ನ್ಯಾಷನಲ್ ವಾಲಿಬಾಲ್‌ನಲ್ಲಿ ಹಾಸನ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳ ಮಿಂಚಿನ ಸಾಧನೆ

KannadaprabhaNewsNetwork |  
Published : Sep 16, 2026, 01:45 AM IST
15ಎಚ್ಎಸ್ಎನ್9 :  | Kannada Prabha

ಸಾರಾಂಶ

ತರಬೇತುದಾರ ವಾಸುದೇವ್ ಮಾತನಾಡಿ, ಕ್ರೀಡಾಪಟುಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಮುಂದೆ ಇನ್ನಷ್ಟು ಸಾಧನೆ ಮಾಡಲಿ ಎಂದು ಹಾರೈಸಿದರು. ವಿದ್ಯಾರ್ಥಿಗಳಾದ ಅತೀಶ್ರೀ, ರೋಹಿಣಿ, ಸೃಷ್ಟಿ, ಗುಣಶ್ರೀ, ಜಿಯಾ, ಸಾನ್ವಿ ಹಾಗೂ ೧೪ರ ವಯೋಮಾನದ ನಮೃತ, ದಕ್ಷತಾ, ಹಿತೈಷಿ, ಯುಕ್ತಿ,ಧನ್ಯಶ್ರೀ, ರಿಷಿತಾ, ಭವಿಷಾ, ವೈಭವಿ, ವೈಶಾಲಿ, ಲಿಖಿತ, ಶಿಕ್ಷಕಿ ರೂಪಾಲಿ ಮತ್ತಿತರರು ಹಾಗೂ ಪೋಷಕರು ಉಪಸ್ಥಿತರಿದ್ದರು.

ಹಾಸನ: ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು ಇತ್ತೀಚೆಗೆ ದೆಹಲಿಯ ಆಗ್ರಾದಲ್ಲಿ ನಡೆದ ನ್ಯಾಷನಲ್ ವಾಲಿಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಂಡು ೧೭ ವರ್ಷದೊಳಗಿನ ಬಾಲಕಿಯರ ತಂಡ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದುಕೊಂಡಿದ್ದು, ೧೪ರ ವಯೋಮಾನದೊಳಗಿನ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆಯುವ ಮೂಲಕ ಬಹುಮಾನ ತನ್ನದಾಗಿಸಿಕೊಂಡಿದ್ದಾರೆ. ಪಂದ್ಯಾವಳಿಯಲ್ಲಿ ಪಾಲ್ಗೊಂಡು ಹಾಸನಕ್ಕೆ ಹಿಂದಿರುಗಿದ ತಂಡವನ್ನು ನಗರದ ಬಸ್ ನಿಲ್ದಾಣದಲ್ಲಿ ಪೋಷಕರು ಮತ್ತು ಕ್ರೀಡಾಸಕ್ತರು ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ತರಬೇತುದಾರರಾದ ಜಿ.ಎಸ್ .ವಾಸುದೇವ್ ಅವರನ್ನು ಪೋಷಕರು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ೧೭ ವಯಸ್ಸಿನೊಳಗಿನ ವಿದ್ಯಾರ್ಥಿನಿಯರ ತಂಡದ ನಾಯಕಿ ಕುಮಾರಿ ಸೃಷ್ಟಿ ಮಾತನಾಡಿ, ಹಾಸನ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಶಿಕ್ಷಕ ವೃಂದ ಹಾಗೂ ತರಬೇತುದಾರರಾದ ರಮೇಶ್, ವಾಸುದೇವ ಅವರ ಮಾರ್ಗದರ್ಶನದಿಂದಾಗಿ ನ್ಯಾಷನಲ್ಸ್ ನಲ್ಲಿ ಪ್ರಥಮ ಸಾಧನೆ ಮಾಡಿದ್ದು, ನಮ್ಮ ತಂಡಕ್ಕೆ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದ ಶಿಕ್ಷಕರು ಪೋಷಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ತರಬೇತುದಾರ ವಾಸುದೇವ್ ಮಾತನಾಡಿ, ಕ್ರೀಡಾಪಟುಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಮುಂದೆ ಇನ್ನಷ್ಟು ಸಾಧನೆ ಮಾಡಲಿ ಎಂದು ಹಾರೈಸಿದರು. ವಿದ್ಯಾರ್ಥಿಗಳಾದ ಅತೀಶ್ರೀ, ರೋಹಿಣಿ, ಸೃಷ್ಟಿ, ಗುಣಶ್ರೀ, ಜಿಯಾ, ಸಾನ್ವಿ ಹಾಗೂ ೧೪ರ ವಯೋಮಾನದ ನಮೃತ, ದಕ್ಷತಾ, ಹಿತೈಷಿ, ಯುಕ್ತಿ,ಧನ್ಯಶ್ರೀ, ರಿಷಿತಾ, ಭವಿಷಾ, ವೈಭವಿ, ವೈಶಾಲಿ, ಲಿಖಿತ, ಶಿಕ್ಷಕಿ ರೂಪಾಲಿ ಮತ್ತಿತರರು ಹಾಗೂ ಪೋಷಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಡು ರಸ್ತೆಯಲ್ಲೇ ಗಣೇಶಮೂರ್ತಿ ಇಟ್ಟು ಯುವಕರ ಪ್ರತಿಭಟನೆ
ವಿಜೃಂಭಣೆಯಿಂದ ನಡೆದ 46ನೇ ವರ್ಷದ ಗಣಪತಿ ಪೂಜಾ ಮಹೋತ್ಸವ