ಕುಷ್ಟಗಿ: ಮನೆಯಲ್ಲಿರುವ ಹಿರಿಯ ಜೀವಿಗಳು ಆರೋಗ್ಯವಂತರಾಗಿರಲು ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು ಎಂದು ಆಯುಷ್ ಆರೋಗ್ಯಾಧಿಕಾರಿ ವಿಜಯಲಕ್ಷ್ಮೀ ಹೇಳಿದರು.
ಕಲಿಕೆ ಟಾಟಾ ಟ್ರಸ್ಟ್ ಸಂಸ್ಥೆಯು ಹಿರಿಯರ ಆರೋಗ್ಯ ಮತ್ತು ಯೋಗಕ್ಷೇಮದ ಕುರಿತು ಆರೋಗ್ಯ ತಪಾಸಣೆ ಶಿಬಿರ ಆಯೋಜನೆ ಮಾಡಿರುವದು ಮಹತ್ತರ ಕಾರ್ಯವಾಗಿದೆ,. ಸಂಸ್ಥೆ ನೀಡಿದ ಉಪಕರಣ ಬಳಕೆ ಮಾಡಿಕೊಂಡು ಚಟುವಟಿಕೆ ಮಾಡಿದರೆ ಹಿರಿಯರು ದಿನವಿಡಿ ಉತ್ಸಾಹದಿಂದ ಇರಬಹುದು ಎಂದು ತಿಳಿಸಿದರು.
ಪಿಡಿಒ ವಿದ್ಯಾಶ್ರೀ ಮಾತನಾಡಿ, ಹಿರಿಯರ ಆರೋಗ್ಯ ತಪಾಸಣಾ ಕುರಿತು ಶಿಬಿರ ಆಯೋಜನೆ ಮಾಡಿದ್ದು ಸಂತಸದಾಯಕವಾಗಿದೆ ಇಂತಹ ಕಾರ್ಯಗಳಿಗೆ ಗ್ರಾಪಂದಿಂದ ಸದಾ ಬೆಂಬಲವಿರುತ್ತದೆ ಎಂದು ಹೇಳಿದರು.ಕಲಿಕೆ ಟಾಟಾ ಟ್ರಸ್ಟ್ ಸಂಯೋಜಕ ಸಿದ್ದಲಿಂಗ ರೆಡ್ಡಿ ಮಾತನಾಡಿದರು.
ಗ್ರಾಪಂ ಅಧ್ಯಕ್ಷ ಮುತ್ತಪ್ಪ ಬೂದಿಹಾಳ ಕಾರ್ಯಕ್ರಮ ಉದ್ಘಾಟಿಸಿದರು, ಈ ಸಂದರ್ಭದಲ್ಲಿ ಆಯುಷ್ ಇಲಾಖೆಯ ಅಧಿಕಾರಿ ದೀಪಾ ಉಲ್ಸೂರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರವೀಂದ್ರ ನಂದಿಹಾಳ, ಸಿಎಚ್ಒ ದೇವರಾಜ್ ಪೂಜಾರಿ, ಫಾರ್ಮಸಿಸ್ಟ್ ಸುಧಾಕರ, ಐಸಿಡಿಸಿ ಆಪ್ತಸಮಾಲೋಚಕ ಚನ್ನಬಸಪ್ಪ, ಗ್ರಂಥಾಲಯ ಮೇಲ್ವಿಚಾರಕ ಅಲ್ಲಸಾಬ್, ವಿಜಯಲಕ್ಷ್ಮಿ ಕಂಬಾರ, ರುಕ್ಮಿಣಿ, ಮುತ್ತಪ್ಪ ಗುಡಿಮನಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತರು ಹಿರಿಯ ನಾಗರಿಕರು ಭಾಗವಹಿಸಿದ್ದರು.