ಹಿಂದಲಹಳ್ಳಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ

KannadaprabhaNewsNetwork |  
Published : Nov 19, 2023, 01:30 AM IST
18ಎಚ್ಎಸ್ಎನ್15 : ಹೊಳೆನರಸೀಪುರ ತಾಲೂಕಿನ ಎಚ್.ಹಿಂದಲಹಳ್ಳಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕ್ಯಾತನಹಳ್ಳಿ ಗ್ರಾ.ಪಂ. ವತಿಯಿಂದ ಮಧುಮೇಹ ದಿನಾಚರಣೆ ಪ್ರಯುಕ್ತ ಆರೋಗ್ಯ ಶಿಬಿರ ಆಯೋಜನೆ ಮಾಡಲಾಗಿತ್ತು. | Kannada Prabha

ಸಾರಾಂಶ

ಹೊಳೆನರಸೀಪುರ ತಾಲೂಕಿನ ಎಚ್.ಹಿಂದಲಹಳ್ಳಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕ್ಯಾತನಹಳ್ಳಿ ಗ್ರಾ.ಪಂ. ವತಿಯಿಂದ ಮಧುಮೇಹ ದಿನಾಚರಣೆ ಪ್ರಯುಕ್ತ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. ಪ್ರತಿದಿನ ಸುಮಾರು ೨೦ ನಿಮಿಷ ವ್ಯಾಯಾಮ ಅಥವಾ ನಡಿಗೆಯಿಂದ ಮಧುಮೇಹವನ್ನು ದೂರುವಿಡಬಹುದೆಂದು ವೈದ್ಯರು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪ್ರತಿದಿನ ಸುಮಾರು ೨೦ ನಿಮಿಷ ವ್ಯಾಯಾಮ ಅಥವಾ ನಡಿಗೆಯಿಂದ ಮಧುಮೇಹವನ್ನು ದೂರುವಿಡಬಹುದೆಂದು, ವೈದ್ಯರ ಸಲಹೆಯನ್ನು ಪಾಲಿಸಿದಲ್ಲಿ ನೆಮ್ಮದಿಯ ಜೀವನ ನಡೆಸಬಹುದಲ್ಲವೇ ಎಂದು ಮುಖ್ಯ ಶಿಕ್ಷಕ ನಾಗರಾಜು ಅಭಿಪ್ರಾಯಪಟ್ಟರು.

