ಎಚ್‌ಸಿಜಿ ಸಂಸ್ಥೆಯಿಂದ ಉತ್ತರ ಬೆಂಗಳೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ಶುಭಾರಂಭ,

KannadaprabhaNewsNetwork |  
Published : May 22, 2026, 01:45 AM IST
ಕ್ಯಾನ್ಸರ್ | Kannada Prabha

ಸಾರಾಂಶ

: ಕ್ಯಾನ್ಸರ್‌ ಚಿಕಿತ್ಸೆಗಾಗಿಯೇ ಮೀಸಲಾದ ಭಾರತದ ಅತಿದೊಡ್ಡ ಆಸ್ಪತ್ರೆಗಳ ಸಮೂಹವಾಗಿರುವ, ಹೆಲ್ತ್‌ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್ ಲಿಮಿಟೆಡ್ (HCG), ಇಂದು ಬ್ಯಾಟರಾಯನಪುರದಲ್ಲಿ (ಹೆಬ್ಬಾಳ) ತನ್ನ ನೂತನ ಸಮಗ್ರ ಕ್ಯಾನ್ಸರ್ ಆಸ್ಪತ್ರೆಯನ್ನು ಉದ್ಘಾಟಿಸಿದೆ.

ಕರ್ನಾಟಕದ ಪ್ರಥಮ ''ಎಮ್‌ಆರ್-ಲಿನಾಕ್'' ತಂತ್ರಜ್ಞಾನ ಅನಾವರಣ

ಭಾರತದ ಅತಿ ದೊಡ್ಡ ವಿಶೇಷ ಕ್ಯಾನ್ಸರ್ ಆಸ್ಪತ್ರೆಗಳ ಸಮೂಹದಿಂದ ಉತ್ತರ ಬೆಂಗಳೂರಿನಲ್ಲಿ

ಸುಧಾರಿತ ಆಂಕೊಲಾಜಿ (ಕ್ಯಾನ್ಸರ್ ಚಿಕಿತ್ಸೆ) ಲಭ್ಯತೆ ಬಲವರ್ಧನೆ.ಬೆಂಗಳೂರು: ಕ್ಯಾನ್ಸರ್‌ ಚಿಕಿತ್ಸೆಗಾಗಿಯೇ ಮೀಸಲಾದ ಭಾರತದ ಅತಿದೊಡ್ಡ ಆಸ್ಪತ್ರೆಗಳ ಸಮೂಹವಾಗಿರುವ, ಹೆಲ್ತ್‌ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್ ಲಿಮಿಟೆಡ್ (HCG), ಇಂದು ಬ್ಯಾಟರಾಯನಪುರದಲ್ಲಿ (ಹೆಬ್ಬಾಳ) ತನ್ನ ನೂತನ ಸಮಗ್ರ ಕ್ಯಾನ್ಸರ್ ಆಸ್ಪತ್ರೆಯನ್ನು ಉದ್ಘಾಟಿಸಿದೆ. ಈ ಮೂಲಕ ಉತ್ತರ ಬೆಂಗಳೂರಿನಲ್ಲಿ ಸುಧಾರಿತ ಆಂಕೊಲಾಜಿ (ಕ್ಯಾನ್ಸರ್ ಚಿಕಿತ್ಸೆ) ಸೇವೆಗಳ ಲಭ್ಯತೆಯನ್ನು ಮತ್ತಷ್ಟು ಬಲಪಡಿಸಿದೆ. ಅತ್ಯಾಧುನಿಕ ತಂತ್ರಜ್ಞಾನ, ಪರಿಣಿತ ವೈದ್ಯಕೀಯ ತಂಡ ಮತ್ತು