ಯಲ್ಲಾಪುರ: ಇತ್ತೀಚಿನ ವಿದ್ಯಾರ್ಥಿಗಳು ಮೊಬೈಲ್ ಗೇಮ್‌ಗಳಲ್ಲಿ ತೊಡಗಿಸಿಕೊಂಡು ಆರೋಗ್ಯಕ್ಕೆ ತಾವೇ ಹಾನಿ ತಂದುಕೊಳ್ಳುತ್ತಿದ್ದಾರೆ ಎಂದು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ತಾರಿಕೊಪ್ಪ ತಿಳಿಸಿದರು.ಡಿ. ೪ರಂದು ಪಟ್ಟಣದ ವಿಶ್ವದರ್ಶನ ಸಂಸ್ಥೆಯ ಸಭಾಭವನದಲ್ಲಿ ವಿಶ್ವದರ್ಶನ ಪದವಿಪೂರ್ವ ಕಾಲೇಜಿನ ವತಿಯಿಂದ ನಡೆದ ವಾರ್ಷಿಕ ಕ್ರೀಡಾಕೂಟ ಖೇಲೋತ್ಸವವನ್ನು ಉದ್ಘಾಟಿಸಿ, ಮಾತನಾಡಿದರು.
ಹೊನ್ನಾವರದಲ್ಲಿ ವಕೀಲರ ದಿನಾಚರಣೆ
ಹೊನ್ನಾವರ: ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದ ವತಿಯಿಂದ ವಕೀಲರ ದಿನಾಚರಣೆ ಕಾರ್ಯಕ್ರಮ ಮಂಗಳವಾರ ನಡೆಯಿತು.ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಬಿ.ಸಿ. ಮಾತನಾಡಿ, ಕಕ್ಷಿದಾರರು ನಮಗೆ ಅನ್ನ ಕೊಡುವ ದೇವರು. ಅವರಿಗೆ ಅನ್ಯಾಯವಾಗದಂತೆ ಸೇವೆ ನೀಡಬೇಕು ಎಂದರು.ವಕೀಲವೃತ್ತಿ ಪ್ರಾರಂಭದಲ್ಲಿ ಏನು ಅಪೇಕ್ಷೆ ಇರುವುದಿಲ್ಲ. ವೃತ್ತಿಯಲ್ಲಿ ಹಿರಿಯರಾದ ಮೇಲೆ ಸೇವೆಗೆ ತಕ್ಕ ಪ್ರತಿಫಲ ಅರಸಿ ಬರುತ್ತದೆ. ವೃತ್ತಿಯನ್ನು ಕೀಳರಿಮೆ ಬಿಟ್ಟು ಗೌರವಿಸಬೇಕು ಎಂದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಈರಣ್ಣ ಹುಣಸಿಕಟ್ಟಿ ಮಾತನಾಡಿ, ವಕೀಲರು ಅಥವಾ ನ್ಯಾಯಾಧೀಶರಾದ ಮಾತ್ರಕ್ಕೆ ಎಲ್ಲ ಕಲಿತಂತಲ್ಲ. ಪ್ರತಿದಿನ, ಪ್ರತಿಕ್ಷಣವೂ ಕಲಿಯುವುದಿರುತ್ತದೆ ಎಂದರು.ವೃತ್ತಿ ಜೀವನದಲ್ಲಿ 50 ವರ್ಷ ಪೂರೈಸಿದ ಹಿರಿಯ ವಕೀಲರಾದ ಆರ್.ಎಸ್. ಕಾಮತ್ ಅವರನ್ನು ಸನ್ಮಾನಿಸಲಾಯಿತು. ಹಿರಿಯ ವಕೀಲ ಆರ್.ಎನ್. ನಾಯ್ಕ ಉಪನ್ಯಾಸ ನೀಡಿದರು. ಸಭಾ ಕಾರ್ಯಕ್ರಮದ ನಂತರ ಸಂಗೀತಾ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ನಂತರ ವಕೀಲ ಮಿತ್ರರಿಂದ ಗದಾಯುದ್ಧ ಯಕ್ಷಗಾನ ಜನಮನ ರಂಜಿಸಿತು.