ಹಾಸನ ಜಿಲ್ಲೆ ಪ್ರವಾಸಿ ತಾಣಗಳತ್ತ ಹಾಸನಾಂಬೆ ಭಕ್ತರು ದೌಡು

KannadaprabhaNewsNetwork |  
Published : Oct 28, 2024, 01:00 AM ISTUpdated : Oct 28, 2024, 01:01 AM IST
27ಎಚ್ಎಸ್ಎನ್18 :  | Kannada Prabha

ಸಾರಾಂಶ

ಹಾಸನ ಜಿಲ್ಲೆಯ ಅನೇಕ ಸ್ಥಳಗಳ ಪ್ಯಾಕೇಜ್ ಪ್ರವಾಸ ರೂಪಿಸಿದೆ. ಈ ಪ್ಯಾಕೇಜ್‌ನಲ್ಲಿ ಕೆಲವರು ಪ್ರವಾಸ ಹೋದರೆ, ಮತ್ತೆ ಕೆಲವು ಯಾತ್ರಾರ್ಥಿಗಳು ಸ್ವಂತ ವಾಹನದಲ್ಲಿ ತೆರಳಿ ಹಾಸನ ಜಿಲ್ಲೆಯ ಪ್ರವಾಸಿ ಸ್ಥಳಗಳನ್ನು ವೀಕ್ಷಣೆ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಹಾರನಹಳ್ಳಿ

