ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವೇ ಆರೋಗ್ಯ

KannadaprabhaNewsNetwork |  
Published : Oct 20, 2025, 01:04 AM IST
19ಬಿಎಸ್ವಿ01- ಬಸವನಬಾಗೇವಾಡಿ ಪಟ್ಟಣದ ಸಂಕನಾಳ ರಸ್ತೆಯಲ್ಲಿರುವ ಪಾರಂಪರಿಕ ವೈದ್ಯ ಪರಿಷತ್ ಕಾರ್ಯಾಲಯದಲ್ಲಿ ಭಾನುವಾರ ಪಾರಂಪರಿಕ ವೈದ್ಯರು ಧನ್ವಂತರಿ ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಧನ್ವಂತರಿ ಜಯಂತಿ ಆಚರಿಸಿದರು. | Kannada Prabha

ಸಾರಾಂಶ

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ ಸಮುದ್ರ ಮಂಥನದ ಸಮಯದಲ್ಲಿ ಅಮೃತ ಕಲಶದೊಂದಿಗೆ ಪ್ರತ್ಯಕ್ಷರಾಗಿ ಮಾನವ ಕುಲಕ್ಕೆ ಆಯುರ್ವೇದದ ಅಮೂಲ್ಯ ಜ್ಞಾನವನ್ನು ಧನ್ವಂತರಿ ದೇವರು ನೀಡಿದ್ದಾರೆ. ಧನ್ವಂತರಿ ದೇವರು ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವೇ ನಿಜವಾದ ಆರೋಗ್ಯವೆಂದು ಸಾರಿದ್ದಾರೆ ಎಂದು ತಾಳಿಕೋಟಿಯ ಪಾರಂಪರಿಕ ವೈದ್ಯ ಮೊಹಮ್ಮದ ಮಕಾನದಾರ ಹೇಳಿದರು.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ

ಸಮುದ್ರ ಮಂಥನದ ಸಮಯದಲ್ಲಿ ಅಮೃತ ಕಲಶದೊಂದಿಗೆ ಪ್ರತ್ಯಕ್ಷರಾಗಿ ಮಾನವ ಕುಲಕ್ಕೆ ಆಯುರ್ವೇದದ ಅಮೂಲ್ಯ ಜ್ಞಾನವನ್ನು ಧನ್ವಂತರಿ ದೇವರು ನೀಡಿದ್ದಾರೆ. ಧನ್ವಂತರಿ ದೇವರು ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವೇ ನಿಜವಾದ ಆರೋಗ್ಯವೆಂದು ಸಾರಿದ್ದಾರೆ ಎಂದು ತಾಳಿಕೋಟಿಯ ಪಾರಂಪರಿಕ ವೈದ್ಯ ಮೊಹಮ್ಮದ ಮಕಾನದಾರ ಹೇಳಿದರು.ಪಟ್ಟಣದ ಸಂಕನಾಳ ರಸ್ತೆಯ ಪಾರಂಪರಿಕ ವೈದ್ಯ ಪರಿಷತ್ ಕಾರ್ಯಾಲಯದಲ್ಲಿ ತಾಲೂಕು ಪಾರಂಪರಿಕ ವೈದ್ಯರು ಭಾನುವಾರ ಹಮ್ಮಿಕೊಂಡಿದ್ದ ಧನ್ವಂತರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಜಯಂತಿಯು ಆಯುರ್ವೇದ, ನೈಸರ್ಗಿಕ ಚಿಕಿತ್ಸೆ ಮತ್ತು ಯೋಗದ ಸಮಗ್ರ ಆರೋಗ್ಯದ ಹಬ್ಬವಾಗಿದೆ. ಆರೋಗ್ಯವಂತರ ಆರೋಗ್ಯವನ್ನು ಕಾಪಾಡುವದು. ರೋಗಿಗಳ ರೋಗಗಳನ್ನು ಗುಣಪಡಿಸುವುದು, ಆಯುರ್ವೇದದ ಮೂಲ ಮಂತ್ರವಾಗಿದೆ. ಆಯುರ್ವೇದದ ಪ್ರಕಾರ ನಮ್ಮ ದೇಹವು ಪಂಚಮಹಾಭೂತಗಳಾದ ಭೂಮಿ, ಜಲ,ಅಗ್ನಿ, ವಾಯು ಮತ್ತು ಆಕಾಶದಿಂದ ಆಗಿದೆ. ಈ ಮಹಾಭೂತಗಳ ಅಸಮತೋಲನವೇ ರೋಗಕ್ಕೆ ಕಾರಣವಾಗಿದೆ. ಇದು ಸಮತೋಲನವಿದ್ದರೆ ಆರೋಗ್ಯವಾಗಿರುತ್ತೇವೆ ಎಂದು ವಿವರಿಸಿದರು.ಇಂದಿನ ಒತ್ತಡದ ಜೀವನದಲ್ಲಿ ನಮ್ಮ ಆಹಾರ ಪದ್ಧತಿ, ಜೀವನ ಶೈಲಿಯಿಂದಾಗಿ ದೀರ್ಘಕಾಲದ ರೋಗಗಳಿಗೆ ಕಾರಣವಾಗುತ್ತಿದೆ. ಪ್ರಕೃತಿಯೊಂದಿಗೆ ಹೊಂದಾಣಿಕೆ, ಸಾತ್ವಿಕ ಆಹಾರ, ಯೋಗಾಭ್ಯಾಸ, ಧ್ಯಾನ ಮತ್ತು ಮಾನವೀಯತೆಯ ಮೂಲಕ ನಿಜವಾದ ಆರೋಗ್ಯವನ್ನು ಸಾಧಿಸಬಹುದು ಎಂದರು.