ತಾಲೂಕಿನ ಎಚ್.ಹಿಂದಲಹಳ್ಳಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕ್ಯಾತನಹಳ್ಳಿ ಗ್ರಾ.ಪಂ. ವತಿಯಿಂದ ಮಧುಮೇಹ ದಿನಾಚರಣೆ ಪ್ರಯುಕ್ತ ಆಯೋಜನೆ ಮಾಡಿದ್ದ ಆರೋಗ್ಯ ಶಿಬಿರದಲ್ಲಿ ಮಾತನಾಡಿದರು. ಮನುಷ್ಯನ ದೇಹದಲ್ಲಿ ಮೆದೋಜೀರಿಕ ಗ್ರಂಥಿಯು ಇನ್ಸುಲಿನ್ ಅನ್ನೋ ಹಾರ್ಮೋನ್‌ನನ್ನು ಉತ್ಪಾದಿಸಿ, ಆಹಾರ ಸೇವನೆಯಿಂದ ದೇಹದ ಅಂಗಾಂಶಗಳಲ್ಲಿ ಶೇಖರಣೆಗೊಂಡ ಸಕ್ಕರೆ ಅಂಶವನ್ನು ಸಮತೋಲನದಲ್ಲಿ ಇರಿಸುತ್ತದೆ. ಆದರೆ ದೇಹದಲ್ಲಿ ಇನ್ಸುಲಿನ್ ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗದೇ ಇರುವುದು ಅಥವಾ ದೇಹವು ಇನ್ಸುಲಿನ್‌ಗೆ ಸರಿಯಾಗಿ ಪ್ರತಿಕ್ರಿಯೆ ನೀಡದಿರುವಾಗ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿ ಮಧುಮೇಹ ಕಾಯಿಲೆ ಶುರುವಾಗುತ್ತದೆ. ಸಕ್ಕರೆ ಕಾಯಿಲೆ ಅಥವಾ ಮಧುಮೇಹದ ಲಕ್ಷಣಗಳು ಇಂತಿದ್ದು ಅತಿಯಾಗಿ ಬಾಯಾರಿಕೆ ಆಗುವುದು (ರಕ್ತದಲ್ಲಿ ಆಮ್ಲೀಯತೆಯ ಪ್ರಮಾಣ ಹೆಚ್ಚಾದರೂ ಬಾಯಾರಿಕೆ ಕಾಣಿಸಿಕೊಳ್ಳುತ್ತದೆ), ಹಸಿವಾಗುವುದು, ದೃಷ್ಟಿ ಮಂಜಾಗುವಿಕೆ, ತೂಕ ಇಳಿಯುವಿಕೆ, ಬೆವರು, ಸುಸ್ತು, ಗಾಯ ಬೇಗ ವಾಸಿಯಾಗದೇ ಇರುವುದು, ಪದೇ ಪದೇ ಮೂತ್ರ ವಿಸರ್ಜನೆ, ಗಡಸು ಚರ್ಮ, ಕೈಕಾಲುಗಳ ಅಡಿಯಲ್ಲಿ ಜುಮ್ಮೆನಿಸುವುದು ಲಕ್ಷಣಗಳು ಇದ್ದು, ಕೆಲವೊಂದು ಸಲ ಮೇಲಿನ ಯಾವುದೇ ಲಕ್ಷಣ ಕಂಡುಬರದೇ ಇರಬಹುದು, ರಕ್ತ ಪರೀಕ್ಷೆ ಮಾಡಿಸಿಕೊಂಡಾಗ ಗೊತ್ತಾಗುತ್ತದೆ. ಆರೋಗ್ಯದಲ್ಲಿ ಏರುಪೇರು ಅಥವಾ ೩೦ ವರ್ಷಗಳ ನಂತರ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳದೇ ಇದ್ದು, ಮಧುಮೇಹ ಹೆಚ್ಚಾದಲ್ಲಿ ಲಕ್ವ, ರಕ್ತನಾಳಗಳ ತೊಂದರೆ, ಹೃದಯಾಘಾತ, ಮೂತ್ರಪಿಂಡಗಳಿಗೆ ಹಾನಿಯಾಗುತ್ತದೆ. ಆದ್ದರಿಂದ ಕಾಯಿಲೆ ಬರುವ ಮುನ್ನ ಸಮತೋಲನ ಸಾತ್ವಿಕ ಆಹಾರ, ನಿಯಮಿತ ವ್ಯಾಯಾಮ ಹಾಗೂ ಸಕರಾತ್ಮಕ ಚಿಂತನೆಗಳನ್ನು ಮಾಡುತ್ತಾ, ಆರೋಗ್ಯ ಬಗ್ಗೆ ಕಾಳಜಿ ವಹಿಸುವುದು ಅವಶ್ಯ. ಇತ್ತೀಚಿನ ವರ್ಷದಲ್ಲಿ ಮಧುಮೇಹಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಮಧುಮೇಹಿಗಳು ಅಗತ್ಯ ಚಿಕಿತ್ಸೆ ಜತೆಗೆ ವೈದ್ಯರ ಸಲಹೆ ಹಾಗೂ ಸೂಚನೆಗಳ ಪಾಲನೆ ಮಾಡುತ್ತಾ ಆರೋಗ್ಯ ರಕ್ಷಣೆಗೆ ಹೆಚ್ಚಿನ ಕಾಳಜಿ ತೋರುವಂತೆ ಸಲಹೆ ನೀಡಿದರು.

ಗ್ರಾ.ಪಂ. ಕಾರ್ಯದರ್ಶಿ ರವಿ, ಗ್ರಾಮ ಆರೋಗ್ಯ ಯೋಜನೆ ತಾ. ಸಂಯೋಜಕ ಐ.ಕೆ.ರಮೇಶ್, ಶಿಕ್ಷಕ ವೀರಭದ್ರಯ್ಯ, ಶೃಶ್ರೂಷಕಿ ಕಮಲಮ್ಮ ಹಾಗೂ ಆದರ್ಶಿನಿ, ಆಶಾ ಕಾರ್ಯಕರ್ತೆ ಸುಕನ್ಯಾ, ಲಕ್ಕೇಗೌಡ, ಇತರರು ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