ಎಲ್ಲಾ ಕ್ಷೇತ್ರದಲ್ಲಿಯೂ ಹಾಸನ ಜಿಲ್ಲೆಯದ್ದು ಗುರುತರ ಸಾಧನೆ

KannadaprabhaNewsNetwork |  
Published : Jun 05, 2025, 01:33 AM IST
4ಎಚ್ಎಸ್ಎನ್17 :  | Kannada Prabha

ಸಾರಾಂಶ

ಜಿಲ್ಲೆ ಎಂದರೆ ಕ್ರೀಡೆ, ರಾಜಕೀಯ, ಕಲೆ, ಸಾಹಿತ್ಯ ಎಲ್ಲಾ ಕ್ಷೇತ್ರದಲ್ಲಿಯೂ ಕೂಡ ಭೂಪಟದಲ್ಲಿ ಹಾಸನ ಇದೆ ಎಂಬುದಕ್ಕೆ ಶಿಕ್ಷಣದಲ್ಲಿ ಕೀರ್ತಿ ತಂದುಕೊಟ್ಟಿರುವುದಕ್ಕೆ ವಿಶೇಷವಾಗಿ ಅಭಿನಂದನೆ ತಿಳಿಸುತ್ತೇವೆ ಎಂದು ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಶ್ಲಾಘನೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ಟರ್ನಿಂಗ್ ಪಾಯಿಂಟ್ ಎಂದರೇ ಪಿಯುಸಿ. ಪೋಷಕರು ಪಿಯು ಹಂತದಲ್ಲಿ ಮಕ್ಕಳಿಗೆ ಹೆಚ್ಚಿನ ಒತ್ತು ಕೊಡಬೇಕಾಗಿದೆ ಎಂದು ಕಿವಿಮಾತು ಹೇಳಿದರು. ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಯುವ ಮೊದಲು ಡಿಡಿಪಿಐ ಅವರು ಎಲ್ಲಾ ಶಿಕ್ಷಕರನ್ನು ಕರೆದು ಕಾರ್ಯಾಗಾರ ಮಾಡಿ ಹೆಚ್ಚಿನ ಪಲಿತಾಂಶ ಮಾಡಲು ಕಾರಣಕರ್ತರಾಗಿದ್ದಾರೆ ಎಂದು ಇದೇವೇಳೆ ಶ್ಲಾಘನೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆ ಎಂದರೆ ಕ್ರೀಡೆ, ರಾಜಕೀಯ, ಕಲೆ, ಸಾಹಿತ್ಯ ಎಲ್ಲಾ ಕ್ಷೇತ್ರದಲ್ಲಿಯೂ ಕೂಡ ಭೂಪಟದಲ್ಲಿ ಹಾಸನ ಇದೆ ಎಂಬುದಕ್ಕೆ ಶಿಕ್ಷಣದಲ್ಲಿ ಕೀರ್ತಿ ತಂದುಕೊಟ್ಟಿರುವುದಕ್ಕೆ ವಿಶೇಷವಾಗಿ ಅಭಿನಂದನೆ ತಿಳಿಸುತ್ತೇವೆ ಎಂದು ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಶ್ಲಾಘನೆ ವ್ಯಕ್ತಪಡಿಸಿದರು. ನಗರದ ಹೊಸಲೈನ್ ರಸ್ತೆ ಬಳಿ ಇರುವ ಸೆಂಟ್ ಜೋಸೆಫ್ ಶಾಲೆ ಸಭಾಂಗಣದಲ್ಲಿ ಶಾಸಕರಾದ ಸ್ವರೂಪ್ ಪ್ರಕಾಶ್ ಸಂಯುಕ್ತಾಶ್ರಯದಲ್ಲಿ ಬುಧವಾರದಂದು ಹಮ್ಮಿಕೊಳ್ಳಲಾಗಿದ್ದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಶಾಲೆಗಳಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದ ಶಾಲಾ ಮುಖ್ಯ ಶಿಕ್ಷಕರಿಗೂ ಕೂಡ ಸನ್ಮಾನ ಮಾಡಿ ಗೌರವಿಸಲಾಗುತ್ತಿದೆ. ೬೨೫ಕ್ಕೆ ೬೨೫ ಪಡೆದಂತಹ ಉಲ್ಲಾಸ್ ಪಟೇಲ್, ಮರುಮೌಲ್ಯ ಮಾಪನದಲ್ಲಿ ಅರಸೀಕೆರೆಯ ವಿದ್ಯಾರ್ಥಿ ೬೨೫ ಅಂಕ ಪಡೆದಿದ್ದು, ಹಾಸನ ಜಿಲ್ಲೆ ಎಂದರೇ ಕ್ರೀಡೆ, ರಾಜಕೀಯ, ಕಲೆ, ಸಾಹಿತ್ಯ ಎಲ್ಲಾ ಕ್ಷೇತ್ರದಲ್ಲಿಯೂ ಕೂಡ ಭೂಪಟದಲ್ಲಿ ಹಾಸನ ಇದೆ ಎಂಬುದಕ್ಕೆ ಕೀರ್ತಿ ತಂದುಕೊಟ್ಟಿರುವುದಕ್ಕೆ ವಿಶೇಷವಾಗಿ ಅಭಿನಂದನೆ ತಿಳಿಸುತ್ತೇವೆ ಎಂದರು.

