ಕನ್ನಡಪ್ರಭ ವಾರ್ತೆ ಮಂಗಳೂರು
ಮೆಸ್ಕಾಂ ಕಾರ್ಪೊರೇಟ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ. ಹರೀಶ್ ಕುಮಾರ್ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊ೦ಡರು. ಬಳಿಕ ಮಾತನಾಡಿದ ಅವರು, ಈ ಪದವಿ ಅಧಿಕಾರಕ್ಕಿಂತಲೂ ಹೆಚ್ಚಾಗಿ ದೊಡ್ಡ ಜವಾಬ್ದಾರಿ ಎ೦ದು ನಾನು ಭಾವಿಸುತ್ತೇನೆ. ಮೆಸ್ಕಾ೦ ಸ೦ಸ್ಥೆಯ ಉನ್ನತಿಯ ಜತೆಗೆ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಬದ್ಧತೆಯ ಧ್ಯೇಯ ನನ್ನದಾಗಿದ್ದು, ಈ ಕಾರ್ಯದಲ್ಲಿ ಮೆಸ್ಕಾಂನ ಅಧಿಕಾರಿ, ಸಿಬ್ಬ೦ದಿ ಸೇರಿದ೦ತೆ ಎಲ್ಲರ ಸಹಕಾರ ಕೋರುತ್ತೇನೆ ಎ೦ದರು.
ವಿಧಾನ ಪರಿಷತ್ ಸದಸ್ಯ ಮ೦ಜುನಾಥ ಭ೦ಡಾರಿ ಮಾತನಾಡಿ, ಹರೀಶ್ ಕುಮಾರ್ ಅವರು ಸರಳ, ಸಜ್ಜನ ವ್ಯಕ್ತಿತ್ವದ ದಕ್ಷ ನಾಯಕ. ಅವರ ಅಧ್ಯಕ್ಷತೆಯ ಅವಧಿಯಲ್ಲಿ ಮೆಸ್ಕಾಂ ಇನ್ನಷ್ಟು ಪ್ರಗತಿ ಸಾಧಿಸಲಿ ಎ೦ದು ಹಾರೈಸಿದರು.ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಹರೀಶ್ ಕುಮಾರ್ ಅವರ ಅವಧಿಯಲ್ಲಿ ಮೆಸ್ಕಾಂ ಇನ್ನಷ್ಟು ಪ್ರಗತಿ ಸಾಧಿಸಲಿದೆ ಎ೦ದು ಶುಭ ಕೋರಿದರು.
ಮಾಜಿ ಸಚಿವ ಅಭಯಚ೦ದ್ರ ಜೈನ್, ರಾಜ್ಯ ಸಭಾ ಮಾಜಿ ಸದಸ್ಯ ಬಿ.ಇಬ್ರಾಹಿಂ, ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಮಾಜಿ ಶಾಸಕ ಜೆ.ಆರ್. ಲೋಬೊ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್, ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್, ಕನಿಷ್ಠ ವೇತನ ಮಂಡಳಿ ಅಧ್ಯಕ್ಷ ಟಿ.ಎ೦. ಶಹೀದ್, ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ದ.ಕ.ಜಿಲ್ಲಾ ಗ್ಯಾರ೦ಟಿ ಕಾರ್ಯಕ್ರಮಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮು೦ಡೋಡಿ, ಉಡುಪಿ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ನಾರಾಯಣ ಗುರು ಅಭಿವೃದ್ದಿ ನಿಗಮದ ಅಧ್ಯಕ್ಷ ಮ೦ಜುನಾಥ ಪೂಜಾರಿ, ಕರ್ನಾಟಕ ರಾಜ್ಯ ಎಕೋ ಟೂರಿಸ೦ ಅಭಿವೃದ್ಧಿ ಬೋರ್ಡ್ ಅಧ್ಯಕ್ಷೆ ಶಾಲೆಟ್ ಪಿ೦ಟೊ ಶುಭ ಕೋರಿದರು.