- ಮೂಲಸೌಲಭ್ಯ ಒದಗಿಸುವ ಗುರಿ: ಅಧ್ಯಕ್ಷೆ । ಪೌರಾಯುಕ್ತರಿಗೆ ಧಿಕ್ಕಾರ ಕೂಗಿ ಸಭಾತ್ಯಾಗ - - - ಕನ್ನಡಪ್ರಭ ವಾರ್ತೆ ಹರಿಹರ
ನಗರಸಭೆ ಸಭಾಂಗಣದಲ್ಲಿ ಗುರುವಾರ 2025-26ನೇ ಸಾಲಿನ ಬಜೆಟ್ ಮಂಡಿಸಿ ಮಾತನಾಡಿದ ಅವರು, ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವ ಗುರಿಯನ್ನು ಪ್ರಸಕ್ತ ಸಾಲಿನ ಬಜೆಟ್ ಒಳಗೊಂಡಿದೆ ಎಂದರು.
ಪ್ರಮುಖ ವೆಚ್ಚಗಳು:ಪರಿಸರಸ್ನೇಹಿ ಅಂಗನವಾಡಿಗಳ ನಿರ್ಮಾಣಕ್ಕೆ ₹25 ಲಕ್ಷ, ಫುಡ್ ಸ್ಟ್ರೀಟ್ ನಿರ್ಮಾಣಕ್ಕೆ ₹25 ಲಕ್ಷ, ಉದ್ಯಾನಗಳ ಅಭಿವೃದ್ಧಿ ₹100 ಲಕ್ಷ, ಗಿಡಗಳ ನೆಟ್ಟು ಸಂರಕ್ಷಣೆಗೆ ₹6 ಲಕ್ಷ, ಸ್ಮಶಾನಗಳ ಅಭಿವೃದ್ಧಿಗೆ ₹25 ಲಕ್ಷ, ನೀರಿನ ಘಟಕ ನಿರ್ಮಾಣಕ್ಕೆ ರಾಜನಹಳ್ಳಿ ಅಥವಾ ಮಾಕನೂರು ಬಳಿ ಜಮೀನು ಖರೀದಿಗೆ ₹250 ಲಕ್ಷ, ಹರಿಹರೇಶ್ವರ ದೇವಸ್ಥಾನ ಬಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ₹30 ಲಕ್ಷ, ಕೊಳವೆಬಾವಿ, ಇಂಗುಗುಂಡಿಗಳ ನಿರ್ಮಾಣಕ್ಕೆ ₹25 ಲಕ್ಷ, ಬೀದಿಗಳಿಗೆ ನಾಮಫಲಕ ಅಳವಡಿಕೆಗೆ ₹31 ಲಕ್ಷ, ನಗರದ 4 ದಿಕ್ಕುಗಳ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಸ್ವಾಗತ ಕಮಾನ್ ನಿರ್ಮಾಣಕ್ಕೆ ₹50 ಲಕ್ಷ, ರಸ್ತೆ, ಚರಂಡಿ, ಸೇತುವೆ ನಿರ್ಮಾಣಕ್ಕೆ ₹900 ಲಕ್ಷ ಮೀಸಲಿಡಲಾಗಿದೆ ಎಂದರು.
ಆದಾಯಗಳು:
ಬಜೆಟ್ ವಿಶ್ಲೇಷಿಸಿ ಮಾತನಾಡಿದ ಹಿರಿಯ ಸದಸ್ಯ ಶಂಕರ್ ಖಟಾಕರ್, ಹಿಂದಿನ ಬಜೆಟ್ ಅಂಕಿ ಅಂಶಗಳನ್ನೇ ಹೆಚ್ಚು ಕಡಿಮೆ ಮಾಡಿ ಮಂಡಿಸಿರುವ ಬಜೆಟ್ ಇದಾಗಿದೆ. ಈ ಬಜೆಟ್ ಕೂಡ ಪುಸ್ತಕದ ಬದನೇಕಾಯಿ ಆಗದೇ ಕಾರ್ಯರೂಪಕ್ಕೆ ಬರಬೇಕೆಂದು ತಿಳಿಸಿದರು.