ಅನೇಕರು ೬೦೦ಕ್ಕೂ ಹೆಚ್ಚು ಅಂಕ ಪಡೆದಿರುವುದನ್ನು ಗುರುತಿಸಿ ಸರಕಾರಿ ಮತ್ತು ಖಾಸಗಿ ವಿದ್ಯಾರ್ಥಿಗಳನ್ನು ಕರೆಸಿ ಸನ್ಮಾನಿಸಿ ಗೌರವಿಸಲಾಗಿದೆ ಎಂದರು. ವಿದ್ಯಾರ್ಥಿಗಳನ್ನು ಶಿಕ್ಷಕರು ಏನಾದರೂ ಬೈದು, ಹೊಡೆದು ಬುದ್ದಿವಾದ ಹೇಳಿದರೇ ಪೋಷಕರು ಬಂದು ಶಿಕ್ಷಕರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕೆನ್ನುವ ರೀತಿಯಲ್ಲಿ ಮಾತನಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಪೋಷಕರು ಮಕ್ಕಳಿಗೆ ಎಸ್.ಎಸ್.ಎಲ್.ಸಿ.ಯಲ್ಲಿ ಮಾತ್ರ ಒತ್ತಡ ಕೊಟ್ಟು ಪಿಯುಸಿಯಲ್ಲಿ ಸ್ವಲ್ಪ ಕಡಿಮೆ ಆಗುತ್ತಿದೆ. ವಿದ್ಯಾರ್ಥಿಗಳಿಗೆ ಟರ್ನಿಂಗ್ ಪಾಯಿಂಟ್ ಎಂದರೇ ಪಿಯುಸಿ. ಪೋಷಕರು ಪಿಯು ಹಂತದಲ್ಲಿ ಮಕ್ಕಳಿಗೆ ಹೆಚ್ಚಿನ ಒತ್ತು ಕೊಡಬೇಕಾಗಿದೆ ಎಂದು ಕಿವಿಮಾತು ಹೇಳಿದರು. ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಯುವ ಮೊದಲು ಡಿಡಿಪಿಐ ಅವರು ಎಲ್ಲಾ ಶಿಕ್ಷಕರನ್ನು ಕರೆದು ಕಾರ್ಯಾಗಾರ ಮಾಡಿ ಹೆಚ್ಚಿನ ಪಲಿತಾಂಶ ಮಾಡಲು ಕಾರಣಕರ್ತರಾಗಿದ್ದಾರೆ ಎಂದು ಇದೇವೇಳೆ ಶ್ಲಾಘನೆ ವ್ಯಕ್ತಪಡಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಶೇಖರ್, ನಮ್ಮ ದೇಶದ ಗಡಿ ಕಾಯುವ ಯೋಧರಿಗೆ, ಅನ್ನ ಕೊಡುವ ರೈತರಿಗೆ ಹಾಗೂ ಶಿಕ್ಷಕಣ ಕೊಡುವ ನಮ್ಮ ಶಿಕ್ಷಕರಿಗೆ ಜವಾಬ್ದಾರಿ ಹೆಚ್ಚು ಇದೆ. ಸಂತ ಜೋಸೆಫ್ ಶಾಲೆಯಲ್ಲಿ ಶಾಸಕರು ಹಾಗೂ ಎಚ್.ಡಿ. ಕುಮಾರಸ್ವಾಮಿ ಓದಿದ್ದಾರೆ. ಹಾಸನಾಂಬೆ ಕೃಪೆಯಿಂದ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ. ಇದಕ್ಕೆ ಎಲ್ಲಾ ಹಂತದ ಶಿಕ್ಷಣ ಸಂಸ್ಥೆಯು ತಂಡವಾಗಿ ವಿದ್ಯಾರ್ಥಿಗಳನ್ನ ತಯಾರು ಮಾಡಿದ್ದಾರೆ ಎಂದರು.

