ಎಚ್ಡಿಕೆ ದಾಖಲೆ ಬಿಡುಗಡೆ ಮಾಡಲಾಗದಿದ್ದರೆ ಕ್ಷಮೆ ಕೇಳಲಿ

KannadaprabhaNewsNetwork |  
Published : Jul 05, 2026, 01:15 AM IST
4ಕೆಆರ್ ಎಂಎನ್ 3.ಜೆಪಿಜಿಎಸ್ ಡಿಪಿಐ ಜಿಲ್ಲಾಧ್ಯಕ್ಷ ಅಮ್ಜದ್ ಷರೀಫ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಾಮನಗರ: ರಾಮನಗರದಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸೆಗಾರರಿಗೆ ಅಕ್ರಮವಾಗಿ ವೋಟರ್ ಐಡಿ ನೀಡುವ ಸ್ಕ್ಯಾಮ್ ನಡೆಯುತ್ತಿದೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಕುಮಾರಸ್ವಾಮಿಯವರು ಅದಕ್ಕೆ ಪೂರಕ ದಾಖಲೆಗಳನ್ನು ನೀಡಲಿ. ಅದು ಸಾಧ್ಯವಾಗದಿದ್ದರೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ) ಜಿಲ್ಲಾಧ್ಯಕ್ಷ ಅಮ್ಜದ್ ಷರೀಫ್ ಒತ್ತಾಯಿಸಿದರು

ರಾಮನಗರ: ರಾಮನಗರದಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸೆಗಾರರಿಗೆ ಅಕ್ರಮವಾಗಿ ವೋಟರ್ ಐಡಿ ನೀಡುವ ಸ್ಕ್ಯಾಮ್ ನಡೆಯುತ್ತಿದೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಕುಮಾರಸ್ವಾಮಿಯವರು ಅದಕ್ಕೆ ಪೂರಕ ದಾಖಲೆಗಳನ್ನು ನೀಡಲಿ. ಅದು ಸಾಧ್ಯವಾಗದಿದ್ದರೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ) ಜಿಲ್ಲಾಧ್ಯಕ್ಷ ಅಮ್ಜದ್ ಷರೀಫ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಯವರು ಬಿಜೆಪಿ ಐಟಿ ಸೆಲ್ ತಯಾರು ಮಾಡಿದ ವಿಡಿಯೋಗಳನ್ನು ಹೊರತುಪಡಿಸಿ ಬೇರೆ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಯಾವುದೇ ಅಕ್ರಮವಿದ್ದರೆ ನಿಷ್ಪಕ್ಷಪಾತ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು. ಆದರೆ ನಿರ್ದೋಷಿ ಪ್ರಜೆಗಳು ಮತ್ತು ಸಮುದಾಯಗಳನ್ನು ಕಳಂಕಿತಗೊಳಿಸಬಾರದು ಎಂದರು.

ಕುಮಾರಸ್ವಾಮಿಯವರು ತೋರಿಸಿದ ವಿಡಿಯೋದಲ್ಲಿ ಸಮುದಾಯ ಭವನದಲ್ಲಿ ಜನರನ್ನು ಕೂರಿಸಿ ಪರಿಶೀಲನೆ ನಡೆಸುತ್ತಿರುವ ದೃಶ್ಯ ಇದೆ. ಅದನ್ನು “ಅಕ್ರಮ ಬಾಂಗ್ಲಾದೇಶಿ ವಲಸೆಗಾರರಿಗೆ ಅಕ್ರಮವಾಗಿ ವೋಟರ್ ಐಡಿ ನೀಡುವ ಸ್ಕ್ಯಾಮ್'''''''' ಎಂದು ಬಣ್ಣಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ. ಇದು ಜನರನ್ನು ದಾರಿ ತಪ್ಪಿಸುವ ಮತ್ತು ಮುಸ್ಲಿಂ ಸಮುದಾಯದ ವಿರುದ್ಧ ಸಾಮುದಾಯಿಕ ದ್ವೇಷ ಹರಡುವ ರಾಜಕೀಯ ಪ್ರಯತ್ನ ಎಂದು ಟೀಕಿಸಿದರು.

