ಆರೋಗ್ಯ, ಶಿಕ್ಷಣ ಪ್ರತಿಯೊಬ್ಬರ ಹಕ್ಕಾಗಬೇಕು

KannadaprabhaNewsNetwork |  
Published : Feb 05, 2024, 01:47 AM IST
ಸಿಕೆಬಿ-2 ಜೈನ್ ಮಿಷನ್ ಆಸ್ಪತ್ರೆಯಲ್ಲಿ ನೂತನ ಸಿಟಿ ಸ್ಕ್ಯಾನ್ ಮತ್ತು ಸೆಕೆಂಡ್ ಯೂನಿಟ್ ಡಯಾಲಿಸಿಸ್ ಘಟಕಗಳನ್ನು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಲೋಕಾರ್ಪಣೆ ಮಾಡಿದರು.  | Kannada Prabha

ಸಾರಾಂಶ

ರಾಜ್ಯ ಸರ್ಕಾರ ಅತಿ ಶೀಘ್ರದಲ್ಲಿ ಪ್ರತಿ ಮನೆಗೆ ಆರೋಗ್ಯ ಸೌಲಭ್ಯ ತಲುಪಿಸಲು ಯೋಜನೆ ರೂಪಿಸಿದ್ದು ಗೃಹ ಆರೋಗ್ಯ ಯೋಜನೆಯ ಮೂಲಕ, ಬಿಪಿ. ಮಧುಮೇಹ, ಕಿಡ್ನಿ, ಹೃದಯ ತೊಂದರೆ ಇತ್ಯಾದಿ ಖಾಯಿಲೆಗಳಿಗೆ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡುವ ಕೆಲಸ ಮಾಡಲಾಗುವುದು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ದೇಶದಲ್ಲಿ ಆರೋಗ್ಯ ಮತ್ತು ಶಿಕ್ಷಣ ಪ್ರತಿಯೊಬ್ಬರ ಹಕ್ಕಾಗಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮರ್ಪವಾದ ಆರೋಗ್ಯ ಸೌಲಭ್ಯಗಳು ಅತಿ ಸುಲಭವಾಗಿ ದೊರೆಯುವಂತಾಗಬೇಕು. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಉತ್ತಮ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವೆ ದಿನೇಶ್‌ ಗುಂಡುರಾವ್‌ ತಿಳಿಸಿದರು.ನಗರ ಹೊರವಲಯದ ಜೈನ್‌ ಮಿಷನ್‌ ಆಸ್ಪತ್ರೆಯಲ್ಲಿ ಸಿಟಿಸ್ಕ್ಯಾನ್‌ ಮತ್ತು 2 ಹಂತದ ಡಯಾಲಿಸಿಸ್‌ ಯುನಿಟ್‌ಗಳ ಲೋಕಾರ್ಪಣೆ ಮಾಡಿ ಮಾತನಾಡಿ, ಜನರಿಗೆ ಆರೋಗ್ಯ ಮತ್ತು ಶಿಕ್ಷಣದ ಸೌಲಭ್ಯಗಳು ಸಮರ್ಪಕವಾಗಿ ನೀಡಲು ಸಾಧ್ಯವಾದರೆ ಮಾತ್ರ ಅವರ ಜೀವನದ ಗುಟಮಟ್ಟ ಸುಧಾರಿಸಲು ಸಾಧ್ಯ ಎಂದರುಸರ್ಕಾರಿ ಜತೆ ಖಾಸಗಿ ಸಹಭಾಗಿತ್ವ