ಶಾಲೆ ಬಿಟ್ಟವರಿಗೆ ಶಾಲೆಗೆ ಬರುವಂತೆ ಶಿಕ್ಷಕರು ಮಾಡಬೇಕು. ಶಾಸಕರು ಸರಕಾರಿ ಶಾಲೆಗೆ ಅನುದಾನ ಕೊಡಲು ಸಿದ್ಧರಿದ್ದಾರೆ. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕಳೆದ ಬಾರಿ ಆರನೇ ಸ್ಥಾನದಲ್ಲಿ ಇರುವಂತೆ ಈ ಬಾರಿ ಅದೇ ಸ್ಥಾನ ಉಳಿಸಿಕೊಂಡಿದ್ದೇವೆ. ಶಾಲೆ ಪ್ರಾರಂಭದಿಂದಲೇ ಶಿಕ್ಷಕರು ಮಕ್ಕಳನ್ನು ಸಿದ್ಧಪಡಿಸಬೇಕಾಗಿದೆ. ಯಾರು ಕೂಡ ಪರೀಕ್ಷೆಯಿಂದ ಹೊರ ಉಳಿಯಬಾರದು. ಇದರಿಂದ ಶಿಕ್ಷಣದಿಂದ ವಂಚಿತರಾಗುತ್ತಾರೆ. ಜಿಲ್ಲೆಯ ಸ್ಥಾನಮಾನ ಮೊದಲ ಸ್ಥಾನಕ್ಕೆ ಬರುವ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳನ್ನು ತಯಾರು ಮಾಡಬೇಕು. ಮಂಗಳೂರು, ಉಡುಪಿ ಸ್ಥಾನಕ್ಕೆ ಹಾಸನ ಜಿಲ್ಲೆ ಬರಲೇಬೇಕು. ಹಾಸನಾಂಬೆ ದೇವಿ ಆಶೀರ್ವಾದ ಸಿಗಲಿ ಎಂದು ಹಾರೈಸಿದರು. ಶಿಕ್ಷಣಕ್ಕೆ ತನ್ನದೆಯಾದ ಶಕ್ತಿ ಇದ್ದು, ದೇಶದ ಪ್ರಗತಿ ಶಿಕ್ಷಣದಿಂದ ಸಾಧ್ಯ ಎಂದು ಹೇಳಿದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ೪೦ಕ್ಕೂ ಹೆಚ್ಚು ಜನ ವಿದ್ಯಾರ್ಥಿಗಳು ಹಾಗೂ ಶಾಲೆಯಲ್ಲಿ ನೂರಕ್ಕೆ ನೂರರಷ್ಟು ಶೇಕಡವಾರು ಫಲಿತಾಂಶ ಪಡೆದ ಮುಖ್ಯ ಶಿಕ್ಷಕರನ್ನು ಇದೇ ವೇಳೆ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಶಿಕ್ಷಣ ಇಲಾಖೆಯ ಎಚ್.ಟಿ. ಗೀತಾ, ಆನಂದ್, ಫಾದರ್ ಲಿಯೋ, ಬಸವರಾಜು, ಖಾಸಗಿ ಶಿಕ್ಷಣ ಸಂಸ್ಥೆ ಸಂಘದ ಶಿವರಾಮೇಗೌಡ, ಚಂದ್ರಶೇಖರ್, ನೋಡಲ್ ಅಧಿಕಾರಿ ಮಲ್ಲಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV

Recommended Stories

ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ
ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