ಎಚ್‌ಡಿಕೆ ಗೆಲುವು: ಹೋಳಿಗೆ ಊಟದ ಹರಕೆ

KannadaprabhaNewsNetwork | Published : Jul 10, 2024 12:31 AM

ಸಾರಾಂಶ

ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು 13 ತಿಂಗಳು ಕಳೆದಿದೆ. ಆದರೆ, ಇದುವರೆಗೂ ಕೂಡ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ

ಗದಗ: 2024ರ ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗೆದ್ದು ಕೇಂದ್ರ ಸಚಿವರಾದರೆ ಗದಗಿನ ಪುಟ್ಟರಾಜ ಗವಾಯಿಗಳ ಭಕ್ತರಿಗೆ ಹೋಳಿಗೆ ಊಟ ಹಾಕಿಸುವುದಾಗಿ ಹರಕೆ ಹೊತ್ತಿದ್ದ ಜೆಡಿಎಸ್ ರಾಜ್ಯ ವಕ್ತಾರ ವಿ.ಆರ್.ಗೋವಿಂದಗೌಡ್ರ, ಇದೇ 18 ರಂದು ಆ ಹರಕೆ ತೀರಿಸಲು ಮುಂದಾಗಿದ್ದಾರೆ.ಎಚ್‌ಡಿಕೆ ಗೆಲುವು ಸಾಧಿಸಿ ಕೇಂದ್ರ ಮಂತ್ರಿಯೂ ಆಗಿದ್ದರಿಂದ, ಗುರು ಪುಟ್ಟರಾಜ ಗವಾಯಿಗಳಿಗೆ ಹರಕೆ ಹೊತ್ತಂತೆ ಗದಗಿನ ಮಠದಲ್ಲಿ ಹೋಳಿಗೆ ಪ್ರಸಾದದ ವ್ಯವಸ್ಥೆ ಮಾಡಿರುವುದಾಗಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಉದ್ರಿ ಸರ್ಕಾರ: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಉದ್ರಿ ಸರ್ಕಾರವಾಗಿದ್ದು, ಎಲ್ಲರಿಗೂ ಉದ್ರಿ ಹೇಳುತ್ತಿದೆ. ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು 13 ತಿಂಗಳು ಕಳೆದಿದೆ. ಆದರೆ, ಇದುವರೆಗೂ ಕೂಡ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಗೃಹಲಕ್ಷ್ಮಿ ಯೋಜನೆ, ಸರ್ಕಾರಿ ವೇತನ, ಸರ್ಕಾರಿ ಗುತ್ತಿಗೆದಾರರ ಹಣ ಬಿಡುಗಡೆ, ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ನೀಡದೇ ಎಲ್ಲವನ್ನೂ ಮಾಡುತ್ತೇವೆ ಎಂದು ಉದ್ರಿ ಹೇಳುತ್ತಲೇ ಹೋಗುತ್ತಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬಸವರಾಜ ಅಪ್ಪಣ್ಣವರ, ಎಂ.ಎಸ್. ಪರ್ವತಗೌಡ್ರ, ರಮೇಶ್ ಹುಣಸಿಮರದ, ಮರಿಯಪ್ಪ ಬಳ್ಳಾರಿ, ಪ್ರಫೂಲ್ ಪುಣೇಕರ ಉಪಸ್ಥಿತರಿದ್ದರು.

ಅಭಿಪ್ರಾಯ ಸಂಗ್ರಹ: ಗದಗ ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆ ಸ್ಥಾಪಿಸಬೇಕೆಂದು ಕೇಂದ್ರ ಸಚಿವ ಎಚ್‍.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದು. ಇದಕ್ಕೆ ಅವರು ಪೂರಕವಾಗಿ ಸ್ಪಂದಿಸಿದ್ದಾರೆ. ಅದಕ್ಕಾಗಿ ಗದಗ ಜಿಲ್ಲೆಯಲ್ಲಿ ಯಾವ ರೀತಿಯ ಕೈಗಾರಿಕೆ ಸ್ಥಾಪನೆ ಮಾಡಬೇಕು, ಯಾವುದು ಮಾಡಿದರೆ ಸೂಕ್ತ ಎನ್ನುವ ಬಗ್ಗೆ ಸಾರ್ವಜನಿಕರಿಂದ ಹೆಚ್ಚಿನ ಅಭಿಪ್ರಾಯ ಸಂಗ್ರಹಿಸಲಾಗುವುದು. ಸಾರ್ವಜನಿಕರು ಈ ಅಭಿಯಾನದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ವ್ಯಾಟ್ಸಪ್ ಹಾಗೂ ಇಮೇಲ್ ಮುಖಾಂತರ ಅಭಿಪ್ರಾಯ ಕಳಿಸಬೇಕು. ಅದಕ್ಕಾಗಿ ಸಾರ್ವಜನಿಕರು ಈ ಕೆಳಕಂಡ ವಿಳಾಸಕ್ಕೆ ತಮ್ಮ ಮಾಹಿತಿಯನ್ನು ಜು.20ರ ಒಳಗೆ ಸಲ್ಲಿಸಬೇಕು ಎಂದು ಗೋವಿಂದಗೌಡ್ರ ವಿನಂತಿಸಿದರು.

whatsapp: 8495900009

email: youngindia@gmail.com

Share this article