ಎಸ್‌ ಐಆರ್ ಎಂಬುದು ಭಾರತೀಯ ಚುನಾವಣಾ ಆಯೋಗದ ಸಂವಿಧಾನಬದ್ಧ ಕರ್ತವ್ಯ. ನಕಲು ಮತದಾರರು, ಮೃತಪಟ್ಟವರು ಮತ್ತು ಅರ್ಹತೆ ಇಲ್ಲದವರನ್ನು ತೆರವುಗೊಳಿಸಿ ಅರ್ಹ ಪ್ರಜೆಗಳನ್ನು ಸೇರಿಸುವ ಪ್ರಕ್ರಿಯೆ. ಇದನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ರಾಮನಗರದಲ್ಲಿ ಬಿಎಲ್ ಒಗಳು ದಕ್ಷತೆಗಾಗಿ ಸಾಮೂಹಿಕ ಕೇಂದ್ರಗಳಲ್ಲಿ ಪರಿಶೀಲನೆ ಮಾಡಿದ್ದು, ಇದು ನಿಯಮ ಉಲ್ಲಂಘನೆಯಾಗಿದ್ದರೆ ತನಿಖೆಯಾಗಬೇಕು. ಆದರೆ, ಅದನ್ನು ಸಂಪೂರ್ಣವಾಗಿ ಅಕ್ರಮ ವಲಸೆಗಾರರ ಸಮಸ್ಯೆ ಎಂದು ಸಾಮಾನ್ಯೀಕರಿಸಿ ವಿಶೇಷವಾಗಿ ಮುಸ್ಲಿಂ ಬಹುಳ್ಯ ಪ್ರದೇಶಗಳೊಂದಿಗೆ ಜೋಡಿಸುವುದು ಸುಳ್ಳು ಮತ್ತು ದ್ವೇಷಪೂರಿತ ಎಂದು ದೂರಿದರು.

ಕೋಮು ವಿಷ ಹರಡುವ ವರ್ತನೆ:

ಜೆಡಿಎಸ್ ಪಕ್ಷವನ್ನು ಎನ್‌ಡಿಎ ಸಂಘಟನೆಗೆ ಸೇರಿಸಿಕೊಂಡ ನಂತರ ಕುಮಾರಸ್ವಾಮಿ ಅವರು ಬಿಜೆಪಿಗೆ ತಮ್ಮ ಬದ್ಧತೆಯನ್ನು ಪ್ರದರ್ಶಿಸುವ ಉದ್ದೇಶದಿಂದ ಶಾಂತಿ ಸೃಷ್ಟಿ ಮಾಡುವ ಬದಲು ಬಿಜೆಪಿ ಶೈಲಿಯಲ್ಲಿ ಕೋಮು ವಿಷ ಹರಡುವ ಮಾತುಗಳನ್ನು ಮತ್ತು ವರ್ತನೆಯನ್ನು ಆರಂಭಿಸಿದ್ದಾರೆ. ಹಾಗೆಯೇ ಅವರು ಹಿಂದೆ 20 ವರ್ಷಗಳ ಕಾಲ ಮುಸ್ಲಿಂ ಮತದಾರರ ಬೆಂಬಲದಿಂದಲೇ ಗೆದ್ದಿದ್ದಾರೆ. ಈಗ ಅದೇ ಸಮುದಾಯವನ್ನು ಬಾಂಗ್ಲಾದೇಶಿ ಎಂದು ಬಣ್ಣಿಸುವುದು ರಾಜಕೀಯ ಅವಕಾಶವಾದ ಮತ್ತು ದ್ವಂದ್ವ ನೀತಿ ತೋರಿಸುತ್ತದೆ ಎಂದು ಅಮ್ಜದ್ ಷರೀಫ್ ಟೀಕಿಸಿದರು.

ಚುನಾವಣಾ ಆಯೋಗವು ಎಸ್‌ಐಆರ್ ಪ್ರಕ್ರಿಯೆಯನ್ನು ಪೂರ್ಣ ಪಾರದರ್ಶಕತೆಯಿಂದ ಮನೆ-ಮನೆ ಪರಿಶೀಲನೆಯ ಮೂಲಕ ನಡೆಸಬೇಕು ಮತ್ತು ಯಾವುದೇ ರಾಜಕೀಯ ಪ್ರೇರಿತ ಹಸ್ತಕ್ಷೇಪವನ್ನು ಎಚ್ಚರಿಕೆಯಿಂದ ನೋಡಬೇಕು. ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಪ್ರಕ್ರಿಯೆ ಮತ್ತು ಸಾರ್ವಜನಿಕ ವಿಷಯಗಳನ್ನು ಸಾಮುದಾಯಿಕ ಧ್ರುವೀಕರಣ ಮತ್ತು ದ್ವೇಷ ಪ್ರಚಾರಕ್ಕೆ ಬಳಸಬಾರದು ಎಂದು ಅಮ್ಜದ್ ಷರೀಫ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಕಾರ್ಯದರ್ಶಿ ಸೈಯದ್ ಮತೀನ್, ಮುಖಂಡರಾದ ಸೈಯದ್ ಶಹಬಾಜ್, ಮೊಹಬೂಬ್ ಪಾಷ, ಸುಲ್ತಾನ್, ಸೈಯದ್ ಅಸಾದುಲ್ಲಾ, ಫೈರೋಜ್ ಅಲಿ ಖಾನ್ ಇತರರಿದ್ದರು.

4ಕೆಆರ್ ಎಂಎನ್ 3.ಜೆಪಿಜಿ

ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮ್ಜದ್ ಷರೀಫ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎನ್ ಡಿಎನಿಂದ SIR ಅಧಿಕಾರಿಗಳಿಗೆ ಆತಂಕ: ಕಾಂಗ್ರೆಸ್ ಆರೋಪ
ಬಸ್ -ಟಿಪ್ಪರ್ ನಡುವೆ ಡಿಕ್ಕಿ: ಹಲವರಿಗೆ ಗಾಯ