ಸಹಾನುಭೂತಿಯುತ ಆರೈಕೆಯನ್ನು ಒಂದೇ ಸೂರಿನಡಿ ತರುತ್ತಿರುವ ಈ ಆಸ್ಪತ್ರೆಯು, ಕರ್ನಾಟಕದ ಜನತೆಗೆ ವಿಶ್ವದರ್ಜೆಯ ಚಿಕಿತ್ಸೆಯನ್ನು ನೀಡುವಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಲಿದೆ. ನಿಖರ ಆಂಕೊಲಾಜಿ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿರುವ 132ರವರೆಗಿನ ಹಾಸಿಗೆಗಳ ಸಾಮರ್ಥ್ಯದ ಈ ಹೊಸ ಆಸ್ಪತ್ರೆಯು, ಕರ್ನಾಟಕದ ಮೊಟ್ಟಮೊದಲ ''ಎಲೆಕ್ಟಾ ಯೂನಿಟಿ ಎಂಆರ್-ಲಿನಾಕ್'' (Elekta Unity MR-Linac) ತಂತ್ರಜ್ಞಾನ ಪರಿಚಯಿಸಿದೆ. ಇದು ವಿಶ್ವದ ಅತ್ಯಾಧುನಿಕ ನಿಖರ ವಿಕಿರಣ ಚಿಕಿತ್ಸಾ ವ್ಯವಸ್ಥೆಗಳಲ್ಲಿ ಒಂದಾಗಿದೆ. ಈ ಕ್ರಾಂತಿಕಾರಿ ತಂತ್ರಜ್ಞಾನವು ಅತ್ಯುನ್ನತ ಗುಣಮಟ್ಟದ ಎಮ್‌ಆರ್‌ಐ ಇಮೇಜಿಂಗ್ ಅನ್ನು ಲೀನಿಯರ್ ಆಕ್ಸಿಲರೇಟರ್ (ರೇಖೀಯ ವೇಗವರ್ಧಕ) ನೊಂದಿಗೆ ಅದ್ಭುತವಾಗಿ ಸಂಯೋಜಿಸುವುದಲ್ಲದೆ, ಅತ್ಯಂತ ನಿಖರವಾದ ಹಾಗೂ ರೋಗಿಯ ಪರಿಸ್ಥಿತಿಗೆ ತಕ್ಕಂತೆ ತಕ್ಷಣವೇ ಬದಲಾಯಿಸಬಹುದಾದ ಜೀವರಕ್ಷಕ ಕ್ಯಾನ್ಸರ್ ಚಿಕಿತ್ಸೆಯನ್ನು ಸಾಧ್ಯವಾಗಿಸಲಿದೆ. ಎಲ್ಲಾ ರೀತಿಯ ಕ್ಯಾನ್ಸರ್‌ಗಳಿಗೆ ಚಿಕಿತ್ಸೆ ನೀಡುವ ಸಮಗ್ರ ಕೇಂದ್ರವಾಗಿ ವಿನ್ಯಾಸಗೊಳಿಸಲಾದ ಈ ಆಸ್ಪತ್ರೆಯು, ರೋಗನಿರ್ಣಯ, ಅತ್ಯಾಧುನಿಕ ಚಿಕಿತ್ಸೆ, ರೋಗಮುಕ್ತರಾಗಲು ಪೂರಕ ಬೆಂಬಲ ಹಾಗೂ ರೋಗಿ ಆಧರಿತ ಚಿಕಿತ್ಸೆ ನೀಡುವ ಆರೈಕೆಯನ್ನು ಒಂದೇ ಸೂರಿನಡಿ ಒದಗಿಸಲಿದೆ. ಈ ಮೂಲಕ ಉತ್ತರ ಬೆಂಗಳೂರಿನ ರೋಗಿಗಳಿಗೆ ಜಾಗತಿಕ ಮಟ್ಟದ ಕ್ಯಾನ್ಸರ್ ಆರೈಕೆಯು ಇನ್ಮುಂದೆ ಮತ್ತಷ್ಟು ಹತ್ತಿರವಾಗಲಿದೆ.

ನೂತನ ಸೌಲಭ್ಯವನ್ನು ಉದ್ಘಾಟಿಸಿ ಮಾತನಾಡಿದ ಸ್ಯಾಂಡಲ್‌ವುಡ್‌ನ ಖ್ಯಾತ ನಟ ಹಾಗೂ ನಿರ್ದೇಶಕ, ''ಅಭಿನಯ ಚಕ್ರವರ್ತಿ'' ಬಾದ್‌ಷಾ ಕಿಚ್ಚ ಸುದೀಪ್ ಅವರು, "ಕ್ಯಾನ್ಸರ್ ಎಂಬುದು ಕೇವಲ ರೋಗಿಯನ್ನಷ್ಟೇ ಅಲ್ಲ, ಇಡೀ ಕುಟುಂಬವನ್ನೇ ತಲ್ಲಣಗೊಳಿಸುವ ಒಂದು ಕಠಿಣ ಪ್ರಯಾಣವಾಗಿದೆ. ಈ ನಿಟ್ಟಿನಲ್ಲಿ ಸಕಾಲಿಕ ರೋಗನಿರ್ಣಯ, ವ್ಯಾಪಕ ಜಾಗೃತಿ ಮತ್ತು ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ಲಭ್ಯವಾಗುವುದು ರೋಗಿಯ ಜೀವನದಲ್ಲಿ ನಿಜವಾದ ಬದಲಾವಣೆಯನ್ನು ತರಬಲ್ಲದು. ಎಚ್‌ಸಿಜಿಯ ಈ ಹೆಬ್ಬಾಳದ (ಬ್ಯಾಟರಾಯನಪುರ) ಹೊಸ ಆಸ್ಪತ್ರೆಯು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪರಿಣಿತ ವೈದ್ಯಕೀಯ ಆರೈಕೆಯನ್ನು ಜನರಿಗೆ ತಲುಪಿಸುವ ಮೂಲಕ ಈ ದಿಸೆಯಲ್ಲಿ ಒಂದು ಶಕ್ತಿಶಾಲಿ ಹೆಜ್ಜೆಯನ್ನಿಟ್ಟಿದೆ. ಬೆಂಗಳೂರು ಮತ್ತು ಕರ್ನಾಟಕದಾದ್ಯಂತ ಇರುವ ಕುಟುಂಬಗಳಿಗೆ ಇಂತಹ ವಿಶ್ವದರ್ಜೆಯ ಕ್ಯಾನ್ಸರ್ ಚಿಕಿತ್ಸೆ ಅತ್ಯಂತ ಸುಲಭವಾಗಿ ಸಿಗುತ್ತಿರುವುದು ನಿಜಕ್ಕೂ ಹೆಮ್ಮೆಯ ಹಾಗೂ ಸಂತೋಷದ ಸಂಗತಿಯಾಗಿದೆ, " ಎಂದು ಪ್ರಶಂಸಿಸಿದರು.

ಆಸ್ಪತ್ರೆಯ ಉದ್ಘಾಟನೆ ಕುರಿತು ಮಾತನಾಡಿದ ಹೆಲ್ತ್‌ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್ ಲಿಮಿಟೆಡ್ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ಡಾ. ಬಿ. ಎಸ್. ಅಜಯ್‌ಕುಮಾರ್ ಅವರು: "ಇಂದಿನ ದಿನಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಯು ದತ್ತಾಂಶ ಆಧಾರಿತ ಹಾಗೂ ತಂತ್ರಜ್ಞಾನದ ಪ್ರಗತಿಯ ಕಡೆಗೆ ಮುಖ ಮಾಡಿದ್ದು, ದೀರ್ಘಕಾಲೀನ ಚಿಕಿತ್ಸಾ ಫಲಿತಾಂಶಗಳನ್ನು ಸುಧಾರಿಸುವತ್ತ ಗಮನ ಹರಿಸಿದೆ. ನಮ್ಮ ಗುರಿ ಕೇವಲ ಕ್ಯಾನ್ಸರ್ ಮರುಕಳಿಸದಂತೆ ತಡೆಯುವುದು