ಕನ್ನಡಪ್ರಭ ವಾರ್ತೆ ಮಂಡ್ಯ
ಕಳೆದ ಹತ್ತು ತಿಂಗಳಿಂದ ಕೈಗಾರಿಕೆಗೆ ಅಗತ್ಯವಿರುವ ಭೂಮಿಯನ್ನು ರಾಜ್ಯ ಸರ್ಕಾರ, ಜಿಲ್ಲಾಡಳಿತವನ್ನು ಕೇಳುತ್ತಲೇ ಬರುತ್ತಿದ್ದಾರೆ. ಇದುವರೆಗೂ ಭೂಮಿಯನ್ನು ಏಕೆ ಮಂಜೂರು ಮಾಡಿಲ್ಲ. ಕೇಂದ್ರ ಬೃಹತ್ ಕೈಗಾರಿಕಾ ಇಲಾಖೆಯಿಂದ ಈಗಾಗಲೇ ಅಧಿಕಾರಿಗಳ ತಂಡ ಭೇಟಿ ನೀಡಿ ಜಿಲ್ಲಾಡಳಿತ ಗುರುತಿಸಿದ್ದ ಜಮೀನಿನಲ್ಲಿ ಬಸರಾಳು ವ್ಯಾಪ್ತಿಯಲ್ಲಿ ೧೦೦ ಎಕರೆ ಭೂಮಿ ಮಂಜೂರು ಮಾಡುವಂತೆ ಸಮ್ಮತಿಸಿದೆ. ಆದರೂ ಜಮೀನು ಕೊಡದ ರಾಜ್ಯಸರ್ಕಾರದ ಕ್ರಮವನ್ನು ಟೀಕಿಸದೆ ಕುಮಾರಸ್ವಾಮಿ ಬಗ್ಗೆ ಸಲ್ಲದ ಆರೋಪ ಮಾಡುತ್ತಿದ್ದೀರಿ ಎಂದು ಕಿಡಿಕಾರಿದರು.
ಮಾಜಿ ಶಾಸಕ ಅನ್ನದಾನಿ ಅವರ ಹಿನ್ನೆಲೆ ಕೆಣಕುವುದಾಗಿ ಹೇಳಿದ್ದೀರಿ. ನಾವೂ ಸಹ ನಿಮ್ಮ ಹಿನ್ನೆಲೆಯನ್ನು ಹೊರ ತೆಗೆಯಬೇಕಾಗುತ್ತದೆ. ರಾಜಕಾರಣ ಮಾಡುವವರು ರಾಜಕೀಯಕ್ಕೆ ಸೀಮಿತವಾಗಿ ಮಾತನಾಡಿ. ಅದನ್ನು ಬಿಟ್ಟು ವೈಯಕ್ತಿಕ ಟೀಕೆಗಳಿಗೆ ಆಸ್ಪದ ನೀಡಬೇಡಿ ಎಂದು ಎಚ್ಚರಿಕೆ ನೀಡಿದರಲ್ಲದೆ, ಅನಾವಶ್ಯಕವಾಗಿ ವೈಯಕ್ತಿಕ ವಿಚಾರಗಳನ್ನು ಬೀದಿಗೆ ಎಳೆದು ತರುವುದು ಸರಿಯಲ್ಲ ಎಂದರು.ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಅಭಿನಂದನೆ ಸಲ್ಲಿಸಲು ತೆರಳಿದ್ದ ನಿಮ್ಮನ್ನು ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕರು ಮನೆಯೊಳಗೇ ಬಿಟ್ಟುಕೊಳ್ಳದೆ ಅವಮಾನಕರವಾಗಿ ನಡೆಸಿಕೊಳ್ಳುವ ಮೂಲಕ ದಲಿತ ವಿರೋಧಿ ನೀತಿಯನ್ನು ಪ್ರದರ್ಶಿಸಿದ್ದಾರೆ. ಇದರ ವಿರುದ್ಧ ದನಿ ಎತ್ತದಿರುವುದು ನಿಮ್ಮ ರಾಜಕೀಯ ಅಸಹಾಯಕತೆಗೆ ಸಾಕ್ಷಿಯಾಗಿದೆ ಎಂದು ಮೂದಲಿಸಿದರು.
ಮುಖಂಡರಾದ ಕಾಂತರಾಜ್, ಬೊಮ್ಮರಾಜು, ಸಂತೋಷ್, ಶ್ರೆನಿವಾಸ್, ಭದ್ರಾಚಲಮೂರ್ತಿ ಗೋಷ್ಠಿಯಲ್ಲಿದ್ದರು.