ಬಿಕ್ಕೋಡು ಹೋಬಳಿಯ ಹುಸ್ಕೂರು ಗ್ರಾಮದಲ್ಲಿ ಜರುಗಿದ ಲಯನ್ಸ್ ಸಂಸ್ಥೆಯ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಕಾರ‍್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಅವರು, ನಾವು ಯಾವುದೇ ಕಾರ‍್ಯಚಟುವಟಿಕೆಗಳನ್ನು ಅತ್ಯಂತ ಆಸಕ್ತಿಯಿಂದ ಮಾಡುವಂತಾಗಬೇಕು. ಆಗ ಮಾತ್ರ ಕಾರ‍್ಯಚಟುವಟಿಕೆಗಳ ಮೂಲಕ ಮಾಡಿದ ಸೇವೆ ಜನರಿಗೆ ತಲುಪುತ್ತದೆ ಎಂದರು. ಸಂಸ್ಥೆಯ ಧ್ಯೇಯೊದ್ದೇಶಗಳು ಸಹ ಈಡೇರುತ್ತವೆ ಎಂದು ಲಯನ್ಸ್ ನ ಮಾಜಿ ರಾಜ್ಯಪಾಲ ಲ.ಮಂಜುನಾಥ್ ಮೂರ್ತಿ ಹೇಳಿದರು.
ಬೇಲೂರು: ನಾವು ಅಂದುಕೊಂಡಿದ್ದನ್ನು ಸಾಧಿಸುವ ಛಲವಿದ್ದರೆ ಮಾತ್ರ ವೈಯಕ್ತಿವಾಗಿ ಏಳಿಗೆ ಹೊಂದುವುದರ ಜೊತೆಗೆ ಸಂಸ್ಥೆಯ ಧ್ಯೇಯೊದ್ದೇಶಗಳು ಸಹ ಈಡೇರುತ್ತವೆ ಎಂದು ಲಯನ್ಸ್ ನ ಮಾಜಿ ರಾಜ್ಯಪಾಲ ಲ.ಮಂಜುನಾಥ್ ಮೂರ್ತಿ ಹೇಳಿದರು.
ತಾಲೂಕಿನ ಬಿಕ್ಕೋಡು ಹೋಬಳಿಯ ಹುಸ್ಕೂರು ಗ್ರಾಮದಲ್ಲಿ ಜರುಗಿದ ಲಯನ್ಸ್ ಸಂಸ್ಥೆಯ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಕಾರ‍್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಅವರು, ನಾವು ಯಾವುದೇ ಕಾರ‍್ಯಚಟುವಟಿಕೆಗಳನ್ನು ಅತ್ಯಂತ ಆಸಕ್ತಿಯಿಂದ ಮಾಡುವಂತಾಗಬೇಕು. ಆಗ ಮಾತ್ರ ಕಾರ‍್ಯಚಟುವಟಿಕೆಗಳ ಮೂಲಕ ಮಾಡಿದ ಸೇವೆ ಜನರಿಗೆ ತಲುಪುತ್ತದೆ ಎಂದರು. ಈ ವೇಳೆ ಪ್ರಾಂತೀಯ ಅಧ್ಯಕ್ಷ ಲ.ರಘು ಪಾಳ್ಯ,ಪ್ರಾಂತೀಯ ೩ರ ವಲಯ ೧ರ ಅಧ್ಯಕ್ಷ ಲ. ದಿನೇಶ್, ಪ್ರಾಂತೀಯ ರಾಯಭಾರಿ ಲ.ರಾಬಿ ಸೋಮಯ್ಯ, ಪ್ರಾಂತೀಯ ಎನ್.ವೈ ಲ.ದೊಡ್ಮನೆ ಪ್ರಭಾಕರ್, ಖಜಾಂಚಿ ಲ.ಸಂತೋಷ್, ಕರ‍್ಯದರ್ಶಿ ಲ. ಆಕಾಶ್ ಸಿ.ಶೇಖರ್ ಹಾಗೂ ಲಯನ್ಸ್ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.