2026ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹರಿಹರ ತಾಲೂಕು ಗಮನಾರ್ಹ ಸಾಧನೆ ಮಾಡಿದ್ದು, ಒಟ್ಟಾರೆ ಶೇ. 94.61ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಮೂಲಕ ಜಿಲ್ಲಾಮಟ್ಟದಲ್ಲಿ ತಾಲೂಕು 3ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ ಶೇ.60.78ರಷ್ಟು ಫಲಿತಾಂಶದೊಂದಿಗೆ 6ನೇ ಸ್ಥಾನದಲ್ಲಿದ್ದ ಹರಿಹರ, ಈ ಬಾರಿ ಉತ್ತಮ ಮುನ್ನಡೆ ಸಾಧಿಸಿರುವುದು ವಿಶೇಷ.
- ಕಳೆದ ವರ್ಷ ಶೇ.60.78 ಫಲಿತಾಂಶದೊಂದಿಗೆ 6ನೇ ಸ್ಥಾನ । ಪರೀಕ್ಷೆ ಬರೆದವರು ಒಟ್ಟು 2855 ಮಕ್ಕಳು
- - -
ಕನ್ನಡಪ್ರಭ ವಾರ್ತೆ ಹರಿಹರ
2026ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹರಿಹರ ತಾಲೂಕು ಗಮನಾರ್ಹ ಸಾಧನೆ ಮಾಡಿದ್ದು, ಒಟ್ಟಾರೆ ಶೇ. 94.61ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಮೂಲಕ ಜಿಲ್ಲಾಮಟ್ಟದಲ್ಲಿ ತಾಲೂಕು 3ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ ಶೇ.60.78ರಷ್ಟು ಫಲಿತಾಂಶದೊಂದಿಗೆ 6ನೇ ಸ್ಥಾನದಲ್ಲಿದ್ದ ಹರಿಹರ, ಈ ಬಾರಿ ಉತ್ತಮ ಮುನ್ನಡೆ ಸಾಧಿಸಿರುವುದು ವಿಶೇಷ.
ತಾಲೂಕಿನಾದ್ಯಂತ ಒಟ್ಟು 2855 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 1375 ಬಾಲಕರು ಹಾಗೂ 1480 ಬಾಲಕಿಯರು ಪರೀಕ್ಷೆ ಬರೆದಿದ್ದರು. ಇವರಲ್ಲಿ 1271 ಬಾಲಕರು ಮತ್ತು 1430 ಬಾಲಕಿಯರು ಸೇರಿದಂತೆ ಒಟ್ಟು 2701 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಬಾಲಕಿಯರದ್ದೇ ಮೇಲುಗೈ: ಈ ಬಾರಿಯ ಫಲಿತಾಂಶದಲ್ಲಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ಬರೆದ ಬಾಲಕಿಯರ ಪೈಕಿ ಶೇ. 96.62ರಷ್ಟು ಮಂದಿ ಉತ್ತೀರ್ಣರಾಗಿದ್ದರೆ, ಬಾಲಕರ ಉತ್ತೀರ್ಣ ಪ್ರಮಾಣ ಶೇ. 92.44ರಷ್ಟಿದೆ.
ತಾಲೂಕಿನ 11 ಸರ್ಕಾರಿ, 7 ಅನುದಾನಿತ, 8 ಅನುದಾನ ರಹಿತ ಸೇರಿ ಒಟ್ಟು 27 ಶಾಲೆಗಳು ಶೇ. 100ರಷ್ಟು ಪಲಿತಾಂಶ ಪಡೆದಿದ್ದರೆ, 11 ಸರ್ಕಾರಿ, 16 ಅನುದಾನಿತ, 9 ಅನುದಾನ ರಹಿತ ಸೇರಿ ಒಟ್ಟು 36 ಶಾಲೆಗಳು ಶೇ. 80 ಕ್ಕಿಂತ ಅಧಿಕ ಪಲಿತಾಂಶ ಪಡೆದಿವೆ. ವಿವಿಧ ಶಾಲೆ 18 ವಿದ್ಯಾರ್ಥಿಗಳು 599ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ.
