ಕನ್ನಡಪ್ರಭ ವಾರ್ತೆ ತುಮಕೂರು
ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ಕೊರಟಗೆರೆ ತಾಲೂಕಿನ ದಾಸಲುಕುಂಟೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸೈಲೆಂಟ್ ಕಿಲ್ಲರ್ ಎಂದೇ ಕರೆಯಲಾಗುವ ಕಾಯಿಲೆಗಳಾದ ಬಿಪಿ, ಶುಗರ್ ಕಾಯಿಲೆಯ ಜೊತೆಗೆ ಇತರ ಆರೋಗ್ಯ ಸಮಸ್ಯೆಗಳು ಸಾಮಾನ್ಯವಾಗಿ ಕಂಡು ಬರಬಹುದಾದ ಸಾಧ್ಯತೆಗಳಿರುವುದರಿಂದ ಉಚಿತ ಆರೋಗ್ಯ ತಪಾಸಣೆಯ ವೇಳೆ, ರೋಗಲಕ್ಷಣಗಳನ್ನು ಗ್ರಾಮೀಣ ಪ್ರದೇಶದ ಜನ ಪತ್ತೆ ಹಚ್ಚಿಕೊಳ್ಳಬಹುದು ಎಂದು ಡಾ.ಕೆ.ಬಿ. ಲಿಂಗೇಗೌಡ ಅವರು ಗ್ರಾಮಾಂತರ ಪ್ರದೇಶದ ಜನರಿಗೆ ಆರೋಗ್ಯ ಜಾಗೃತಿ ವಹಿಸಿಕೊಳ್ಳುವಂತೆ ಮನವಿ ಮಾಡಿದರು.ಸಾಹೇ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಎಂ.ಝಡ್. ಕುರಿಯನ್ ಮಾತನಾಡಿ, ಪುರುಷರಾಗಿರಲಿ ಅಥವಾ ಮಹಿಳೆಯ ರಾಗಿರಲಿ 30 ದಾಟಿದ ಬಳಿಕ, ಕೆಲವೊಂದು ಆರೋಗ್ಯಕ್ಕೆ ಸಂಬಂಧಪಟ್ಟ ಪರೀಕ್ಷೆಗಳನ್ನು ವರ್ಷಕ್ಕೆ ಒಮ್ಮೆಯಾದರೂ ಕಡ್ಡಾಯವಾಗಿ ಮಾಡಿಸಿಕೊಂಡರೆ, ಏನೆಲ್ಲಾ ಕಾಯಿಲೆಗಳಿಂದ ವ್ಯಕ್ತಿ ಬಳಲುತ್ತಿದ್ದಾರೆ ಎನ್ನುವುದನ್ನು ಪತ್ತೆಹಚ್ಚಲು ನೆರವಾಗುತ್ತದೆ ಎಂದರು.
ಆರೋಗ್ಯ ಶಿಬಿರದಲ್ಲಿ ವೈದ್ಯರಾದ ಡಾ. ಭರತೇಶ, ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಘವೇಂದ್ರ ಮತ್ತು ದಾಸಲುಕುಂಟೆ ಗ್ರಾಮದ ಗುರುಶಾಂತಪ್ಪ, ನವೀನ್, ಪ್ರಸನ್‌ಕುಮಾರ್ ಸೇರಿದಂತೆ ಪಂಚಾಯಿತಿಯ ಪ್ರಮುಖರು ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.
ಶಿಬಿರದಲ್ಲಿ 10 ಮಂದಿ ತಜ್ಞ ವೈದ್ಯರ ತಂಡ ಭಾಗವಹಿಸಿ, ಸ್ತ್ರೀ ಹಾಗೂ ಪ್ರಸೂತಿ, ಚರ್ಮರೋಗ, ಮಕ್ಕಳ ರೋಗಗಳು, ಮನೋವೈದ್ಯಕೀಯ ನೆರವು, ಕಿವಿ-ಮೂಗು ಮತ್ತುಗಂಟಲು ಹಾಗೂ ಇತರೆ ಸಾಮಾನ್ಯ ಕಾಯಿಲೆಗಳ ಬಗ್ಗೆ ತಪಾಸಣೆ ನಡೆಸಿತು. ಶಿಬಿರದಲ್ಲಿ 200 ಕ್ಕೂ ಹೆಚ್ಚು ಮಂದಿಗೆ ವೈದ್ಯಕೀಯಚಿಕಿತ್ಸೆ ಮತ್ತು ಔಷೋಧಪಚಾರ ನೀಡಲಾಯಿತು.ಆರೋಗ್ಯ ಶಿಬಿರಕ್ಕೆ ಬಂದಿದ್ದ ಗ್ರಾಮದ ರಂಗಮ್ಮ ಮಾತನಾಡಿ, ದೂರದಲ್ಲಿರುವ ನಗರಗಳಿಗೆ ಹೋಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗಿರಲಿಲ್ಲ. ಶಿಬಿರದಲ್ಲಿ ಅನೇಕ ರೀತಿಯ ರೋಗಗಳಿಗೆ ಸ್ಥಳದಲ್ಲಿಯೇ ಚಿಕಿತ್ಸೆ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ನೀಡುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.