ಕನ್ನಡಪ್ರಭ ವಾರ್ತೆ ಮದ್ದೂರು
ಮದ್ದೂರು ವಿಧಾನಸಭಾ ವ್ಯಾಪ್ತಿಯ ಕೆ.ಬೆಳ್ಳೂರು ಹಾಗೂ ಹಳ್ಳಿಕೆರೆ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಕಾಲೋನಿಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ಜನರು ಹಿಂದಿನ ವಿಧಾನ ಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಬೆಂಬಲ ನೀಡುವ ಮೂಲಕ ಜಿಲ್ಲೆಗೆ ಅವರ ಪಕ್ಷಕ್ಕೆ ಏಳು ಸ್ಥಾನಗಳನ್ನು ತಂದುಕೊಟ್ಟಿದ್ದರೂ ಸಹ ಅಭಿವೃದ್ಧಿ ಮಾತ್ರ ಮಾಡಿಲ್ಲ ಎಂದು ಕಿಡಿಕಾರಿದರು.
ಕುಮಾರಸ್ವಾಮಿ ಅವರು ಅಧಿಕಾರಕ್ಕಾಗಿ ಮಂಡ್ಯ ಜಿಲ್ಲೆಯ ಜನರನ್ನು ಉಪಯೋಗಿಸಿಕೊಳ್ಳುತ್ತಾರೆಯೇ ಹೊರತು ಅಭಿವೃದ್ಧಿಗಲ್ಲ. ಯಾವುದೇ ಕ್ಷೇತ್ರದ ಜನಪ್ರತಿನಿಧಿಗಳಾದರೂ ಜನರ ನಿರೀಕ್ಷೆಗೆ ತಕ್ಕಂತೆ ಶೇ.100ರಷ್ಟು ಅಲ್ಲವಾದರೂ ಕನಿಷ್ಠ 40ರಷ್ಟಾದರೂ ಅಭಿವೃದ್ಧಿ ಮಾಡುವುದು ಅವರ ಜವಾಬ್ದಾರಿ. ಆದರೆ, ಅವರು ಅಭಿವೃದ್ಧಿ ವಿಚಾರದಲ್ಲಿ ಸರ್ಕಾರದ ವಿರುದ್ಧ ಬೊಟ್ಟು ತೋರಿಸಬಾರದು ತಿಳಿಸಿದರು.ಕುಮಾರಸ್ವಾಮಿ ಪ್ರತಿನಿಧಿಸುತ್ತಿರುವ ಮಂಡ್ಯ ಜಿಲ್ಲೆಗೆ ಅವರು ಮೊದಲು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು. ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವುದು, ರೈತರಿಗೆ ನೆರವಾಗುವ ಯೋಜನೆ ಸೇರಿದಂತೆ ಕೇಂದ್ರದಿಂದ ಯೋಜನೆಗಳಿಗೆ ಅನುದಾನ ತರುವುದು ಅವರ ಜವಾಬ್ದಾರಿಯಾಗಿದೆ. ಆದರೆ, ಅವರು ಕೇಂದ್ರದ ಯೋಜನೆಗಳನ್ನು ರಾಜ್ಯ ಸರ್ಕಾರಕ್ಕೆ ಪಟ್ಟಿ ನೀಡಿ ತರಬೇಕು ಎಂದರು.
ಸಂಸದ ಕುಮಾರಸ್ವಾಮಿ ಅವರು ಮೇಕೆದಾಟು ಯೋಜನೆ ಬಗ್ಗೆ ಈ ಹಿಂದೆ ಕೇಂದ್ರದಿಂದ ಐದು ನಿಮಿಷಗಳಲ್ಲಿ ಅನುಮೋದನೆ ತರುವುದಾಗಿ ಹೇಳಿದ್ದರು. ಒಂದೂವರೆ ವರ್ಷವಾದರೂ ಸಹ ಯೋಜನೆ ಜಾರಿಗೆ ತಂದಿಲ್ಲ ಎಂದು ಟೀಕಿಸಿದರು.ನಾನು ಮದ್ದೂರು ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ನಂತರ ಕ್ಷೇತ್ರದ ಅಭಿವೃದ್ಧಿಗೆ ಕಡೆಗೆ ಹೆಚ್ಚಿನ ಗಮನ ನೀಡಿದ್ದೇನೆ. ಆದರೆ, ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಯಲ್ಲಿ ಯಾವ ರೀತಿ ಅಭಿವೃದ್ಧಿ ಮಾಡುವ ಬಗ್ಗೆ ಚಿಂತನೆ ನಡೆಸಬೇಕು. ಅದನ್ನು ಬಿಟ್ಟು ಅವರು ಮಂಡ್ಯ ಜಿಲ್ಲೆಯ ಜನರಿಗೆ ಪಂಗನಾಮ ಹಾಕುತ್ತಿದ್ದಾರೆ ಎಂದು ದೂರಿದರು.
ಜಿಲ್ಲೆಯ ಜನರು ಕುಮಾರಸ್ವಾಮಿ ಅವರನ್ನು ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಜೊತೆಗೆ ಚುನಾವಣೆಗಳಲ್ಲಿ ಆಲೋಚನೆ ಮಾಡಿ ಮತ ನೀಡಬೇಕು ಎಂದರು.ಈ ವೇಳೆ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಪಿ.ಚಲುವರಾಜು, ಬೆಳ್ಳೂರು ಗ್ರಾಪಂ ಮಾಜಿ ಅಧ್ಯಕ್ಷ ಕೆಂಪರಾಜು, ಸದಸ್ಯರಾದ ಚಂದ್ರಮ್ಮ, ಶಶಿಕಲಾ, ರಾಜಣ್ಣ, ಮಾದೇಶ, ಅಪ್ಪಾಜಿ, ಮುಖಂಡರಾದ ಕೂಳಗೆರೆ ಜಯರಾಮು, ಮರಿಸ್ವಾಮಿ, ಚನ್ನೇಗೌಡ, ಶಿವು ಮತ್ತಿತರಿದ್ದರು.