ಮಾತ್ರವಲ್ಲ; ವೈಯಕ್ತೀಕರಿಸಿದ ಹಾಗೂ ಬಹುಶಿಸ್ತೀಯ ಆರೈಕೆಯ ಮೂಲಕ ಅತ್ಯಂತ ಮುಂದುವರಿದ ಮತ್ತು ಮೆಟಾಸ್ಟಾಟಿಕ್ (ಇತರ ಅಂಗಗಳಿಗೆ ಹರಡಿರುವ) ಕ್ಯಾನ್ಸರ್‌ಗಳನ್ನು ಸಹ ಗುಣಪಡಿಸಬಹುದಾದ ಮಟ್ಟಿಗೆ ಯಶಸ್ವಿಯಾಗಿ ನಿರ್ವಹಿಸುವುದು. ಉತ್ತರ ಬೆಂಗಳೂರಿನ ಹೆಬ್ಬಾಳದಲ್ಲಿ (ಬ್ಯಾಟರಾಯನಪುರ) ನಮ್ಮ ಹೊಸ ಕೇಂದ್ರವನ್ನು ಪ್ರಾರಂಭಿಸಲು ನಮಗೆ ಅತ್ಯಂತ ಸಂತೋಷವಾಗುತ್ತಿದೆ. "ಇದು ಅತ್ಯಾಧುನಿಕ ಮೂಲಸೌಕರ್ಯ ಹಾಗೂ ಕರ್ನಾಟಕದ ಪ್ರಪ್ರಥಮ ''ಎಮ್‌ಆರ್-ಲಿನಾಕ್'' ತಂತ್ರಜ್ಞಾನವನ್ನು ಈ ಭಾಗದ ಜನರಿಗೆ ಈ ಸೌಲಭ್ಯವನ್ನು ಒದಗಿಸಉತ್ತಿದೆ. ನಿಖರತೆಯ ಆಧಾರಿತ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಿದ್ದು, ಸುಧಾರಿತ ಆಂಕೊಲಾಜಿ ಆರೈಕೆಯನ್ನು ಪ್ರತಿಯೊಬ್ಬರಿಗೂ ತಲುಪಿಸುವ ಎಚ್‌ಸಿಜಿಯ ಬದ್ಧತೆಯನ್ನು ಇದು ಪುನರುಚ್ಚರಿಸುತ್ತದೆ. ಸಂಸ್ಥಾಪಕನಾಗಿ, ರೋಗಿಗೆ ಮೊದಲ ಬಾರಿಗೆಯೇ ಸರಿಯಾದ ಚಿಕಿತ್ಸೆ ನೀಡುವುದರಲ್ಲಿ ನಾನು ದೃಢವಾದ ನಂಬಿಕೆ ಹೊಂದಿದ್ದೇನೆ; ಏಕೆಂದರೆ ಆಗ ಮಾತ್ರ ನಾವು ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸಲು ಸಾಧ್ಯ. ನಮ್ಮ ಹೆಬ್ಬಾಳ (ಬ್ಯಾಟರಾಯನಪುರ) ಕೇಂದ್ರದ ಉದ್ಘಾಟನೆಯು ಕ್ಯಾನ್ಸರ್ ಆರೈಕೆಯಲ್ಲಿ ಎಚ್‌ಸಿಜಿಯ ಶ್ರೇಷ್ಠತೆಯ ಹುಡುಕಾಟದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲಾಗಿದೆ, " ಎಂದು ಹೆಮ್ಮೆಯಿಂದ ಹೇಳಿದರು.ಈ ನೂತನ ಆಸ್ಪತ್ರೆಯ ಪ್ರಮುಖ ಆಕರ್ಷಣೆಯೆಂದರೆ ''ಎಲೆಕ್ಟಾ ಯೂನಿಟಿ ಎಮ್‌ಆರ್-ಲಿನಾಕ್'' (Elekta Unity MR-Linac) . ಇದು ಕರ್ನಾಟಕದಲ್ಲೇ ಪ್ರಪ್ರಥಮ ಬಾರಿಗೆ ಪರಿಚಯಿಸಲಾಗುತ್ತಿರುವ ಒಂದು ಕ್ರಾಂತಿಕಾರಿ ರೇಡಿಯೇಶನ್ ಆಂಕೊಲಾಜಿ (ವಿಕಿರಣ ಚಿಕಿತ್ಸೆ) ವ್ಯವಸ್ಥೆಯಾಗಿದೆ. ಈ ಅತ್ಯಾಧುನಿಕ ತಂತ್ರಜ್ಞಾನವು ಅತ್ಯುನ್ನತ ಗುಣಮಟ್ಟದ ಎಮ್‌ಆರ್‌ಐ ಚಿತ್ರಣವನ್ನು ಲೀನಿಯರ್ ಆಕ್ಸಿಲರೇಟರ್‌ನೊಂದಿಗೆ ಅತ್ಯದ್ಭುತವಾಗಿ ಸಂಯೋಜಿಸುತ್ತದೆ. ಇದರಿಂದಾಗಿ ಚಿಕಿತ್ಸೆ ನೀಡುವ ಸಂದರ್ಭದಲ್ಲೇ ಕ್ಯಾನ್ಸರ್ ಗಡ್ಡೆಯನ್ನು ನೈಜ ಸಮಯದಲ್ಲಿ ಸ್ಪಷ್ಟವಾಗಿ ವೀಕ್ಷಿಸಲು ಸಾಧ್ಯವಾಗುತ್ತದೆ. ಇದರ ಫಲಿತಾಂಶವಾಗಿ, ಅತ್ಯಂತ ನಿಖರವಾದ ರೇಡಿಯೇಶನ್ ಥೆರಪಿ ನೀಡಲು ಸಾಧ್ಯವಿದ್ದು, ಸುತ್ತಮುತ್ತಲಿನ ಆರೋಗ್ಯಕರ ಅಂಗಾಂಶಗಳಿಗೆ ಯಾವುದೇ ಹಾನಿಯಾಗದಂತೆ, ಕೇವಲ ಕ್ಯಾನ್ಸರ್ ಪೀಡಿತ ಜೀವಕೋಶಗಳನ್ನು ಮಾತ್ರ ಅತ್ಯಂತ ನಿಖರತೆಯೊಂದಿಗೆ ನಾಶಪಡಿಸಲು ವೈದ್ಯರಿಗೆ ಇದು ಸಹಕಾರಿಯಾಗಲಿದೆ.ಹೆಲ್ತ್‌ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್ ಲಿಮಿಟೆಡ್ನ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಸಿಇಒ ಡಾ. ಮನೀಶ್ ಮಟ್ಟೂ ಅವರು ಮಾತನಾಡಿ, "ಎಚ್‌ಸಿಜಿ ಹೆಬ್ಬಾಳ (ಬ್ಯಾಟರಾಯನಪುರ) ಆಸ್ಪತ್ರೆಯು ರೋಗಿ-ಕೇಂದ್ರಿತ ಆರೈಕೆ, ಬಹುಶಿಸ್ತೀಯ ಪರಿಣತಿ, ಮುನ್ನೆಚ್ಚರಿಕಾ ದೃಷ್ಟಿಕೋನ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಸಮ್ಮಿಲನವಾಗಿದ್ದು, ನಾವು ನಂಬಿಕೊಂಡು ಬಂದಿರುವ ಪ್ರತಿಯೊಂದು ಮೌಲ್ಯವನ್ನೂ ಒಳಗೊಂಡಿದೆ. ಎಮ್‌ಆರ್-ಲಿನಾಕ್ ತಂತ್ರಜ್ಞಾನದ ಮೂಲಕ ನಾವು ನಮ್ಮ ಆಂಕೊಲಾಜಿ ಸೇವೆಗಳಿಗೆ ದೊಡ್ಡ ಮಟ್ಟದ ಹೊಸ ಆಯಾಮವನ್ನು ನೀಡುತ್ತಿದ್ದು, ತಂತ್ರಜ್ಞಾನ-ಆಧಾರಿತ ಅತ್ಯಾಧುನಿಕ ಕ್ಯಾನ್ಸರ್ ಆರೈಕೆಯನ್ನು ಮುಖ್ಯವಾಗಿ ಕರ್ನಾಟಕದ ಜನತೆಗೆ ಅತ್ಯಂತ ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತಿದ್ದೇವೆ. ಎಚ್‌ಸಿಜಿ ಹೆಬ್ಬಾಳ (ಬ್ಯಾಟರಾಯನಪುರ) ಕೇಂದ್ರವು ನಮ್ಮ 35 ವರ್ಷಗಳ ಸುದೀರ್ಘ ''ಬದುಕಿನ ವರ್ಷಗಳಿಗೆ ಜೀವ ತುಂಬುವ'' ಉದಾತ್ತ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಇದು ಕ್ಯಾನ್ಸರ್ ಚಿಕಿತ್ಸೆಯ ಫಲಿತಾಂಶಗಳನ್ನು ಗಣನೀಯವಾಗಿ ಸುಧಾರಿಸಲು ವೈದ್ಯಕೀಯ ಶ್ರೇಷ್ಠತೆ, ಸಹಾನುಭೂತಿಯ ಆರೈಕೆ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಒಂದೇ ಸೂರಿನಡಿ ಒಟ್ಟುಗೂಡಿಸಿದೆ, " ಎಂದರು.ಈ ಆಸ್ಪತ್ರೆಯು ತನ್ನ ರೇಡಿಯೇಶನ್ ಆಂಕೊಲಾಜಿ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ ''ರ್ಯಾಡಿಕ್ಸಾಕ್ಟ್ ತಂತ್ರಜ್ಞಾನದೊಂದಿಗೆ ಆಕ್ಯುರೇ ಟೋಮೋಥೆರಪಿ'' ವ್ಯವಸ್ಥೆಯನ್ನು ಹೊಂದಿದೆ. ಇದರೊಂದಿಗೆ, ಅತ್ಯಂತ ನಿಖರವಾದ ಮತ್ತು ಹೆಚ್ಚಿನ ರೆಸಲ್ಯೂಶನ್ ಹೊಂದಿರುವ ರೋಗನಿರ್ಣಯದ ಚಿತ್ರಣಕ್ಕಾಗಿ ''80-ಸ್ಲೈಸ್ ಡಿಜಿಟಲ್ ಪೆಟ್-ಸಿಟಿ'' ಸ್ಕ್ಯಾನರ್ ಅನ್ನು ಸಹ ಅಳವಡಿಸಲಾಗಿದೆ. ಇಂತಹ ಸುಧಾರಿತ ಇಮೇಜಿಂಗ್ ಮತ್ತು ರೇಡಿಯೇಶನ್ ಥೆರಪಿಯ ಹೊರತಾಗಿ, ಎಚ್‌ಸಿಜಿ ಹೆಬ್ಬಾಳ (ಬ್ಯಾಟರಾಯನಪುರ) ಆಸ್ಪತ್ರೆಯು ರೋಬೋಟಿಕ್-ಸಹಾಯದ 5 ಮಾಡ್ಯುಲರ್ ಆಪರೇಷನ್ ಥಿಯೇಟರ್‌ಗಳು, 19 ಕೀಮೋಥೆರಪಿ ಡೇ-ಕೇರ್ ಹಾಸಿಗೆಗಳು, 14 ಪ್ರೀಮಿಯಂ ಟ್ರೀಟ್‌ಮೆಂಟ್ ಬೇಗಳು ಹಾಗೂ 15 ಹಾಸಿಗೆಗಳ ಅತ್ಯಾಧುನಿಕ ಐಸಿಯು ಮತ್ತು ಎಚ್‌ಡಿಯು ಸೌಲಭ್ಯಗಳನ್ನು ಒಳಗೊಂಡಿದೆ. ಅಲ್ಲದೆ, ಈ ಸಮಗ್ರ ಆಸ್ಪತ್ರೆಯು ಎಂಡೋಸ್ಕೋಪಿ, ಬ್ರಾಂಕೋಸ್ಕೋಪಿ, ಅಲ್ಟ್ರಾಸೌಂಡ್, ಎಕ್ಸ್-ರೇ, ಮ್ಯಾಮೊಗ್ರಫಿ, ಸುಧಾರಿತ ಪ್ರಯೋಗಾಲಯಗಳು, ಹಿಸ್ಟೋಪಾಥಾಲಜಿ, ಫ್ರೋಜನ್ ಸೆಕ್ಷನ್ ಸೇವೆಗಳು ಮತ್ತು ರಕ್ತ ಸಂಗ್ರಹಣೆ ಸೇರಿದಂತೆ ವ್ಯಾಪಕ ಶ್ರೇಣಿಯ ರೋಗನಿರ್ಣಯ ಹಾಗೂ ವೈದ್ಯಕೀಯ ಸೇವೆಗಳ ಬಲಿಷ್ಠ ಬೆಂಬಲ ಹೊಂದಿದೆ. "ನಮ್ಮ ಹೆಬ್ಬಾಳ (ಬ್ಯಾಟರಾಯನಪುರ) ಕ್ಯಾನ್ಸರ್ ಆಸ್ಪತ್ರೆಯ ಪ್ರಾರಂಭವು ಬೆಂಗಳೂರಿನಲ್ಲಿ ಸುಧಾರಿತ ಕ್ಯಾನ್ಸರ್ ಆರೈಕೆಯ ಲಭ್ಯತೆಯನ್ನು ಮತ್ತಷ್ಟು ವಿಸ್ತರಿಸುವ ಎಚ್‌ಸಿಜಿಯ ನಿರಂತರ ಬದ್ಧತೆಯ ಹಾದಿಯಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಈ ಹೊಸ ಸೌಲಭ್ಯವು ನಮ್ಮ ಸುದೀರ್ಘ ವೈದ್ಯಕೀಯ ಶ್ರೇಷ್ಠತೆಯ ಪರಂಪರೆ, ಸಹಾನುಭೂತಿಯುತ ರೋಗಿ ಆರೈಕೆ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಅತ್ಯಂತ ಆಲೋಚನಾತ್ಮಕವಾಗಿ ವಿನ್ಯಾಸಗೊಳಿಸಲಾದ ಸುಸಜ್ಜಿತ ಪರಿಸರದಲ್ಲಿ ಒಟ್ಟುಗೂಡಿಸಿದೆ, " ಎಂದು ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯ ಸಿಒಒ (COO) ಶ್ರೀಮತಿ ಮನಿಷಾ ಕುಮಾರ್ ಅವರು ತಿಳಿಸಿದರು.

"ಎಚ್‌ಸಿಜಿ ಹೆಬ್ಬಾಳದ (ಬ್ಯಾಟರಾಯನಪುರ) ಪ್ರಾರಂಭವು ಬೆಂಗಳೂರಿನಲ್ಲಿ ನಮ್ಮ ಸೇವಾ ವ್ಯಾಪ್ತಿಯನ್ನು ಗಣನೀಯವಾಗಿ ವಿಸ್ತರಿಸಿದೆ. ಇದು ನಗರದಲ್ಲಿ ನಮ್ಮ ನೆಟ್‌ವರ್ಕ್ ಅನ್ನು ಬಲಪಡಿಸುವ ಜೊತೆಗೆ, ವೇಗವಾಗಿ ಬೆಳೆಯುತ್ತಿರುವ ನೆರೆಹೊರೆಯ ಪ್ರದೇಶಗಳಿಗೂ ಸುಧಾರಿತ ಆಂಕೊಲಾಜಿ ಸೇವೆಗಳನ್ನು ವಿಸ್ತರಿಸಿದೆ. ಈ ಆಸ್ಪತ್ರೆಯನ್ನು ಸಾಂಪ್ರದಾಯಿಕ ಕ್ಲಿನಿಕಲ್ ವಾತಾವರಣದಿಂದ ಮುಕ್ತವಾಗಿಸಿ, ಬದಲಿಗೆ ರೋಗಿಗಳಲ್ಲಿ ನೆಮ್ಮದಿ, ಆತ್ಮವಿಶ್ವಾಸ ಮತ್ತು ಹೊಸ ಭರವಸೆ ತುಂಬುವ ಪ್ರಶಾಂತ ತಾಣವಾಗಿ ರೂಪಿಸಲು ಆಲೋಚನಾತ್ಮಕವಾಗಿ ವಿನ್ಯಾಸಗೊಳಿಸಲಾಗಿದೆ. ಕರ್ನಾಟಕದಲ್ಲೇ ಪ್ರಪ್ರಥಮ ಬಾರಿಗೆ ''ಎಮ್‌ಆರ್-ಲಿನಾಕ್'' ನಂತಹ ಕ್ರಾಂತಿಕಾರಿ ಆವಿಷ್ಕಾರಗಳನ್ನು ಪರಿಚಯಿಸುವ ಮೂಲಕ, ಅತ್ಯಂತ ನಿಖರವಾದ ಹಾಗೂ ವೈಯಕ್ತೀಕರಿಸಿದ ಚಿಕಿತ್ಸೆಯನ್ನು ನೀಡುವ ನಮ್ಮ ಸಾಮರ್ಥ್ಯವನ್ನು ನಾವು ಮತ್ತಷ್ಟು ಬಲಪಡಿಸುತ್ತಿದ್ದೇವೆ, " ಎಂದು ಹೆಬ್ಬಾಳದ (ಬ್ಯಾಟರಾಯನಪುರ) ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯ ಸಿಒಒ (COO) ಸಚಿನ್ ಎಸ್.ಇ. ಅವರು ಹೇಳಿದರು.

