ಹತ್ತಿಕುಣಿ: ಅಕ್ರಮ ಗೃಹ ಬಳಕೆ ಸಿಲಿಂಡರ್‌ಗಳ ವಶ

KannadaprabhaNewsNetwork |  
Published : Nov 20, 2026, 01:45 AM IST
ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಗ್ರಾಮದಲ್ಲಿ ವಿವಿಧ ಹೋಟೆಲ್ ಹಾಗೂ ದಾಬಾಗಳ ಮೇಲೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ಜಂಟಿ ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗೃಹ ಬಳಕೆಯ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. | Kannada Prabha

ಸಾರಾಂಶ

Hattikuni: Illegal domestic-use cylinders seized

-ಖಾನಾವಳಿ, ಹೋಟೆಲ್‌ಗಳ ಮೇಲೆ ದಿಢೀರ್ ಅಧಿಕಾರಿಗಳ ದಾಳಿ

----

ಕನ್ನಡಪ್ರಭ ವಾರ್ತೆ ಯಾದಗಿರಿ

ಹತ್ತಿಕುಣಿ ಗ್ರಾಮದಲ್ಲಿ ವಿವಿಧ ಹೋಟೆಲ್ ಹಾಗೂ ದಾಬಾಗಳ ಮೇಲೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ಜಂಟಿ ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗೃಹ ಬಳಕೆಯ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

17.11.2026 ರಂದು ಯಾದಗಿರಿ ಉಪ ನಿರ್ದೇಶಕರು ಹಾಗೂ ಆಹಾರ ನಿರೀಕ್ಷಕರ ನೇತೃತ್ವದ ಅಧಿಕಾರಿಗಳ ತಂಡವು ಹತ್ತಿಕುಣಿ ಗ್ರಾಮದ ವಿವಿಧ ಖಾನಾವಳಿ ಮತ್ತು ಹೋಟೆಲ್‌ಗಳ ಮೇಲೆ ದಿಢೀರ್ ದಾಳಿ ನಡೆಸಿದೆ.

ಈ ವೇಳೆ ವಾಣಿಜ್ಯ ಉದ್ದೇಶಕ್ಕೆ ಬಳಸಬೇಕಾದ ಬದಲಿಗೆ, ಅಕ್ರಮವಾಗಿ ಗೃಹ ಬಳಕೆ ಮಾಡುತ್ತಿದ್ದ ಒಟ್ಟು 13 ಸಿಲಿಂಡರ್‌ಗಳನ್ನು (12 ಇಂಡಿಯನ್ ಮತ್ತು 1 ಹೆಚ್‌ಪಿ) ವಶಕ್ಕೆ ಪಡೆಯಲಾಗಿದೆ.

ಜಪ್ತಿ ಮಾಡಲಾದ ಎಲ್ಲಾ ಸಿಲಿಂಡರ್‌ಗಳನ್ನು ಹತ್ತಿಕುಣಿ ಗ್ರಾಮದಲ್ಲಿರುವ ಸುಚಿತ್ ಗ್ಯಾಸ್ ಏಜೆನ್ಸಿಯವರಿಗೆ ಹಸ್ತಾಂತರಿಸಲಾಗಿದ್ದು, ನಿಯಮ ಉಲ್ಲಂಘಿಸಿ ಅಕ್ರಮವಾಗಿ ಸಿಲಿಂಡರ್ ಬಳಸುತ್ತಿದ್ದ ಅಂಗಡಿ ಮಾಲೀಕರ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

ಫೋಟೊ:18ವೈಡಿಆರ್3

ಹತ್ತಿಕುಣಿ ಗ್ರಾಮದಲ್ಲಿ ವಿವಿಧ ಹೋಟೆಲ್ ಹಾಗೂ ದಾಬಾಗಳ ಮೇಲೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ಜಂಟಿ ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗೃಹ ಬಳಕೆಯ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುದಾನ ನೆಚ್ಚದೇ ಊರ ಕೆರೆ ಸ್ಚಚ್ಛ ಮಾಡಿಕೊಂಡ ಗ್ರಾಮಸ್ಥರು
ಪಂಚತಂತ್ರ ಕಥೆಗಳ ಮೌಲ್ಯ ಮಕ್ಕಳ ಮನಃಪರಿವರ್ತನೆಗೆ ಸಹಕಾರಿ: ವಿವೇಕಾನಂದಗೌಡ ಪಾಟೀಲ