ಕನ್ನಡಪ್ರಭ ವಾರ್ತೆ ಪಾವಗಡ
ತಾಲೂಕಿನಲ್ಲಿ ಇಂದಿಗೂ ಸಹ ಅನೇಕ ಮಂದಿ ನಿರ್ಗತಿಕರು ಗುಡಿಸಲು ಶೀಟು ಹಾಗೂ ಹಳೇ ಕಾಲದ ಆತಂತ್ರ ಸ್ಥಿತಿಯ ಹೆಂಚಿನ ಮನೆಗಳಲ್ಲಿ ವಾಸವಾಗಿದ್ದು, ಗ್ರಾಪಂ ಹಾಗೂ ಸರ್ಕಾರಕ್ಕೆ ಅನೇಕ ಭಾರಿ ಅರ್ಜಿ ಸಲ್ಲಿಸಿ ಮನವಿ ಮಾಡಿದರೂ ಮನೆ ಮಂಜೂರಾತಿಯಲ್ಲಿ ಸರ್ಕಾರ ನಿರ್ಲಕ್ಷ್ಯವಹಿಸಿದ ಪರಿಣಾಮ ಖಾಸಗಿ ಟ್ರಸ್ಟ್‌ಗಳತ್ತ ಮುಖಮಾಡಿರುವುದು ಸಾಮಾನ್ಯವಾಗಿದೆ. ಪರಿಣಾಮ ಬಡಜನತೆಯ ಅತಂತ್ರ ಸ್ಥಿತಿ ಅರಿತ ಎಸ್‌ಎನ್ ಸಿಟಿ ಟ್ರಸ್ಟ್ ಫೇಸ್ ಬುಕ್‌ನಲ್ಲಿ ಜಾಹೀರಾತು ಪ್ರಕಟಿಸಿ ಟ್ರಸ್ಟ್ ಖಾತೆಗೆ ಜಮೆ ಮಾಡಿದರೆ 3ತಿಂಗಳಲ್ಲಿ ನಿಮಗೆ 8 ಲಕ್ಷ ಬೆಲೆಬಾಳುವ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿತ್ತೆನ್ನಲಾಗಿದೆ.
ಇದನ್ನು ನಂಬಿದ ಸೂರಿಲ್ಲದ ನಿರ್ಗತಿಕರು ಟ್ರಸ್ಟ್ ನ ಸೂಪರ್ ವೈಸರ್‌ನನ್ನು ಸಂಪರ್ಕಿಸಿ ತಲಾ 6 ಸಾವಿದಂತೆ 7ಲಕ್ಷ ಹಣ ಫೋನ್ ಪೇ ಮೂಲಕ ಜಮಾ ಮಾಡಿದ್ದಾರೆ. ಕಳೆದ 6 ತಿಂಗಳಿಂದಲೂ ಮನೆ ನಿರ್ಮಿಸಿಕೊಡುವ ಭರವಸೆ ನೀಡಿ ಸಂಪರ್ಕದಲ್ಲಿದ್ದ ಟ್ರಸ್ಟ್ ಸೂಪರ್ ವೈಸರ್ ಅನಂತನಾರಾಯಣ್ ಯಲ್ಬುರ್ಗಿ ಕಳೆದ 15ದಿನಗಳಿಂದ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ಇದರಿಂದ ಆತಂಕಗೊಂಡ ಹಣ ಕಟ್ಟಿದ್ದ ನಿರ್ಗತಿಕರೊಬ್ಬರು ಭಾನುವಾರ ಡೆತ್ ನೋಟ್ ಬರೆದು ತಮ್ಮ ಮನೆ ಬಳಿ ಪೆಟ್ರೋಲ್ ಸುರಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಪಾವಗಡ ಪಟ್ಟಣದ ಆದರ್ಶ ನಗರ ಕನ್ ಮಾನ್ ಚೆರ್ಲು ಸೇರಿದಂತೆ ತಾಲೂಕಿನ ಕಸಬಾ ವ್ಯಾಪ್ತಿಯ ಬ್ಯಾಡನೂರು, ಬೊಮ್ಮತನಹಳ್ಳಿ, ದವಡಬೆಟ್ಟ ನಲಿಗಾನಹಳ್ಳಿ, ಸಿ.ಕೆ.ಪುರ, ಕಡಮಲಕುಂಟೆ ಇತರೆ ಸುತ್ತಮುತ್ತಲ 8ಗ್ರಾಮಗಳಲ್ಲಿ ವಂಚಿಸಲಾಗಿದೆ. ಇನ್ನೂ ಈ ಕುರಿತು ಪೊಲೀಸ್ ಠಾಣೆ, ಸೈಬರ್ ಕ್ರೈಂ ವಿಭಾಗಕ್ಕೆ ಹೋಗಿ ದೂರು ನೀಡಲು ಮುಂದಾದ ವೇಳೆ ಇದು ನಮಗೆ ಬರುವುದಿಲ್ಲ. ತುಮಕೂರಿಗೆ ಹೋಗಿ ದೂರು ಸಲ್ಲಿಸುವಂತೆ ಅವರು ತಿಳಿಸಿದ್ದಾರೆ.
