆದರೆ ಕೊಡಗಿನ ಶಾಸಕರು 250 ಕೋಟಿ ರುಪಾಯಿ ತಂದಿದ್ದೇವೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಕೇಂದ್ರದ ಯೋಜನೆಯಾದ ಅಮೃತ್ 1 ಹಾಗೂ ಅಮೃತ್ 2 ಯೋಜನೆಯಡಿ ವಿರಾಜಪೇಟೆ ಕುಡಿಯುವ ನೀರು ಯೋಜನೆಗೆ 58 ಕೋಟಿ ರು., ಸೋಮವಾರಪೇಟೆಗೆ 15 ಕೋಟಿ ರು. ಬಂದಿದ್ದು, ಇದನ್ನೇ ತಮ್ಮ ಯೋಜನೆ ಎಂದು ವಿರಾಜಪೇಟೆ ಶಾಸಕರು ಸುಳ್ಳು ಹೇಳುತ್ತಿದ್ದಾರೆ. ಈ ಯೋಜನೆಗೆ ನಮ್ಮ ಸರ್ಕಾರದ ಅವಧಿಯಲ್ಲಿಯೇ ಆಡಳಿತಾತ್ಮಕ ಅನುಮೋದನೆ ದೊರಕಿತ್ತು ಎಂದ ಬೋಪಯ್ಯ, ದಾಖಲೆ ಪ್ರತಿಯನ್ನು ಪ್ರದರ್ಶನ ಮಾಡಿದರು.* ಕಾಮಗಾರಿಯಲ್ಲಿ ಬದಲಾವಣೆ
ಭಾಗಮಂಡಲದಲ್ಲಿ ಹೊಸ ಕಾಮಗಾರಿ ಮಾಡಬೇಕಾದರೆ ಅಷ್ಠಮಂಗಲ ಪ್ರಶ್ನೆ ಮಾಡಬೇಕು ಎಂದು ತೀರ್ಮಾನಿಸಲಾಗಿತ್ತು. ಅಲ್ಲದೆ ಇಲ್ಲಿನ ಅಭಿವೃದ್ಧಿಗೆ ಸ್ಥಳೀಯರ ತಕರಾರು ಕೂಡ ಇದೆ. ಆದರೆ ಈಗ ಟೆಂಡರ್ ಕೂಡ ಕರೆಯದೆ ಭಾಗಮಂಡಲದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
* ಅಲ್ಪಸಂಖ್ಯಾತರಿಗೆ ಅನುದಾನ
ಸೋಮವಾರಪೇಟೆ ಆಸ್ಪತ್ರೆಯಲ್ಲಿ 12 ವೈದ್ಯರು ಇದ್ದರು. ಆದರೆ ಈಗ ಇಬ್ಬರು ಮಾತ್ರ ಇದ್ದಾರೆ. ಜಿಲ್ಲೆಯಲ್ಲಿ ಪಿಡಿಒಗಳ ಕೊರತೆ ಇದೆ. ಜನಪ್ರತಿನಿಧಿಗಳು ಏನು ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಕಾಳಪ್ಪ ಮಾತನಾಡಿ, ಏ.14 ರಂದು ಮೈಸೂರಿಗೆ ಪ್ರಧಾನಿ ಮೋದಿ ಅವರು ಆಗಮಿಸುತ್ತಿದ್ದಾರೆ. ಕೊಡಗಿನಿಂದ ನೂರಕ್ಕೂ ಅಧಿಕ ಬಸ್‌ಗಳಲ್ಲಿ ಹತ್ತು ಸಾವಿರ ಮಂದಿ ಬಿಜೆಪಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.