ಕನ್ನಡಪ್ರಭ ವಾರ್ತೆ ಹಾಸನ
ಸಬ್‌ಜೂನಿಯರ್ ವಿಭಾಗದ ಬೆಂಚ್ ಪ್ರೆಸ್‌ನಲ್ಲಿ ಹಾಸನ ಪವರ್‌ಲಿಫ್ಟಿಂಗ್‌ನ ಸಾಕ್ಷಿ ಎಸ್. ಗೌಡ ಹಾಗೂ ಏರೋ ಫಿಟ್ನೆಸ್‌ನ ಧನುಷ್ ಎಸ್. ಅವರು ಉತ್ತಮ ಪ್ರದರ್ಶನ ನೀಡಿದರು. ಜೂನಿಯರ್ ವಿಭಾಗದಲ್ಲಿ ದಲ್ಪಿನ್‌ನ ರಕ್ಷಿತಾ ಎಚ್. ಜೆ. ಹಾಗೂ ಐಡಿಯಲ್ ಜಿಮ್‌ನ ಓಂ ಮನೀಷ್ ಪ್ರಶಸ್ತಿ ಪಡೆದರು. ಸೀನಿಯರ್ ವಿಭಾಗದಲ್ಲಿ ಏರೋ ಫಿಟ್ನೆಸ್‌ನ ಸಿಂಚನ ಡಿ.ಆರ್. ಮತ್ತು ಮಂಜುನಾಥ್ ಎಸ್.ಆರ್. ಅವರು ಬೆಸ್ಟ್ ಲಿಫ್ಟರ್ ಗೌರವಕ್ಕೆ ಪಾತ್ರರಾದರು. ಮಾಸ್ಟರ್ ವಿಭಾಗದಲ್ಲಿ ಹಾಸನ ಪವರ್‌ಲಿಫ್ಟಿಂಗ್‌ನ ಶಿವಸ್ವಾಮಿ ಉತ್ತಮ ಸಾಧನೆ ಮಾಡಿದರು.ಪವರ್‌ಲಿಫ್ಟಿಂಗ್ ವಿಭಾಗದ ಸಬ್‌ಜೂನಿಯರ್ ವಿಭಾಗದಲ್ಲಿ ಹಾಸನ ಪವರ್‌ಲಿಫ್ಟಿಂಗ್‌ನ ಶ್ರಾವ್ಯ ಹಾಗೂ ಆಪಲ್ ಫಿಟ್ನೆಸ್‌ನ ಸುಫಿಯಾನ್ ಗಮನಾರ್ಹ ಪ್ರದರ್ಶನ ನೀಡಿದರು. ಜೂನಿಯರ್ ವಿಭಾಗದಲ್ಲಿ ಹಾಸನ ಪವರ್‌ಲಿಫ್ಟಿಂಗ್‌ನ ಮನನ ಜಿ.ಪಿ. ಹಾಗೂ ಸೈಯದ್ ಸಾಬೀರ್ ಪ್ರಶಸ್ತಿಗೆ ಭಾಜನರಾದರು. ಸೀನಿಯರ್ ವಿಭಾಗದಲ್ಲಿ ಬೀಯಿಂಗ್ ಫಿಟ್‌ನ ತನು ಪಿ. ಹಾಗೂ ಹಾಸನ ಪವರ್‌ಲಿಫ್ಟಿಂಗ್‌ನ ಸುನಿಲ್ ಎಂ.ಎಸ್. ಅವರು ಉತ್ತಮ ಸಾಧನೆ ಮಾಡಿದರು. ಮಾಸ್ಟರ್ ವಿಭಾಗದಲ್ಲಿ ಐಡಿಯಲ್ ಜಿಮ್‌ನ ಮಂಜುನಾಥ್ ಅವರು ಬೆಸ್ಟ್ ಲಿಫ್ಟರ್ ಗೌರವ ಪಡೆದರು.ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಪವರ್ ಲಿಪ್ಟಿಂಗ್ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ್ ಎಲ್.ಕೆ. ಮಾತನಾಡಿ, ಹಾಸನ ಜಿಲ್ಲೆಯಿಂದ ಪವರ್‌ಲಿಫ್ಟಿಂಗ್‌ನಲ್ಲಿ ಬಲಿಷ್ಠ ತಂಡವೊಂದನ್ನು ರೂಪಿಸುವ ಪ್ರಯತ್ನ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಕ್ರೀಡಾಪಟುಗಳಿಗೆ ಅಗತ್ಯವಿರುವ ಉತ್ತಮ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ಜಿಲ್ಲೆಯ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು.ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಹನುಮಂತೇಗೌಡ ಮಾತನಾಡಿ, ಪವರ್‌ಲಿಫ್ಟಿಂಗ್ ಉತ್ತಮ ಆರೋಗ್ಯ ಮತ್ತು ಶಿಸ್ತುಬದ್ಧ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗುವ ಕ್ರೀಡೆಯಾಗಿದೆ. ಮಕ್ಕಳು ಹಾಗೂ ಯುವಜನರು ಕ್ರೀಡೆಯತ್ತ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು, ಅದರ ಸದುಪಯೋಗ ಪಡೆದುಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಕ್ರೀಡಾ ಚಟುವಟಿಕೆಗಳ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ವೇಣುಗೋಪಾಲ್, ಶ್ರೀಧರ್ಮ, ತ್ರಿಭುವನ್, ಅಶ್ವತ್ಥ ಗೋಳೆನಹಳ್ಳಿ, ಶಿವಸ್ವಾಮಿ, ಸಂತೇಶ್, ಸದಸ್ಯರಾದ ಯಶೋಧಾ, ಹರ್ಷಿತಾ, ಗಿರೀಶ್ ಹಾಗೂ ಗೌರವ ಅಧ್ಯಕ್ಷರಾದ ಶ್ರೀನಿವಾಸ್ ಸೇರಿದಂತೆ ಪದಾಧಿಕಾರಿಗಳು ಮತ್ತು ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.