ಹೈನುಗಾರಿಕೆ, ತಾಳೆ, ಭತ್ತ, ಕಬಬಿನಲ್ಲೂ ಗಳಿಗೆ

KannadaprabhaNewsNetwork |  
Published : Jun 25, 2025, 12:33 AM IST
1 | Kannada Prabha

ಸಾರಾಂಶ

ತಾಳೆ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ವಾರ್ಷಿಕ 2.50 ಲಕ್ಷ ರು. ಆದಾಯ ಗಳಿಸುತ್ತಿದ್ದಾರೆ.

--

ಫೋಟೋ ನಾಗಲಕ್ಷ್ಮಮ್ಮ

ನಾಗಲಕ್ಷ್ಮಮ್ಮ 1 ರಿಂದ 5.ಜೆಪಿಜಿ

---

ಅಂಶಿ ಪ್ರಸನ್ನಕುಮಾರ್‌

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ತಾಲೂಕು ಕಡಕೊಳದ ನಾಗಲಕ್ಷ್ಮಮ್ಮ ಅವರು ತಾಳೆ, ಭತ್ತ, ಕಬ್ಬು ಬೆಳೆಯುತ್ತಾ ಹೈನುಗಾರಿಕೆಯಲ್ಲೂ ತೊಡಗಿಸಿಕೊಂಡು ಭರ್ಜರಿ ಲಾಭ ಮಾಡುತ್ತಿದ್ದಾರೆ.

ಅವರಿಗೆ 10 ಎಕರೆ ನೀರಾವರಿ ಜಮೀನಿದೆ. ತಾಳೆ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ವಾರ್ಷಿಕ 2.50 ಲಕ್ಷ ರು. ಆದಾಯ ಗಳಿಸುತ್ತಿದ್ದಾರೆ. ಮೂಕ್ಕಾಲು ಎಕರೆಯಲ್ಲಿ 25 ಕ್ವಿಂಟಲ್‌ ಭತ್ತದ ಇಳುವರಿ ಪಡೆಯುತ್ತಿದ್ದು, 50 ಸಾವಿರ ರು. ಆದಾಯವಿದೆ. ಪ್ರತಿ ವರ್ಷ 60-70 ಟನ್‌ ಕಬ್ಬು ಬೆಳೆಯುತ್ತಿದ್ದು, ನಂಜನಗೂಡು ತಾ. ಅಳಗಂಚಿಯ ಬನ್ನಾರಿ ಅಮ್ಮನ್‌ ಕಾರ್ಖಾನೆಗೆ ಪೂರೈಸುತ್ತಿದ್ದಾರೆ. ಸುಮಾರು 2 ಲಕ್ಷ ರು. ಆದಾಯ ಬರುತ್ತದೆ.

ಹೈನುಗಾರಿಕೆ, ಕುರಿ ಹಾಗೂ ಕೋಳಿ ಸಾಕಾಣಿಕೆ ಇವರ ಉಪಕಸುಬು. 9 ಹಸುಗಳಿದ್ದು, ಪ್ರತಿನಿತ್ಯ ಡೇರಿಗೆ 25-30 ಲೀಟರ್‌ ಹಾಲು ಪೂರೈಸುತ್ತಾರೆ. 25 ಕುರಿಗಳಿವೆ. 50 ಕೋಳಿಗಳಿವೆ. ಮೀನು ಕೃಷಿಯನ್ನು ಹತ್ತು ವರ್ಷ ಕೈಗೊಂಡಿದ್ದರು. ಅದರಿಂದಲೂ ಆದಾಯವಿತ್ತು. ಇತ್ತೀಚೆಗೆ ಆಳುಗಳ ಸಮಸ್ಯೆ ಮತ್ತಿತರ ಕಾರಣಗಳಿಂದಾಗಿ ಮುಂದಿನಷ್ಟು ಚಟುವಟಿಕೆಯಿಂದ ಕೂಡಿಲ್ಲ.

ಮೀನು ಕೃಷಿಯಲ್ಲಿ ನಾಗಲಕ್ಷ್ಮಮ್ಮ ಅವರ ಸಾಧನೆಗಾಗಿ 2022ರ ರೈತ ದಸರಾದಲ್ಲಿ ಸನ್ಮಾನಿಸಲಾಗಿದೆ.ಸಂಪರ್ಕ ವಿಳಾಸ

ನಾಗಲಕ್ಷ್ಮಮ್ಮ ಕೋಂ ತೊಂಡೇಗೌಡ

ಕಡಕೊಳ

ಮೈಸೂರು ತಾಲೂಕು

ಮೈಸೂರು ಜಿಲ್ಲೆ

ಮೊ.98861 68304 ಕೋಟ್‌

ಕೃಷಿ ಸೂಪರ್‌. ಚೆನ್ನಾಗಿ ಮಾಡಿದರೆ ಉತ್ತಮವಾಗಿ ಲಾಭ ಗಳಿಸಬಹುದು.

- ಶ್ರೀಕಂಠ, ನಾಗಲಕ್ಷಮ್ಮ ಅವರ ಪುತ್ರ, ಕಡಕೊಳ

---

ಬಾಕ್ಸ್‌

ರಾಜಕಾರಣದ ಕುಟುಂಬ

ಇವರದು ಸಂಪೂರ್ಣ ರಾಜಕಾರಣದ ಕುಟುಂಬ. ತೊಂಡೇಗೌಡರು ಗ್ರಾಪಂ ಮಾಜಿ ಉಪಾಧ್ಯಕ್ಷರು. ಅವರ ಪತ್ನಿ ನಾಗಲಕ್ಷ್ಮಮ್ಮ ಅವರು ತಾಪಂ ಮಾಜಿ ಅಧ್ಯಕ್ಷರು. ಈ ದಂಪತಿಯ ಪುತ್ರ ಶ್ರೀಕಂಠ ಅವರು ಗ್ರಾಪಂ ಮಾಜಿ ಅಧ್ಯಕ್ಷರು. ಸಕ್ರಿಯ ರಾಜಕಾರಣದಲ್ಲಿದ್ದರೂ ಕೃಷಿಯಲ್ಲಿ ತೊಡಗಿಸಿಕೊಂಡಿರುವುದು ವಿಶೇಷ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