ಸದಸ್ಯ ದಾದಾ ಖಲಂದರ್ ಮಾತನಾಡಿ, ಕಳೆದ ಐದು ವರ್ಷಗಳಿಂದ ಬಜೆಟ್ ಅಂಶಗಳು ಜಾರಿಗೊಂಡಿಲ್ಲ. ಈ ಬಜೆಟ್ ನಮ್ಮ ಅವಧಿಯ ಕೊನೆಯ ಬಜೆಟ್ ಆಗಿದೆ. ಇದು ಅಧ್ಯಕ್ಷರು ರೂಪಿಸಿರುವ ಬಜೆಟ್ ಅಲ್ಲ, ಪೌರಾಯುಕ್ತರು ರೂಪಿಸಿರುವ ಬಜೆಟ್ ಆಗಿದೆ. ಈ ಬಜೆಟ್ಟಿನಲ್ಲಿ ಹುರಳಿಲ್ಲ ಎಂದು ಬೇಸರ ವ್ಯಕ್ತಪಡಿಸಿ, ಪೌರಾಯುಕ್ತರಿಗೆ ಧಿಕ್ಕಾರ ಕೂಗುತ್ತಾ ಸಭಾತ್ಯಾಗ ಮಾಡಿದರು.
ಸದಸ್ಯ ಎಸ್.ಎಂ. ವಸಂತ್ ಮಾತನಾಡಿ, ನಲ್ಮ್ ಯೋಜನೆಯಡಿ 25ಕ್ಕೂ ಹೆಚ್ಚು ಮಳಿಗೆಗಳನ್ನು ನಿರ್ಮಿಸಿದ್ಧೀರಿ. ಅವುಗಳನ್ನು ಹರಾಜು ಮಾಡಿ ಫಲಾನುಭವಿಗಳಿಗೆ ಹಂಚಿಕೆ ಮಾಡಿಲ್ಲ. ಇದು ನಗರಸಭೆ ಆದಾಯಕ್ಕೆ ಹೊಡೆತ ಬಿಡುತ್ತಿದೆ ಎಂದರು.
ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ, ಉಪಾಧ್ಯಕ್ಷ ಎಂ. ಜಂಬಣ್ಣ, ಸದಸ್ಯರಾದ ಆಟೋ ಹನುಮಂತಪ್ಪ, ಸೈಯದ್ ಅಬ್ದುಲ್ ಅಲೀಂ, ಇಬ್ರಾಹಿಂ, ಕೆ.ಜಿ.ಸಿದ್ದೇಶ್, ಸುಮಿತ್ರಮ್ಮ ಮರಿದೇವ, ರೇಷ್ಮಾಬಾನು, ಫಕ್ಕೀರಮ್ಮ, ಲಕ್ಷ್ಮೀ ಮೋಹನ್, ರತ್ನಮ್ಮ ಡಿ.ಯು., ಶಾಜಾದ್ ಸನಾಉಲ್ಲಾ, ಆರ್.ಸಿ. ಜಾವೀದ್, ಶಾಹೀನಾ ಬಾನು, ನಿಂಬಕ್ಕ ಚಂದಾಪುರ, ಎಂ.ಎಸ್.ಬಾಬುಲಾಲ್, ಅಶ್ವಿನಿ ಕೃಷ್ಣ, ಕವಿತಾ ಕೆ.ಬಿ.ರಾಜಶೇಖರ್,ಸಂತೋಷ ದೊಡ್ಮನಿ ಸೇರಿದಂತೆ ಇತರರಿದ್ದರು.
ಹರಿಹರದಲ್ಲಿ ನಗರಸಭಾ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ 2025-26ನೇ ಸಾಲಿನ ಆಯವ್ಯಯ ಮಂಡನೆ ಮಾಡಿದರು.