ಸರ್ಕಾರಿ, ಎನ್‌.ಜಿ.ಒ ಮತ್ತು ಖಾಸಗಿ ಸಹ ಭಾಗಿತ್ವದಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೌಲಭ್ಯಗಳನ್ನು ನೀಡಲು ತಮ್ಮ ಸರ್ಕಾರ ಚಿಂತನೆ ನಡೆಸಿದೆ. ಸಾಮಾಜಿಕ ಬದ್ದತೆ ಮಾನವೀಯತೆ ಇವು ವೈದ್ಯಕೀಯ ಕ್ಷೇತ್ರದಲ್ಲಿ ಅಪರೂಪವಾಗ ತೊಡಗಿದ್ದು, ಇದರಿಂದ ಸಾಮಾನ್ಯರು ಮತ್ತು ಬಡವರ್ಗದ ಜನರಿಗೆ ವೈದ್ಯಕೀಯ ಸೇವೆ ಗಗನ ಕುಸುಮದಂತಾಗಿದೆ, ಈ ಮನಸ್ಥಿತಿಯಿಂದ ಆಸ್ಪತ್ರೆಗಳು ಮತ್ತು ವೈದ್ಯರು ಹೊರಬರಬೇಕು ಎಂದು ವೈದ್ಯರಿಗೆ ಕಿವಿಮಾತು ಹೇಳಿದರು,ರೋಗ ಬಾರದಂತೆ ಎಚ್ಚರ ವಹಿಸಿಸಾರ್ವಜನಿರಿಗೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಬೇಕು. ರೋಗ ಬರುವುದಕ್ಕಿಂತ ಮೊದಲೇ ಎಚ್ಚರಿಕೆ ವಹಿಸಬೇಕು. ರೋಗ ಬಂದ ನಂತರ ಚಿಕಿತ್ಸೆ ಪಡೆಯುವದಕ್ಕಿಂತ ರೋಗ ಬರದಂತೆ ತಡೆಯುವ ಪ್ರಯತ್ನ ಮಾಡಬೇಕು. ಪ್ರತಿದಿನ ಬೆಳಿಗ್ಗೆ ಯೋಗ ವ್ಯಾಯಾಮ ಮತ್ತು ಉತ್ತಮ ಆಹಾರ ಪದ್ದತಿಗಳನ್ನು ರೂಢಿಸಿಕೊಳ್ಳಬೇಕು. ಒತ್ತಡ ರಹಿತ ಜೀವನ ನಡೆಸಲು ತಮ್ಮ ಜೀವನ ಶೈಲಿ ಬದಲಾವಣೆ ಮಾಡಬೇಕು ಎಂದು ಸಲಹೆ ನೀಡಿದರು.ತಮ್ಮ ಸರ್ಕಾರ ಅತಿ ಶೀಘ್ರದಲ್ಲಿ ಪ್ರತಿ ಮನೆಗೆ ಆರೋಗ್ಯ ಸೌಲಭ್ಯ ತಲುಪಿಸಲು ಯೋಜನೆ ರೂಪಿಸಿದ್ದು ಗೃಹ ಆರೋಗ್ಯ ಯೋಜನೆಯ ಮೂಲಕ, ಬಿಪಿ. ಮಧುಮೇಹ, ಕಿಡ್ನಿ, ಹೃದಯ ತೊಂದರೆ ಇತ್ಯಾದಿ ಖಾಯಿಲೆಗಳಿಗೆ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡುವ ಕೆಲಸ ಮಾಡಲಾಗುವುದು. ವೈದ್ಯಕೀಯ ಪದವಿ ಪಡೆದ ಪ್ರತಿಯೊಬ್ಬರೂ ಕನಿಷ್ಠ ಅವಧಿಗೆ ಗ್ರಾಮೀಣ ಸೇವೆ ಸಲ್ಲಿಸುವುದು ಕಡ್ಡಾಯ ಮಾಡಲಾಗಿದೆ. ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳು ಒಂದು ವರ್ಷ ಕಡ್ಡಾಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಬೇಕು ಎಂದು ಹೇಳಿದರು.

7ರಂದು ದೆಹಲಿಯಲ್ಲಿ ಪ್ರತಿಭಟನೆಫೆಬ್ರವರಿ 7 ರಂದು ಕಾಂಗ್ರೆಸ್‌ ವತಿಯಿಂದ ದೆಹಲಿಯಲ್ಲಿ ರಾಜ್ಯದ ಎಲ್ಲ ಕಾಂಗ್ರೆಸ್‌ ಶಾಸಕರು ಕೇಂದ್ರ ಸರ್ಕಾರದ ವತಿಂದ ರಾಜ್ಯಕ್ಕೆ ಬಾಕಿ ಉಳಿಸಿಕೊಂಡಿರುವ ಸುಮಾರು 60ಸಾವಿರ ಕೋಟಿಗೂ ಹೆಚ್ಚು ಹಣವನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತ್ತಾಯಿಸಿ ಪ್ರತಿಭಟನೆ ಮಾಡಲಾಗುವುದು. ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಮಾಡುತ್ತಿರುವ ಅನ್ಯಾಯ ಮತ್ತು ತಾರತಮ್ಯದ ವಿರುದ್ಧ ಹೋರಾಟ ಮಾಡಲಾಗುವುದು ಎಂದರು.ಈ ವೇಳೆ ಜೈನ್ ಮಿಷನ್ ಆಸ್ಪತ್ರೆ ಚೇರ್ಮನ್ ಡಾ. ನರ್ಪತ್ ಸೋಲಂಕಿ, ಕಾರ್ಯದರ್ಶಿ ಉತ್ತಮ್ ಚಂದ್ ಜೈನ್,ವ್ಯವಸ್ಥಾಪಕ ನಿರ್ದೇಶಕ ಹಾಗೂ ಟ್ರಸ್ಟಿ ರಾಕೇಶ್ ಜೈನ್, ಆರೋಗ್ಯ ಮತ್ತು ಕುಟುಂಭ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್,ಜಿಲ್ಲಾ ಕ್ಷಯರೋಗಾಧಿಕಾರಿ ಡಾ.ಉಮಾ, ಬೆಂಗಳೂರಿನ ಲೈಬರ್ ಮಷೀನ್ ಟೂಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಘನಶ್ಯಾಮ್ ಅಗರ್ವಾಲ್, ಮತ್ತಿತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