ರೋಗಿಗಳ ನೆಮ್ಮದಿ ಮತ್ತು ಅನುಕೂಲತೆಯನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ಈ ಕೇಂದ್ರವು ಇಂಟರ್ನ್ಯಾಷನಲ್ ಲೌಂಜ್, ಕೆಫೆಟೇರಿಯಾ ಮತ್ತು ವ್ಯಾಲೆಟ್ ಪಾರ್ಕಿಂಗ್ ಸೌಲಭ್ಯಗಳನ್ನು ಸಹ ಒಳಗೊಂಡಿದೆ. ಇದು ಸುಧಾರಿತ ವೈದ್ಯಕೀಯ ಆರೈಕೆಯೊಂದಿಗೆ ಅತ್ಯುತ್ತಮ ಆತಿಥ್ಯ ಗುಣಮಟ್ಟವನ್ನು ಸಮತೋಲನಗೊಳಿಸುವ ಎಚ್‌ಸಿಜಿಯ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಈ ಆಸ್ಪತ್ರೆಯ ಒಟ್ಟು ವಿಸ್ತೀರ್ಣ 1,75,086 ಚದರ ಅಡಿಗಳಷ್ಟಿದೆ. ಈ ಹೊಸ ಸೌಲಭ್ಯವು ಎಚ್‌ಸಿಜಿಯ ಬಹುಶಿಸ್ತೀಯ ಆರೈಕೆ ಮಾದರಿ ಹಾಗೂ ತಜ್ಞರ ನೇತೃತ್ವದ ಚಿಕಿತ್ಸಾ ಯೋಜನೆಯ ಬೆಂಬಲದೊಂದಿಗೆ ಸಮಗ್ರ ಕ್ಯಾನ್ಸರ್ ನಿರ್ವಹಣಾ ಕೇಂದ್ರವಾಗಿ ಕಾರ್ಯನಿರ್ವಹಿಸಲು ಸಂಪೂರ್ಣವಾಗಿ ಸಜ್ಜಾಗಿದೆ. ಇಲ್ಲಿ ಮೆಡಿಕಲ್ ಆಂಕೊಲಾಜಿ, ಸರ್ಜಿಕಲ್ ಆಂಕೊಲಾಜಿ ಮತ್ತು ರೇಡಿಯೇಶನ್ ಆಂಕೊಲಾಜಿ ವಿಭಾಗಗಳ ಖ್ಯಾತ ತಜ್ಞ ವೈದ್ಯರು ಲಭ್ಯವಿರಲಿದ್ದು, ರೋಗಿಗಳು ವಿವಿಧ ವಿಭಾಗಗಳ ಪರಿಣತರು ಜಂಟಿಯಾಗಿ ಪರಿಶೀಲಿಸಿ ಸಿದ್ಧಪಡಿಸುವ ವೈಯಕ್ತೀಕರಿಸಿದ ಚಿಕಿತ್ಸಾ ಕ್ರಮಗಳ (Protocols) ಗರಿಷ್ಠ ಪ್ರಯೋಜನವನ್ನು ಪಡೆಯಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಗುವಳಿ ಚೀಟಿಗಾಗಿ ಭೂ ಹಕ್ಕುದಾರರ ವೇದಿಕೆ ಪ್ರತಿಭಟನೆ
ಕಾಡಂಚಿನ ಗ್ರಾಮಗಳಿಗೆ ಕುಡಿವ ನೀರು ಸಂಪರ್ಕಕ್ಕೆ ಕೇಂದ್ರ ಸರ್ಕಾರ ಅನುಮತಿ