ಹಾಸನಕ್ಕೆ ಬಂದು ಹಾಸನಾಂಬೆ ತಾಯಿಯ ದರ್ಶನ ಮಾಡಿದ ಭಕ್ತರಿಗೆ ಜಿಲ್ಲಾ ಆಡಳಿತ ಜಿಲ್ಲೆಯ ಅನೇಕ ಸ್ಥಳಗಳ ಪ್ಯಾಕೇಜ್ ಪ್ರವಾಸ ರೂಪಿಸಿದೆ. ಈ ಪ್ಯಾಕೇಜ್‌ನಲ್ಲಿ ಕೆಲವರು ಪ್ರವಾಸ ಹೋದರೆ, ಮತ್ತೆ ಕೆಲವು ಯಾತ್ರಾರ್ಥಿಗಳು ಸ್ವಂತ ವಾಹನದಲ್ಲಿ ತೆರಳಿ ಹಾಸನ ಜಿಲ್ಲೆಯ ಪ್ರವಾಸಿ ಸ್ಥಳಗಳನ್ನು ವೀಕ್ಷಣೆ ಮಾಡುತ್ತಿದ್ದಾರೆ.ಹಾಸನ ಅಂದರೆ ಬೇಲೂರು, ಹಳೆಬೀಡು, ಶ್ರವಣಬೆಳಗೊಳ ಮಾತ್ರ ಎಂಬ ಅನಿಸಿಕೆ ಇದೆ. ಆದರೆ ಜಿಲ್ಲೆಯ ಅನೇಕ ಹೊಯ್ಸಳ ದೇವಾಲಯಗಳು, ಇನ್ನು ಇತರೆ ಪ್ರವಾಸಿಸ್ಥಳ ಬಗ್ಗೆ ಜಿಲ್ಲಾ ಆಡಳಿತ ಹೆಚ್ಚು ಪ್ರಚಾರ ಮಾಡಿ ಬೆಳಕು ಚೆಲ್ಲಿದ ಮೇಲೆ ಆ ಸ್ಥಳಗಳಿಗೂ ಲಗ್ಗೆ ಇಟ್ಟು ಸೌಂದರ್ಯವನ್ನು ಸವಿಯಲು ಪ್ರವಾಸಿಗರ ದಂಡೇ ಅಗಮಿಸುತ್ತಿದೆ. ವಾರಾಂತ್ಯ ಶನಿವಾರ, ಭಾನುವಾರ ಇರುವುದರಿಂದ ಹಾಸನಾಂಬ ದರ್ಶನ ಮಾಡಿ ಪ್ರವಾಸಿ ಸ್ಥಳಗಳಾದ ಜಾವಗಲ್‌ನ ಲಕ್ಷೀನರಸಿಂಹ ದೇವಾಲಯ, ಹಾರನಹಳ್ಳಿ ಚನ್ನಕೇಶವ ದೇವಾಲಯ, ಅರಸೀಕೆರೆ ಶಿವಾಲಯ. ಮಾಲೇಕಲ್ಲು ತಿರುಪತಿ ವೆಂಕಟರಮಣ ದೇವಾಲಯ, ಜೇನುಕಲ್ ಸಿದ್ದೇಶ್ವರ ಬೆಟ್ಟ, ಅರಸೀಕೆರೆ ಮೈಸೂರು ರಸ್ತೆಯಲ್ಲಿರುವ ಮಹಾತ್ಮ ಗಾಂಧಿ ಚಿತಾಭಸ್ಮ ಸ್ಥಳ, ಶಾಂತಿಗ್ರಾಮದಲ್ಲಿರುವ ನರಸಿಂಹ ಚನ್ನಕೇಶವ ದೇವಾಲಯ, ಕೊರವಂಗಲದ ಶ್ರೀ ಭೂಜೇಶ್ವರ ದೇವಾಲಯ, ವಿಜಯದುರ್ಗ,ಪಾಳ್ಯ ಜನಾರ್ಧನ ದೇವಾಲಯ, ಹೊಸಕೋಟೆ ಕೆಂಚಮ್ಮ ದೇವಾಲಯ, ಬಿಸಲೆ ಘಾಟ್, ಮೂಕನಮನೆ ಫಾಲ್ಸ್, ಮಂಜರಾಬಾದ್ ಕೋಟೆ, ದೊಡ್ಡಗದ್ದವಳ್ಳಿಯ ಲಕ್ಷ್ಮೀ ದೇವಾಲಯ, ಯಗಚಿ ಜಲಾಶಯ, ಪುಷ್ಪಗಿರಿ ಬೆಟ್ಟ, ಕೊಂಡಜ್ಜಿ ವರದರಾಜ ದೇವಾಲಯ, ಸೀಗೆಗುಡ್ಡ, ಮಳೆ ಮಲ್ಲೇಶ್ವರ ದೇವಾಲಯ, ಶ್ರವಣಬೆಳಗೊಳ ನುಗೇಹಳ್ಳಿ ಲಕ್ಷ್ಮೀ ನರಸಿಂಹದೇವಾಲಯ, ರಾಮನಾಥಪುರ, ಮಾವಿನಕೆರೆ ರಂಗನಾಥಸ್ವಾಮಿ ದೇವಾಲಯ, ಹೊಳೆನರಸಿಪುರದ ನರಸಿಂಹ ದೇವಾಲಯ, ಗೊರೂರಿನ ನರಸಿಂಹಸ್ವಾಮಿ ದೇಗುಲಗಳನ್ನು ನೊಡಲು ಆಸಕ್ತಿಯಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಹಾಸನ ಜಿಲ್ಲಾಧಿಕಾರಿ ವಿ.ಸತ್ಯಭಾಮ, ಉಪವಿಭಾಗಧಿಕಾರಿ ಮಾರುತಿ, ಜಿಲ್ಲಾ ಪ್ರವಾಸಿ ಅಧಿಕಾರಿ ಡಾ ಎಸ್.ತಿಪ್ಪೇಸ್ವಾಮಿ, ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳು, ರಾಜ್ಯ ಪುರಾತತ್ವ ಇಲಾಖೆ ಕ್ಯೂರೇಟರ್ ಕುಮಾರ್, ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆಯ ತಹಸೀಲ್ದಾರ್ ಲತಾ ಪ್ರವಾಸಿ ಸ್ಥಳಗಳ ದರ್ಶನ ವ್ಯವಸ್ಥೆ ಕಲ್ಪಿಸಿದ್ದಾರೆ. ಕೋಲಾರದಿಂದ ಹಾರನಹಳ್ಳಿ ಚನ್ನಕೇಶವ ದೇವಾಲಯಕ್ಕೆ ಬಂದ ಮಹೇಶ್ ಹಾರನಹಳ್ಳಿ ದೇವಾಲಯಕ್ಕೆ ಭೇಟಿ ನೀಡಿದ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಅನೇಕ ನರಸಿಂಹ ದೇವರ ದರ್ಶನ ಮಾಡಿದೆವು. ಹಾಸನಾಂಬ ತಾಯಿ ದರ್ಶನ ಪಡೆದು ನಾವು ಜಿಲ್ಲೆಯ ಅನೇಕ ಹೊಯ್ಸಳ ದೇವಾಲಯಗಳ ಕಲೆ, ವಾಸ್ತುಶಿಲ್ಪಗಳ ಕೆತ್ತನೆಗಳು ನಯನ ಮನೋಹರವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