ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಸೋಮವಾರ ಬಂಡಿಗಣಿಯಲ್ಲಿ ಜರುಗಿದ ಸರ್ವ-ಧರ್ಮ ಸಮನ್ವಯತೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿಮಾತನಾಡಿ, ಧರ್ಮ ಮಾರ್ಗದಲ್ಲಿ ನಡೆಯಲು ಧಾರ್ಮಿಕ ಕಾರ್ಯಕ್ರಮಗಳು ಅಗತ್ಯ. ಈ ಮೂಲಕ ಪ್ರತಿಯೊಬ್ಬರೂ ಸಾರ್ಥಕ ಬದುಕು ಸಾಗಿಸಲು ಮತ್ತು ಸದ್ಬಾವನೆ ಬೆಳೆಸಿಕೊಳ್ಳಲು ಸಾಧ್ಯವೆಂದರು.
ಧರ್ಮದಲ್ಲಿ ಆಚರಣೆಗಳು ಭಿನ್ನವಾದರೂ ಕೊನೆಗೆ ಸೇರುವ ಗುರಿ ಮಾತ್ರ ಒಂದೇ. ಜಾತಿಗಿಂತ ನೀತಿ, ತತ್ವಕ್ಕಿಂತ ಆಚರಣೆ, ಮಾತಿಗಿಂತ ಕತ್ತಿ, ಬೋಧನೆಗಿಂತ ಸಾಧನೆ, ವ್ಯಕ್ತಿನಿಷ್ಠೆಗಿಂತ ತತ್ವನಿಷ್ಠೆ ಅಳವಡಿಸಿಕೊಂಡು ಧಾರ್ಮಿಕ ತಳಹದಿ ಸಂಸ್ಕಾರಭರಿತ ಸಮಾಜ ರೂಪುಗೊಳ್ಳಬೇಕು, ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಹಲವಾರು ಧರ್ಮಗಳಜನರು ಒಂದೇ ಸೂರಿನಡಿ ಸೌಹಾರ್ದತೆಯಿಂದ ಬದುಕುತ್ತಿದ್ದು, ಇದು ಸಂಸ್ಕೃತಿಯ ಮೂಲವೆಂದರು. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಮನಸ್ಸಿನಲ್ಲಿ ಸಮಭಾವ ಬೆಳೆಸುವ ಕೆಲಸವನ್ನು ಮಠ ನಿತ್ಯ ಮಾಡುತ್ತಿದೆಯೆಂದರು.ಜಿಪಂ ಅಧಿಕಾರಿ ಭೀಮಣ್ಣ ತಳವಾರ ಮಾತನಾಡಿ, ಆಶೀರ್ವವಚನ, ಸತ್ಕಾರ್ಯ, ಸೇವೆ, ದಾನಗಳಲ್ಲಿ ದೇವರನ್ನು ಕಾಣಬೇಕು. ಸಾತ್ವಿಕತೆ, ಸಂಸ್ಕಾರಗಳ ಮೂಲಕ ಭಾರತ ಜಗತ್ತಿಗೆ ಜಗದ್ಗುರುವಾಗಿದೆ. ಭಾರತೀಯರೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕುವ ಸನ್ನಿವೇಶವನ್ನು ಧಾರ್ಮಿಕ ಸಂದೇಶಗಳು ಸೃಷ್ಟಿಸುತ್ತವೆಯೆಂದರು.