ಕನ್ನಡಪ್ರಭ ವಾರ್ತೆ ಮಂಡ್ಯ
ಬೆಂಗಳೂರಿನ ವಿ ಅಂಡ್ ವಿ ಅಸೋಸಿಯೇಟ್ಸ್‌ನವರು ಕಂಪನಿಯಿಂದ ಹೊರಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ನಮಗೆ ಕಳೆದ ಮೇ ತಿಂಗಳಿನಿಂದ ಇಲ್ಲಿಯವರೆಗೆ ವೇತನ, ಪಿಎಫ್ ಪಾವತಿಯಾಗಿಲ್ಲ. ಕಂಪನಿಯವರಿಗೆ ಫೋನಾಯಿಸಿದರೆ ಕರೆ ಸ್ವೀಕರಿಸುತ್ತಿಲ್ಲ. ಅವರಿಂದ ಯಾವುದೇ ಉತ್ತರವೂ ಬರುತ್ತಿಲ್ಲ. ಡಿಹೆಚ್‌ಒ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಜಿಲ್ಲಾಧಿಕಾರಿಗಳ ಬಳಿ ಅಳಲು ವ್ಯಕ್ತಪಡಿಸಿದರು.
ನೌಕರರ ಮನವಿ ಸ್ವೀಕರಿಸಿದ ಬಳಿಕ ಡಿಎಚ್‌ಒ ಡಾ.ಜಿ.ಸಿ.ಬೆಟ್ಟಸ್ವಾಮಿ ಅವರನ್ನು ಕಚೇರಿಗೆ ಕರೆಸಿಕೊಂಡ ಜಿಲ್ಲಾಧಿಕಾರಿಗಳು, ಹೊರಗುತ್ತಿಗೆ ನೌಕರರಿಗೆ ೪ ತಿಂಗಳಿಂದ ಸಂಬಳವಾಗಿಲ್ಲ. ಏನು ಕ್ರಮ ವಹಿಸಿದ್ದೀರಿ. ನಿಮಗೆ ೪ ತಿಂಗಳಿಂದ ವೇತನ ಕೊಡದಿದ್ದರೆ ನಿಮ್ಮ ಪರಿಸ್ಥಿತಿ ಹೇಗಿರುತ್ತಿತ್ತು. ಮುಂದಿನ ನಾಲ್ಕೈದು ದಿನಗಳೊಳಗೆ ನೌಕರರಿಗೆ ವೇತನ ಪಾವತಿಯಾಗಬೇಕು. ಮತ್ತೆ ವೇತನ ಸಂಬಂಧ ನೌಕರರು ನನ್ನ ಬಳಿಗೆ ದೂರು ತರಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.ಗುತ್ತಿಗೆ ಕಂಪನಿಯವರೊಂದಿಗೆ ಮಾತುಕತೆ ನಡೆಸಿ ವೇತನ ಮತ್ತು ಪಿಎಫ್ ಹಣದ ಪಾವತಿ ಮಾಡುವಂತೆ ಕ್ರಮ ವಹಿಸುವ ಭರವಸೆ ನೀಡಿದರು. ಆಗ ನೌಕರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಎರಡು ತಿಂಗಳು ವೇತನ ಪಾವತಿಯಾಗುತ್ತದೆ. ಆನಂತರದಲ್ಲಿ ಮತ್ತೆ ವಿಳಂಬವಾಗುವುದು ಮಾಮೂಲಾಗಿದೆ ಎಂದು ಡಾ.ಕುಮಾರ ಅವರ ಗಮನಕ್ಕೆ ತಂದರು.
ಕನ್ನಡಪ್ರಭ ವಾರ್ತೆ ಮಂಡ್ಯಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಸ್ಥೆ ಮಂಡ್ಯ (ಇಸ್ಕಾನ್), ಗೋವರ್ಧನ ಗುರುಕುಲ ಚಾರಿಟೆಬಲ್ ಟ್ರಸ್ಟ್, ಮಂಡ್ಯ ಭಾವಸಾರ ಕ್ಷತ್ರೀಯ ಸಮಾಜ ಹಾಗೂ ಜೈ ಮಾರುತಿ ಸೇವಾ ಟ್ರಸ್ಟ್ ವತಿಯಿಂದ ಸೆ. 4ರಂದು ಶುಕ್ರವಾರ ನಗರದ ವಿಠಲ ಸಮುದಾಯ ಭವನ (ಶ್ರೀ ಪಾಂಡುರಂಗಸ್ವಾಮಿ ದೇವಸ್ಥಾನ)ದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಲಿದೆ ಎಂದು ಇಸ್ಕಾನ್ ಮುಖ್ಯಸ್ಥ ಅನಿಲೇಶ್ವರ್ ಹರಿದಾಸ್ ತಿಳಿಸಿದ್ದಾರೆ.