ಕೊಪ್ಪಳ: ನಗರದ ಅಗಸ್ತ್ಯ ಆಯುರ್ವೇದ ಮಹಾವಿದ್ಯಾಲಯದಲ್ಲಿ ಸ್ವಸ್ಥ ವೃತ್ತ ವಿಭಾಗದಿಂದ 12ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.
ಪ್ರಾಂಶುಪಾಲ ಡಾ.ಮಹಾಂತಗೌಡ ಬಿರಾದಾರ ಮಾತನಾಡಿ, ಸತ್ವ, ಆತ್ಮ ಮತ್ತು ಶರೀರದ ಸಮತೋಲನ ಕಾಪಾಡಲು ಯೋಗದ ಎಲ್ಲ ಅಂಗಗಳ ಪರಿಪಾಲನೆ ಅತ್ಯವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಸ್ವಸ್ಥವೃತ್ತ ವಿಭಾಗದ ಮುಖ್ಯಸ್ಥ ಡಾ.ಪ್ರಭು ಸಿ.ನಾಗಲಾಪೂರ, ಸಹಪ್ರಾಧ್ಯಾಪಕ ಡಾ. ಶಿವಬಸಯ್ಯ ಹಿರೇಮಠ ಹಾಗೂ ಯೋಗ ತರಬೇತಿದಾರ ಡಾ. ಶ್ರೀದೇವಿ ಬಡಿಗೇರ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆ ನೀಡಿ ಯೋಗದ ಮಹತ್ವ ವಿವರಿಸಿದರು.ಯೋಗ ಸ್ಪರ್ಧೆ,ಯೋಗ ರಸಪ್ರಶ್ನೆ, ಯೋಗ ಜಾಥಾ, ಯೋಗ ಮಾದರಿ ತಯಾರಿಕೆ ಹಾಗೂ ಯೋಗ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಅಗಸ್ತ್ಯ ಆಯುರ್ವೇದ ಮಹಾವಿದ್ಯಾಲಯದ ಅಧ್ಯಕ್ಷ ಡಾ.ಸಂಗಮೇಶ ಹಿರೇಮಠ, ಕಾರ್ಯದರ್ಶಿ ವಾಣಿ ಕೆ.ಎಂ, ಪ್ರಾಧ್ಯಾಪಕ ಡಾ. ಚಂದ್ರಕಾಂತ ಹಾಗೂ ಡಾ. ಎಂ.ಆರ್.ಕುಲಕರ್ಣಿ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಕೋಮಲ್ ಮತ್ತು ಖದೀಜಾ ನಿರೂಪಿಸಿದರು. ಡಾ. ಶಿವಬಸಯ್ಯ ಹಿರೇಮಠ ಸ್ವಾಗತಿಸಿದರು. ಡಾ. ಪ್ರಭು ಸಿ. ನಾಗಲಾಪೂರ ವಂದಿಸಿದರು.