ಮನೆ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಿ

KannadaprabhaNewsNetwork |  
Published : Sep 27, 2025, 12:02 AM IST
22ಎಚ್‌ ಪಿಟಿ4- ಹೊಸಪೇಟೆಯ ರೋಟರಿ ಕ್ಲಬ್ ಆವರಣದಲ್ಲಿ ಆಯುರ್ವೇದ ದಿನಾಚರಣೆ ಪೂರ್ವಭಾವಿಯಾಗಿ ತಜ್ಞ ಮತ್ತು ಪರಿಣಿತ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಆಯುರ್ವೇದ ಚಿಕಿತ್ಸೆ ಸಲಹೆ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿ, ಆಯುರ್ವೇದ ಕುರಿತು ಜಾಗೃತಿ ಮೂಡಿಸಿದರು. | Kannada Prabha

ಸಾರಾಂಶ

230ಕ್ಕೂ ಅಧಿಕ ಸಾರ್ವಜನಿಕರು ಶಿಬಿರದ ಚಿಕಿತ್ಸೆಯ ಉಪಯೋಗವನ್ನು ಪಡೆದುಕೊಂಡರು.

ಹೊಸಪೇಟೆ: ಆಯುರ್ವೇದದ ಧ್ಯೇಯದಂತೆ ‘ಸರ್ವೇ ಸಂತು ನಿರಾಮಯಾ’ ಅಂದರೆ ಎಲ್ಲರೂ ನಿರೋಗಿಗಳಾಗಿರಲು ಮನೆ ಆಹಾರ ಸೇವನೆಯಿಂದ ಮಹಾ ಆರೋಗ್ಯ ಸಾಧ್ಯವಾಗಲಿದೆ ಎಂದು ಇನ್ನರ್‌ವೀಲ್ ಅಧ್ಯಕ್ಷೆ ನೈಮಿಷಾ ಹೇಳಿದರು.

ನಗರದ ರೋಟರಿ ಕ್ಲಬ್ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್ ಇಲಾಖೆ, ಆಯುಷ್ ಫೆಡರೇಷನ್ ಆಫ್‌ ಇಂಡಿಯಾ ಜಿಲ್ಲಾ ಘಟಕ, ಇನ್ನರ್‌ ವೀಲ್ ಕ್ಲಬ್ ಸಹಯೋಗದಲ್ಲಿ ಆಯುರ್ವೇದ ದಿನಾಚರಣೆ ಪೂರ್ವಭಾವಿಯಾಗಿ ತಜ್ಞ, ಪರಿಣಿತ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ, ಆಯುರ್ವೇದ ಚಿಕಿತ್ಸೆ ಸಲಹೆ, ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಸರ್ಕಾರಿ ಆಯುರ್ವೇದ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಎಚ್. ಗುರುಬಸವರಾಜ, ಆಯುಷ್ ಫೆಡೆರೇಷನ್ ಆಫ್‌ ಇಂಡಿಯಾ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೇದಾರೇಶ್ವರ ದಂಡಿನ್ ಮಾತನಾಡಿದರು. 230ಕ್ಕೂ ಅಧಿಕ ಸಾರ್ವಜನಿಕರು ಶಿಬಿರದ ಚಿಕಿತ್ಸೆಯ ಉಪಯೋಗವನ್ನು ಪಡೆದುಕೊಂಡರು.

ಮುನಿವಾಸುದೇವರೆಡ್ಡಿ, ಪ್ರಸಾದ್ ಬಾಬು, ಶೈಲೇಂದ್ರ ಪ್ರತಾಪ್ ಸಿಂಗ್, ರಾಧಾ ಗುರುಬಸವರಾಜ್, ಚೇತನ್, ಸಿಕಂದರ್, ಹಾಲಮ್ಮ, ಚಂದ್ರಶೇಖರ್ ಶೆಟ್ಟಿ, ಬಳಗಾನೂರು ಮಂಜುನಾಥ, ಸರಸ್ವತಿ ಕೋಟೆ, ಹೇಮಲತಾ, ರೂಪ್ ಸಿಂಗ್ ರಾಥೋಡ್, ಶಿವಶರಣಯ್ಯ, ಆರತಿ ಹಿರೇಮಠ್, ಅಶೋಕ್, ಮಂಜುನಾಥ್ ಹನಸಿ, ಯಶ್ವಂತ್, ಧೀರಜ್ ಇದ್ದರು.

ಉಚಿತ ಆರೋಗ್ಯ ತಪಾಸಣೆ, ಆಯುರ್ವೇದ ಚಿಕಿತ್ಸೆ ಸಲಹೆ, ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