ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಜಾಮೀಯಾ ಮಸೀದಿಯಿಂದ ಟಿಪ್ಪು ವಕ್ಫ್ ಎಸ್ಟೇಟ್ ಕಮಿಟಿ ಸದಸ್ಯರು ಮತ್ತು ಅವರ ಧರ್ಮಗುರುಗಳು ಗಂಧದ ಕಳಸ ಹೊತ್ತ ಧೂಪದ ಸಂದಲ್ ಮೆರವಣಿಗೆಯೊಂದಿಗೆ ಪ್ರಮುಖ ರಸ್ತೆಯಲ್ಲಿ ಪಾದಯಾತ್ರೆ ನಡೆಸಿದರು.
ಪುರಸಭೆ ವೃತ್ತದಲ್ಲಿ ಪುರಸಭಾ ಸದಸ್ಯರು ಸೇರಿ ಪವಿತ್ರ ಗಂಧದ ಸಂದಲ್‌ಗೆ ಪುಷ್ಪಾರ್ಚನೆ ಕಾರ್ಯ ನೆರವೇರಿಸಿದರು. ಮೈಸೂರು, ಬೆಂಗಳೂರು, ಮಂಡ್ಯ ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಮುಸ್ಲಿಂ ಭಾಂದವರು ಆಗಮಿಸಿ ಟಿಪ್ಪು ಸಂದಲ್ ಮೆರವಣಿಗೆಗೆ ಮೆರಗು ತಂದರು.ರಸ್ತೆಯುದ್ದಕ್ಕೂ ಟಿಪ್ಪು ಸುಲ್ತಾನ್ ಭಾವಚಿತ್ರಗಳು, ಯುವಕರು ವಿವಿಧ ವೇಷ ಭೂಷಣ ಹಾಗೂ ಹುಲಿ ಪಟ್ಟೆಯ ಭಾವುಟಗಳು ಸೇರಿದಂತೆ ಟಮಟೆ ಸದ್ದಿನ ಧ್ವನಿವರ್ಧಕಗಳು ಮೊಳಗುತ್ತಿದ್ದವು, ಬಾಣ ಬಿರುಸುಗಳು ಕುದುರೆ ಸವಾರಿ, ಕತ್ತಿವರಸೆ, ಟಿಪ್ಪು ವೇಶದಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಗಂಜಾಂನ ಟಿಪ್ಪು ಸಮಾದಿ ಗುಂಬಸ್‌ನಲ್ಲಿ ಧರ್ಮಗುರುಗಳಿಂದ ಟಿಪ್ಪು ಸಮಾದಿ ಮೇಲೆ ಹೂವಿನ ಚಾದರ ಹೊದಿಸಿ ಗಂಧದ ಲೇಪನ ಕಾರ್ಯ ನಡೆಸಿ ಪ್ರಾರ್ಥನೆ ಸಲ್ಲಿಸಿದರು.ಬಿಗಿ ಭದ್ರತೆ: ಶ್ರೀರಂಗಪಟ್ಟಣ, ಮಂಡ್ಯ ಸೇರಿದಂತೆ ಇತರ ಭಾಗಗಳಿಂದ ಪೊಲೀಸರನ್ನು ಹೆಚ್ಚಿನ ರೀತಿಯಲ್ಲಿ ನಿಯೋಜನೆ ಮಾಡಲಾಗಿತ್ತು. ಜಾಮೀಯಾ ಮಸೀದಿಯಿಂದ ಗುಂಬಸ್ ವರೆಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆ ವಹಿಸಿದ್ದರು.