ಹಾಸನಾಂಬೆ ಸನ್ನಿಧಿಗೆ ಹಾಸನಾಂಬೆಯ ಒಡವೆಗಳು

KannadaprabhaNewsNetwork |  
Published : Oct 27, 2026, 01:45 AM IST
26ಎಚ್ಎಸ್ಎನ್13 :  | Kannada Prabha

ಸಾರಾಂಶ

ಜಾತ್ರೆಯ ಸಂಪ್ರದಾಯದಂತೆ, ದೇವಿಯ ಆಭರಣಗಳನ್ನು ಇರಿಸಲಾಗಿರುವ ಖಜಾನೆಯಲ್ಲಿ ಎಸಿ ಜಗದೀಶ್ ಗಂಗಣ್ಣನವರ್ ಮತ್ತು ತಹಸೀಲ್ದಾರ್ ಗೀತಾ ಹಾಗೂ ಇತರರು ವಿಶೇಷ ಪೂಜೆ ನೆರವೇರಿಸಿದರು. ಪಂಜಿನವರು, ವಾದ್ಯವೃಂದದವರು ಹಾಗೂ ಅರ್ಚಕರ ಸಮಕ್ಷಮದಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ಮತ್ತು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ದೇವಿಯ ಆಭರಣಗಳಿಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ನೆರವೇರಿಸಲಾಯಿತು. ನಂತರ ಪೂಜಿಸಲಾದ ಆಭರಣಗಳನ್ನು ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು. ಅಕ್ಟೋಬರ್‌ ೨೯ರಂದು ದೇವಸ್ಥಾನದ ಬಾಗಿಲು ತೆರೆಯುವ ಸಂದರ್ಭದಲ್ಲಿ ದೇವಿಗೆ ಆಭರಣ ಹಾಗೂ ವಸ್ತ್ರಗಳನ್ನು ಸಮರ್ಪಿಸುವ ಮೂಲಕ ಈ ವರ್ಷದ ಹಾಸನಾಂಬ ದೇವಿ ಜಾತ್ರಾ ಮಹೋತ್ಸವದ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ.

ಹಾಸನ: ಈ ವರ್ಷದ ಶ್ರೀ ಹಾಸನಾಂಬಾ ಜಾತ್ರಾ ಮಹೋತ್ಸವದ ಅಂಗವಾಗಿ ನಗರದ ಸಾಲಗಾಮೆ ರಸ್ತೆ ಸಮೀಪದ ಜಿಲ್ಲಾ ಖಜಾನೆಯಲ್ಲಿ ಇಡಲಾಗಿದ್ದ ದೇವಿಯ ಚಿನ್ನಾಭರಣಗಳನ್ನು ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ ಸೋಮವಾರ ವಾದ್ಯಮೇಳದೊಂದಿಗೆ ಬೆಳ್ಳಿ ಸಾರೋಟಿನಲ್ಲಿ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು.ಜಾತ್ರೆಯ ಸಂಪ್ರದಾಯದಂತೆ, ದೇವಿಯ ಆಭರಣಗಳನ್ನು ಇರಿಸಲಾಗಿರುವ ಖಜಾನೆಯಲ್ಲಿ ಎಸಿ ಜಗದೀಶ್ ಗಂಗಣ್ಣನವರ್ ಮತ್ತು ತಹಸೀಲ್ದಾರ್ ಗೀತಾ ಹಾಗೂ ಇತರರು ವಿಶೇಷ ಪೂಜೆ ನೆರವೇರಿಸಿದರು. ಪಂಜಿನವರು, ವಾದ್ಯವೃಂದದವರು ಹಾಗೂ ಅರ್ಚಕರ ಸಮಕ್ಷಮದಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ಮತ್ತು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ದೇವಿಯ ಆಭರಣಗಳಿಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ನೆರವೇರಿಸಲಾಯಿತು. ನಂತರ ಪೂಜಿಸಲಾದ ಆಭರಣಗಳನ್ನು ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು. ಇದೇ ವೇಳೆ ಉಪವಿಭಾಗಧಿಕಾರಿ ಜಗದೀಶ್ ಗಂಗಣ್ಣನವರ್‌ ಮಾಧ್ಯಮದೊಂದಿಗೆ ಮಾತನಾಡಿ, ಅಕ್ಟೋಬರ್‌ ೨೯ರಂದು ದೇವಸ್ಥಾನದ ಬಾಗಿಲು ತೆರೆಯುವ ಸಂದರ್ಭದಲ್ಲಿ ದೇವಿಗೆ ಆಭರಣ ಹಾಗೂ ವಸ್ತ್ರಗಳನ್ನು ಸಮರ್ಪಿಸುವ ಮೂಲಕ ಈ ವರ್ಷದ ಹಾಸನಾಂಬ ದೇವಿ ಜಾತ್ರಾ ಮಹೋತ್ಸವದ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ.ಪ್ರತಿವರ್ಷದ ಸಂಪ್ರದಾಯದಂತೆ ನಡೆಯುವ ಈ ಧಾರ್ಮಿಕ ಆಚರಣೆಗಳು ಹಾಸನಾಂಬ ದೇವಿಯ ದರ್ಶನೋತ್ಸವದ ಮಹತ್ವವನ್ನು ಸಾರುತ್ತವೆ. ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಸಿದ್ಧತೆಗಳು ನಡೆಯುತ್ತಿವೆ.ತಹಸೀಲ್ದಾರ್‌ ಗೀತಾ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ, ಹಾಸನಾಂಬೆ ದೇವಿಯ ಜಾತ್ರಾ ಮಹೋತ್ಸವದ ಸಂಪ್ರದಾಯದಂತೆ ಖಜಾನೆಯಲ್ಲಿದ್ದ ದೇವಿಯ ಚಿನ್ನಾಭರಣಗಳಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದ ಬಳಿಕ ದೇವಸ್ಥಾನಕ್ಕೆ ಕೊಂಡೊಯ್ಯಲಾಗಿದೆ. ಈ ಸಂದರ್ಭದಲ್ಲಿ ಅರ್ಚಕರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ್ದು, ಪೊಲೀಸ್ ಇಲಾಖೆ ಬಿಗಿ ಭದ್ರತೆ ಒದಗಿಸಿದೆ ಎಂದು ತಿಳಿಸಿದರು. ದೇವಸ್ಥಾನದ ಬಾಗಿಲು ತೆರೆಯುವ ಹಿನ್ನೆಲೆಯಲ್ಲಿ ದೇವಿಯ ಚಿನ್ನಾಭರಣಗಳನ್ನು ಸಂಪ್ರದಾಯಬದ್ಧವಾಗಿ ದೇವಸ್ಥಾನಕ್ಕೆ ತಂದು, ಮುಂದಿನ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಪ್ರತಿವರ್ಷದಂತೆ ಈ ಬಾರಿಯೂ ಜಾತ್ರಾ ಮಹೋತ್ಸವದ ಆಚರಣೆಗಳಿಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಲ್ಮೀಕಿ ರಾಮಾಯಣದಿಂದ ಸಮಾಜಕ್ಕೆ ಸಂದೇಶ
ರುದ್ರಭೂಮಿ ಸ್ವಚ್ಛಗೊಳಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು