ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು

KannadaprabhaNewsNetwork |  
Published : Jun 05, 2025, 01:32 AM IST
ಫೋಟೋ 04 ಟಿಟಿಎಚ್ 01: ಬಾಳ ಗಾರು ಸಮೀಪ ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿರುವ ಕೆರೆಗೆ ಬಿದ್ದ ಕಾರು. | Kannada Prabha

ಸಾರಾಂಶ

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮಂಗಳವಾರ ತಡರಾತ್ರಿ ರಾಷ್ಟ್ರೀಯ ಹೆದ್ದಾರಿಯ ಬಾಳಗಾರು ಸಮೀಪ ಕಡಿದಾದ ತಿರುವಿನಲ್ಲಿರುವ ಕೆರೆಗೆ ಬಿದ್ದಿದ್ದು ಕಾರಿನ ಚಾಲಕ ಪವಾಡ ಸದೃಶವಾಗಿ ಬದುಕುಳಿದಿದ್ದಾರೆ.

ತೀರ್ಥಹಳ್ಳಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮಂಗಳವಾರ ತಡರಾತ್ರಿ ರಾಷ್ಟ್ರೀಯ ಹೆದ್ದಾರಿಯ ಬಾಳಗಾರು ಸಮೀಪ ಕಡಿದಾದ ತಿರುವಿನಲ್ಲಿರುವ ಕೆರೆಗೆ ಬಿದ್ದಿದ್ದು ಕಾರಿನ ಚಾಲಕ ಪವಾಡ ಸದೃಶವಾಗಿ ಬದುಕುಳಿದಿದ್ದಾರೆ. ಶಿವಮೊಗ್ಗ ನಗರದ ಆರ್‌ಎಂಎಲ್ ನಗರದ ವಾಸಿ ಮಹಮ್ಮದ್ ಫಿರ್ದೂಸ್ ತೀರ್ಥಹಳ್ಳಿಯಿಂದ ಶಿವಮೊಗ್ಗದ ಕಡೆಗೆ ಟಾಟಾ ಹ್ಯಾರಿಯರ್ ಕಾರ್ ನಲ್ಲಿ ಹೋಗುವ ವೇಳೆ ಅವಘಡ ಸಂಭವಿಸಿದೆ . ತಡರಾತ್ರಿ ಸುಮಾರು 2 ಗಂಟೆ ವೇಳೆಗೆ ಎದುರಿನಿಂದ ಬಂದ ಬಸ್ಸಿಗೆ ದಾರಿ ಮಾಡಿಕೊಡುವ ವೇಳೆ ಈ ಅಪಘಾತ ಸಂಭವಿಸಿದ್ದು, ಬಸ್ಸಿನ ಪ್ರಯಾಣಿಕರು ಕಾರು ಚಾಲಕನಿಗೆ ನೆರವಾಗಿದ್ದರು ಎನ್ನಲಾಗಿದೆ. ಕಾರು ನೇರವಾಗಿ ಹೆದ್ದಾರಿ ಬದಿಯ ಬೇಲಿಯನ್ನು ಬೇಧಿಸಿ ಕೆರೆಗೆ ಬಿದ್ದಿದೆ, ಕೆರೆಯಲ್ಲಿ ನೀರು ಕಡಿಮೆ ಇದ್ದುದಲ್ಲದೆ ಕಾರು ಮಗುಚದ ಕಾರಣ ಚಾಲಕ ಅಪಾಯದಿಂದ ಪಾರಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