ಪಾರಂಪರಿಕ ವೈದ್ಯ ರಿಯಾಜ್‌ ಮಕಾನದಾರ ಮಾತನಾಡಿ, ಪಾರಂಪರಿಕ ವೈದ್ಯ ಪದ್ಧತಿ ಬಗ್ಗೆ ಯಾರೂ ಭಯ ಭೀತರಾಗಬಾರದು. ಇದರಿಂದ ಯಾವುದೇ ದುಷ್ಪರಿಣಾಮವಿಲ್ಲ. ನಿಸರ್ಗದಲ್ಲಿ ಸಿಗುವ ವನಸ್ಪತಿಗಳಿಂದ ನಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು ಎಂದು ಹೇಳಿದ ಅವರು ಅಡಸೋಗೆ ತಪ್ಪಲಿನಿಂದ ಕೆಮ್ಮು, ಕುಪಿಸೊಪ್ಪಿನಿಂದ ಕಫ್ ನಿವಾರಣೆ ಮಾಡಬಹುದು ಎಂದು ಹೇಳಿದರು. ಅಖಿಲ ಭಾರತ ಪಿಂಜಾರ್‌ ಸಮಾಜದ ಅಧ್ಯಕ್ಷ ಖಾಜಂಬರ ನದಾಫ ಮಾತನಾಡಿ, ಪಾರಂಪರಿಕ ವೈದ್ಯ ಪದ್ಧತಿ ತಲೆ ತಲಾಂತರದಿಂದ ದೇಶದಲ್ಲಿದೆ. ಇಂದು ರಾಸಾಯನಿಕ ಔಷಧಗಳಿಗೆ ಹೆಚ್ಚು ಜನರು ಮೊರೆ ಹೋಗುವದನ್ನು ಕಾಣುತ್ತೇವೆ. ನಿಸರ್ಗದಲ್ಲಿ ಸಿಗುವ ಕೆಲ ಗಿಡ-ಮೂಲಿಕೆಗಳಿಂದ ಪಾರಂಪರಿಕ ವೈದ್ಯರು ಔಷಧ ತಯಾರಿಸಿ ಸುಮಾರು 500ಕ್ಕೂ ಹೆಚ್ಚು ರೋಗಗಳನ್ನು ಗುಣಮುಖ ಮಾಡುತ್ತಾರೆ. ನನಗೆ ಸಕ್ಕರೆ ಕಾಯಿಲೆ ಇತ್ತು. ಪಾರಂಪರಿಕ ವೈದ್ಯರಿಗೆ ತೋರಿಸಿದಾಗ ಅವರು ನೀಡಿದ ಔಷಧದಿಂದ ಈಗ ಸಕ್ಕರೆ ರೋಗ ನಿಯಂತ್ರಣಕ್ಕೆ ಬಂದಿದೆ ಎಂದು ತಮ್ಮ ಅನುಭವ ಹಂಚಿಕೊಂಡರು.ಪಾರಂಪರಿಕ ವೈದ್ಯರಾದ ಬಸವರಾಜ ಹೆಗಡ್ಯಾಳ ಧನ್ವಂತರಿ ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಪಾರಂಪರಿಕ ವೈದ್ಯ ಸಿದ್ದನಗೌಡ ಬಿರಾದಾರ, ಸೇಪಾನ ಮುಜಾವರ ಕೆಲ ವನಸ್ಪತಿ ಔಷಧಗಳ ಮಹತ್ವ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪಾರಂಪರಿಕ ವೈದ್ಯರಾದ ರಿಯಾಜಅಹ್ಮದ ಮಕಾನದಾರ, ಗಪೂರಅಲಿಶಾ ಮಕಾನದಾರ, ಬೀರಪ್ಪ ಅಂಬಳನೂರ, ಅಮೋಘಸಿದ್ದ ಒಡೆಯರ, ಕರುಣಾ ಹಿರೇಮಠ, ತಸ್ಲಿಂ ಮುಜಾವರ, ಮುತ್ತು ಹೆಗಡ್ಯಾಳ, ಅಸ್ಲಂ ಮುಜಾವರ ಇತರರು ಇದ್ದರು. ಈ ಸಂದರ್ಭದಲ್ಲಿ ಹಿರಿಯ ಪಾರಂಪರಿಕ ವೈದ್ಯರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೀಸರ್ ಸೋರಿಕೆ: ತಾಯಿ-ಮಗು ದುರ್ಮರಣ
ದೇವತೆಗಳ ಆರಾಧನೆ ಮೊಕ್ಷಸಾಧನೆ ಮೆಟ್ಟಿಲಿದ್ದಂತೆ: ಶಿರೂರು ಶ್ರೀಗಳು