ಕನ್ನಡಪ್ರಭ ವಾರ್ತೆ ಮೈಸೂರು
ತಬಲಾ ವಾದಕ ರಾಮದಾಸ ಭಟ್ ಶಿರಸಿ ತಬಲಾ ಹಾಗೂ ಕಮಲಾಕರ್ ಹೆಗಡೆ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರಾದ ನಾರಾಯಣ ದಾಸ ಅವರದ್ದು ಕೀತ೯ನೆಯಲ್ಲಿ ಜನಪ್ರಿಯ ಹೆಸರು. ಸಂತ ಭದ್ರಗಿರಿ ಅಚ್ಯುತದಾಸರು ಮತ್ತು ಸಂತ ಭದ್ರಗಿರಿ ಕೇಶವ ದಾಸರ ಮಾಗ೯ದಶ೯ನದಲ್ಲಿ ಕೀರ್ತನೆಯನ್ನು ಅಧ್ಯಯನ ಮಾಡಿದರು.1986ರಲ್ಲಿ ಹರಿದ್ವಾರದಲ್ಲಿ ಅಚ್ಯುತದಾಸರಿಂದ ಹರಿದಾಸ ದೀಕ್ಷೆಯನ್ನು ಪಡೆದರು. ಮಹಾರಾಷ್ಟ್ರ,ಮುಂಬೈ, ಕುಲಾ೯, ಸಾಯನ್ ಮುಂತಾದ ಕಡೆಗಳಲ್ಲಿ ಕೀತ೯ನೆ ಮಾಡಿ ಅಪಾರ ಜನಮನ್ನಣೆ ಗಳಿಸಿದ್ದಾರೆ. ನಮ್ಮ ರಾಜ್ಯದ ಹುಬ್ಬಳ್ಳಿ, ಧಾರವಾಡ, ಕಾರವಾರ, ಬೆಳಗಾವಿ, ಮಂಗಳೂರು, ಬೆಂಗಳೂರು, ಮೈಸೂರು ಹೀಗೆ ಬಹುತೇಕ ಎಲ್ಲ ಕಡೆಗಳಲ್ಲಿಯೂ ಹರಿಕಥೆ ಮಾಡಿ ಜನರನ್ನು ಭಕ್ತಿ ಭಾವ ರಸದಲ್ಲಿ ತೇಲಿಸಿದ್ದಾರೆ. ಬೆಂಗಳೂರಿನ ಶಿಳ್ಗೆ ಕಂಪನಿ ಇವರಿಂದ ಮಹಿಷಾಸುರ ಮರ್ದಿನಿ, ಶಿರಸಿ ಶ್ರೀ ಮಾರಿಕಾಂಬೆ ಮಹಾತ್ಮೆ, ಶ್ರೀ ಗುರು ಶ್ರೀಧರ ಸ್ವಾಮಿ ಚರಿತ್ರೆ, ಶ್ರೀ ಇಡಗುಂಜಿ ಕ್ಷೇತ್ರ ಮಹಾತ್ಮೆ, ರಾಮಭಕ್ತ ಆಂಜನೇಯ ಮುಂತಾದ ಕೀರ್ತನೆಗಳು ಬಿಡುಗಡೆಗೊಂಡು ಜನಪ್ರಿಯವಾಗಿವೆ. ಶ್ರೀ ಸ್ವರ್ಣವಲ್ಲೀ ಮಠಾಧೀಶರು, ಉಡುಪಿಯ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಹುಬ್ಬಳ್ಳಿಯ ಮೂರು ಸಾವಿರ ಮಠದ ಸ್ವಾಮೀಜಿ, ಧಮ೯ಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆ ಅವರು ಸನ್ಮಾನ ಮಾಡಿ ಗೌರವಿಸಿದ್ದಾರೆ. 1998 ರಲ್ಲಿ ಬೆಂಗಳೂರಿನ ಅಖಿಲ ಹವ್ಯಕ ಮಹಾಸಭಾ ಶ್ರೀ ನಾರಾಯಣ ದಾಸರಿಗೆ ಹರಿದಾಸ ರತ್ನ ಬಿರುದು ನೀಡಿ ಗೌರವಿಸಿದೆ.ಮೈಸೂರಿನ ರಾಮಕೃಷ್ಣ ಆಶ್ರಮ, ಪಂಡಾರಪುರದ ದೇಗುಲದಲ್ಲಿಯೂ ಕೀರ್ತನೆ ಮಾಡಿ ಜನಮನ್ನಣೆ ಗಳಿಸಿದ್ದಾರೆ. ಇಂದು ನಮ್ಮ ನಾಡಿನ ಕೆಲವೇ ಕೆಲವು ಕೀರ್ತನಕಾರರಲ್ಲಿ ಶ್ರೀ ನಾರಾಯಣ ದಾಸ ಅವರ ಹೆಸರು ಮುಂಚೂಣಿಯಲ್ಲಿದೆ.