ಕನ್ನಡಪ್ರಭ ವಾರ್ತೆ ಕಾರ್ಕಳ
ಅವರು ಶನಿವಾರ ಕಾರ್ಕಳ ಎಸ್‌ವಿಟಿ ಸಭಾಂಗಣದಲ್ಲಿ ಆಯೋಜಿಸಲಾದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮವನ್ನು ಕ್ರೀಡಾ ಭಾರತಿ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ಹಾಗೂ ನಿರಂತರ ಯೋಗ ಶಿಕ್ಷಣ ಸಂಸ್ಥೆ ಸಂಯುಕ್ತವಾಗಿ ಆಯೋಜಿಸಿತ್ತು. ಸುಮಾರು 40 ವರ್ಷಗಳಿಂದ ಯೋಗವನ್ನು ಜಗತ್ತಿನಾದ್ಯಂತ ಪರಿಚಯಿಸಲು ಸತ್ಯಾನಂದ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ(ಎಸ್‌ಪಿವೈಎಸ್‌ಎಸ್) ಶ್ರಮಿಸುತ್ತಿದೆ ಎಂದು ಅವರು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕ ಮೋಹನ್ ದಾಸ್ ನಾಯಕ್ ಅವರನ್ನು ಸನ್ಮಾನಿಸಲಾಯಿತು. ನಂತರ ಯೋಗ ಶಿಕ್ಷಕ ನರೇಂದ್ರ ಕಾಮತ್ ತರಗತಿಯನ್ನು ನಡೆಸಿಕೊಟ್ಟರು.ಜಿಲ್ಲಾ ಕ್ರೀಡಾ ಭಾರತಿ ಸಂಚಾಲಕ ಪ್ರಸನ್ನ ಶೆಣೈ ಸ್ವಾಗತಿಸಿದರು. ನಗರ ಘಟಕ ಅಧ್ಯಕ್ಷ ಶಿವಾನಂದ ಕಾಮತ್ ವಂದಿಸಿದರು.
ಈ ಸಂದರ್ಭದಲ್ಲಿ ಎಸ್‌ಪಿವೈಎಸ್‌ಎಸ್‌ನ ನಗರ ಸಂಚಾಲಕ ಸಂಚಾಲಕಿ ಶ್ವೇತಾ ಶೆಣೈ, ಯೋಗ ಶಿಕ್ಷಕ ವಿನಾಯಕ್ ಕುಡ್ವ, ಸಂತೋಷ್, ನಯನ ಪ್ರಭು ಹಾಗೂ ರವಿಕಲಾ ವಿ. ಹೆಗ್ಡೆ ಉಪಸ್ಥಿತರಿದ್ದರು.