ಶೇ.100 ರಷ್ಟು ಪಲಿತಾಂಶ ಪಡೆದ ಶಾಲೆಗಳು: ಬಿಳಸನೂರಿನ ಸರ್ಕಾರಿ ಪ್ರೌಢಶಾಲೆ, ಹೊಳೆಸಿರಿಗೆರೆಯ ಜಿ.ಜೆ.ಸಿ, ಕುರುಬರಹಳ್ಳಿಯ ಮಾನ್ಯತಾ ಗರ್ಲ್ಸ್ ರೆಸಿಡೆನ್ಷಿಯಲ್ ಸ್ಕೂಲ್, ಮಲೇಬೆನ್ನೂರಿನ ಭಾನು ಹೈ-ಟೆಕ್ ಹೈಸ್ಕೂಲ್, ಹರಿಹರದ ಸೇಂಟ್ ಮೇರಿಸ್ ಇಂಗ್ಲಿಷ್ ಹೈಸ್ಕೂಲ್, ಕಲರ್ಸ್ ಸ್ಕೂಲ್, ಶ್ರೀಮತಿ ಹಾಲಮ್ಮ ಎಸ್.ಎಸ್ ಹೈಸ್ಕೂಲ್, ಪೀಸ್ ಇಂಟರ್‌ನ್ಯಾಷನಲ್ ಸ್ಕೂಲ್, ಕುಣೆಬೆಳಕೆರೆಯ ಬಾಪೂಜಿ ಹೈಸ್ಕೂಲ್, ಉಕ್ಕಡಗಾತ್ರಿಯ ಶ್ರೀ ಗುರು ಕರಿ ಬಸವೇಶ್ವರ ಹೈಸ್ಕೂಲ್, ಹನಗವಾಡಿಯ ಎಸ್.ಬಿ.ಪಿ.ಕೆ. ಜಿ.ಹೆಚ್.ಎಸ್, ಕಡರನಾಯಕನಹಳ್ಳಿಯ ಜಿ.ಹೆಚ್.ಎಸ್, ನಂದಿತಾವರೆಯ ಶ್ರೀ ಬಸವೇಶ್ವರ ಹೈಸ್ಕೂಲ್, ಮಲೇಬೆನ್ನೂರಿನ ಜಾಮಿಯಾ ನ್ಯಾಷನಲ್ ಇಂಗ್ಲಿಷ್ ಹೆಚ್.ಪಿ.ಎಸ್ ಮತ್ತು ಹೆಚ್.ಎಸ್, ಕುಂಬಳೂರಿನ ಜಿ.ಜೆ.ಸಿ, ಹರಿಹರದ ಕಾಳಿದಾಸ ಹೈಸ್ಕೂಲ್, ಜಿ.ಎಂ.ಸಿ.ಜಿ ಹೈಸ್ಕೂಲ್, ಶ್ರೀ ರಂಗನಾಥ ಸ್ವಾಮಿ ಸಮಗ್ರ ಶಿಕ್ಷಣ ಹೈಸ್ಕೂಲ್, ಶ್ರೀ ಸಿದ್ದಲಿಂಗೇಶ್ವರ ಹೈಸ್ಕೂಲ್, ರಾಜನಹಳ್ಳಿಯ ಜಿ.ಹೆಚ್.ಎಸ್, ಹಾಲಿವಾಣದ ಜಿ.ಹೆಚ್.ಎಸ್, ಕೊಕ್ಕನೂರಿನ ಜಿ.ಹೆಚ್.ಎಸ್, ನಂದಿಗುಡಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ, ದೇವರಬೆಳಕೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ , ಕೊಂಡಜ್ಜಿಯ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ, ಹೊಳೆಸಿರಿಗೆರೆಯ ಎಸ್.ಎಂ.ಹೆಚ್ ಹೈಸ್ಕೂಲ್, ಹೊಸಹಳ್ಳಿಯ ಶ್ರೀ ಜ್ಞಾನಾಕ್ಷಿ ವಿದ್ಯಾನಿಕೇತನ ಹೈಸ್ಕೂಲ್.
600ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳು: ಎಂಕೆಟಿಎಲ್‌ಕೆ ಹೈಸ್ಕೂಲ್‌ನ ಹನೀಶಾ ಜಿ.ಟಿ, ಪೂಜಾ ಎನ್, ರಕ್ಷಾ ಬಿ.ಕೆ , ಮಾನ್ಯತಾ ಗರ್ಲ್ಸ್ ರೆಸಿಡೆನ್ಷಿಯಲ್ ಶಾಲೆಯ ಚಂದನಾ ಕೆ.ಎಸ್, ವಡ್ಡೆ ಪಾವನಿ, ಅನುಶ್ರೀ ಕೆ, ಅರ್ಚನಾ ವೀರಪ್ಪ ದೊಡ್ಡೋಲಿ , ರಾಜರಾಜೇಶ್ವರಿ ಹೈಸ್ಕೂಲ್‌ನ ಸೈಯದಾ ಕೌನೈನ್ ಫಾತಿಮಾ , ಶ್ರೀ ಜ್ಞಾನಾಕ್ಷಿ ವಿದ್ಯಾನಿಕೇತನ ಹೈಸ್ಕೂಲ್‌ನ ವಿನಯ್ ಕೆ, ಕೀರ್ತನಾ ಹೆಚ್.ಎಸ್ , ಸೇಂಟ್ ಮೇರಿಸ್ ಹೈಸ್ಕೂಲ್‌ನ ಸೌಮ್ಯಾ ಎಂ, ಶ್ರದ್ಧಾ ಜೈನ್ ಹೆಚ್.ಎ , ಬಸವೇಶ್ವರ ಹೈಸ್ಕೂಲ್‌ನ ಹೇಮಂತ್ ಹೆಚ್.ಸಿ , ಕೆ.ಎನ್.ಹಳ್ಳಿಯ ಸರ್ಕಾರಿ ಹೈಸ್ಕೂಲ್‌ನ ಪಲ್ಲವಿ ಟಿ.ಎಲ್ , ಹೊಳೆಸಿರಿಗೆರೆಯ ಸರ್ಕಾರಿ ಪದವಿಪೂರ್ವ ಕಾಲೇಜಿನ ನಯನ ಟಿ.ಹೆಚ್ , ಪಟೇಲ್ ಗುರುಬಸಪ್ಪ ಹೈಸ್ಕೂಲ್‌ನ ಸಿಂಚನಾ ಜಿ.ಆರ್ , ಮರಿಯಾ ನಿವಾಸ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‌ನ ಕೀರ್ತನಾ ಎಸ್.ವಿ, ನಂದಿಗುಡಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಿಂಚನಾ ಬಿ.ಎಸ್.
- - -
(ಬಾಕ್ಸ್) * ವಿದ್ಯಾರ್ಥಿನಿಯರ ಪ್ರಾಬಲ್ಯ
ಹರಿಹರ: ನಗರದ ಎಂಕೆಇಟಿಎಲ್‌ಕೆ ಹೈಸ್ಕೂಲ್‌ನ ವಿದ್ಯಾರ್ಥಿನಿ ಹನೀಶಾ ಜಿ.ಟಿ. 616 ಅಂಕ ಪಡೆದು ತಾಲೂಕಿಗೆ ಅಗ್ರಗಣ್ಯಳಾದರೆ, ಕುರುಬರಹಳ್ಳಿಯ ಮಾನ್ಯತಾ ಶಾಲೆಯ ವಿದ್ಯಾರ್ಥಿನಿ ಚಂದನಾ ಕೆ.ಎಸ್. ಹಾಗೂ ಒಡೆಯರ ಬಸಾಪುರ ಗ್ರಾಮದ ರಾಜರಾಜೇಶ್ವರ ಶಾಲೆಯ ಸಹಿದಾ ಕೌನೇನ ಫಾತಿಮಾ ತಲಾ 615 ಅಂಕ ಪಡೆಯುವ ಮೂಲಕ ಮೊದಲ ಮೂರು ಸ್ಥಾನಗಳಲ್ಲಿ ವಿದ್ಯಾರ್ಥಿನಿಯರು ಪ್ರಾಬಲ್ಯ ಸಾಧಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.