ಮನೆ ಇಲ್ಲದೇ ಗುಡಿಸಲಿನಲ್ಲಿ ವಾಸವಾಗಿದ್ದೇವೆ. ಗ್ರಾಪಂಗೆ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಮಳೆ ಗಾಳಿಗೆ ಬಂದರೆ,ಮನೆ ಬೀಳುವ ಆತಂಕ ಎದುರಿಸುತ್ತಿದ್ದೇವೆ. ಎಸ್‌ಎನ್ ಸಿಟಿ ಟ್ರಸ್ಟ್ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ ಮೇರೆಗೆ 6 ಸಾವಿರ ಹಣ ನೀಡಿದ್ದೇವೆ. ಈಗ ಹಣಪಡೆದವರು ನಾಪತ್ತೆಯಾಗಿದ್ದಾರೆ. - ಲಕ್ಷ್ಮೀನರಸಮ್ಮ ಬ್ಯಾಡನೂರು ಗ್ರಾಮ.ಈ ವೇಳೆ ದುರ್ಗಪ್ಪ, ಹನುಮಂತರಾಯಪ್ಪ ತಾಡಮ್ಮ,ಸಂಜಮ್ಮ ಲಲಿತಮ್ಮ,ಮದ್ಲೇಟಪ್ಪ,ಶಂಕರಪ್ಪ,ಪಳವಳ್ಳಿ ಬಸವರಾಜು,ಸಿ.ಕೆ.ಪುರ ಹನುಮಂತರಾಯಪ್ಪ, ಓಬಳ ನರಸಿಂಹಪ್ಪ, ನಾರಾಯಣಪ್ಪ, ಗ್ರಾಪಂ ಉಪಾಧ್ಯಕ್ಷೆ ಅಕ್ಕಮ್ಮ, ಮುತ್ಯಾಲಮ್ಮ, ಕದುರಪ್ಪ, ಬಿ.ಕೆ.ಗೋವಿಂದಪ್ಪ, ಇತರೆ ಅನೇಕ ಮಂದಿ ವಂಚಿತ ಫಲಾನುಭವಿಗಳಿದ್ದರು. ------------
ಬಾಕ್ಸ್,,,ಮೂಗ ಶಿವಮ್ಮಳದು ಅರಣ್ಯ ರೋಧನೆಮಾತು ಬಾರದ ಶಿವಮ್ಮ ತನ್ನ ಕೈ ಸನ್ನೆ ಮೂಲಕ ನೋವು ವ್ಯಕ್ತಪಡಿಸಿ, ಮನೆಯಿಲ್ಲದೇ ಗರಿಗುಡಿಸಲಿನಲ್ಲಿ ವಾಸವಿದ್ದೇವೆ. ಕೂಲಿ ಮಾಡಿದ 6 ಸಾವಿರ ಹಣ ನೀಡಿದ್ದು, ಹಣಪಡೆದ ಟ್ರಸ್ಟ್‌ನ ಸೂಪರ್ ವೈಸರ್ ನಾಪತ್ತೆಯಾಗಿದ್ದಾರೆ. ನಮಗೆ ನ್ಯಾಯ ಕಲ್ಪಿಸಿಕೊಡಿ ಎಂದು ಕಣ್ಣೀರು ಹಾಕಿದರು.