ಕನ್ನಡಪ್ರಭ ವಾರ್ತೆ ಆಳಂದ
ಕಳೆದ ಸಾಲಿನಲ್ಲಿ ಶೇ 61 ಪ್ರತಿಶತ ಫಲಿತಾಂಶ ತಂದುಕೊಂಡರೆ ಈ ವರ್ಷ ಶೇ. 40.11 ಫಲಿತಾಂಶ ಪಡೆದು 21 ಪ್ರತಿಶತ ಹಿನ್ನೆಡೆ ಅನುಭವಿಸಿದೆ.
ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ-2475 ಹಾಗೂ ವಿದ್ಯಾರ್ಥಿನಿಯರ ಸಂಖ್ಯೆ 2351 ಹಾಜರಾಗಿದ್ದು ಸೇರಿ ಒಟ್ಟು 4812 ವಿದ್ಯಾರ್ಥಿಗಳಲ್ಲಿ 753 ವಿದ್ಯಾರ್ಥಿಗಳು ಮತ್ತು 1183 ವಿದ್ಯಾರ್ಥಿನಿಯರು ಸೇರಿ 1936 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳು ಶೇ 30.42 ಪ್ರತಿಶತ ಪಾಸಾದರೆ ವಿದ್ಯಾರ್ಥಿನಿಯರು ಶೇ 50.32ರಷ್ಟು ಸಂಖ್ಯೆಯಲ್ಲಿ ಪಾಸಾಗಿದ್ದು, ಒಟ್ಟಾರೆಯಾಗಿ ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ 40.11ರಷ್ಟು ಪಡೆದುಕೊಂಡಿದೆ ಎಂದು ಇಲಾಖೆಯ ಮೂಲಗಳು ದೃಢಪಡಿಸಿವೆ. ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೆ ಹೋಲಿಸಿದರೆ ಸರ್ಕಾರಿ ಶಾಲೆಗಳ ಪಾಸಾದ ಮಕ್ಕಳು ಹೆಚ್ಚು ಅಂಕಪಡೆದಿದ್ದಾರೆ.ವಿಶೇಷ ತರಗತಿಗೆ ಮಕ್ಕಳ ನಿರಾಸಕ್ತಿ:
-----------
ಮರೆಪ್ಪ ಬಡಿಗೇರ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರು ಆಳಂದ.
1 ರಿಂದ 5ನೇ ತರಗತಿಗೆ ಕಳೆದ 30ವರ್ಷಗಳಿಂದ ಶಿಕ್ಷಕರ ನೇಮಕಾತಿ ಆಗಿಲ್ಲ. ಮೊದಲು ಶಿಕ್ಷಕರ ನೇಮಕಾತಿ ಆಗಬೇಕು. ಕಳೆದ ಸಾಲಿನಲ್ಲಿ 5ಸಾವಿರ ಶಿಕ್ಷಕರು ಈ ಭಾಗದಿಂದ ವರ್ಗಾವಣೆಯಾಗಿದ್ದಾರೆ. ಇದನ್ನು ತುಂಬುವ ಕಾರ್ಯಮಾಡಬೇಕು. ಪ್ರಾಥಮಿಕ ಹಂತದಲ್ಲಿ ಗುಣಮಟ್ಟದ ಶಿಕ್ಷಕರ ನೇಮಿಸಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ಕೊಡುವಂತಾಗಲಿ, ಬಿಸಿಯೂಟ ಮಾತ್ರ ಜಾರಿಯಲ್ಲಿಟ್ಟು, ತರಬೇತಿಗಳನ್ನು ರದ್ದುಗೊಳಿಸಿ ಶಿಕ್ಷಕರ ಪೂರ್ಣ ಸಮಯವನ್ನು ಮಕ್ಕಳೊಂದಿಗೆ ಶಾಲೆಯಲ್ಲೇ ಕಳೆಯುವಂತಾದರೆ, ಪ್ರೌಢಹಂತದ 10ನೇ ತರಗತಿಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮವಹಿಸಬೇಕು.